
ತುಮಕೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರ. ಪುಸ್ತಕಗಳನ್ನು ಪ್ರಿಂಟ್ ಮಾಡಲು ಈಗಾಗಲೇ ೩೪ ಕೋಟಿ ಹಣ ಖರ್ಚಾಗಿದೆ. ಮತ್ತೆ ಪರಿಷ್ಕರಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ಬಿಜೆಪಿಯ ದುರಾಡಳಿತವನ್ನು ಖಂಡಿಸುತ್ತೇನೆ. ನಾಗೇಶ್ ಅವರ ತಿಳುವಳಿಕೆ ಇಲ್ಲದ ಅವಿವೇಕತನದ ವರ್ತನೆಯಿಂದ ಮಕ್ಕಳಿಗೆ ತೊಂದರೆಯಾಗಿದೆ. ಬಸವಣ್ಣ ,ಕುವೆಂಪು, ನಾರಾಯಣ ಗುರು,ಅಂಬೇಡ್ಕರ್ ಹಾಗೂ ಸ್ವತಂತ್ರ ಹೋರಾಟ ಭಗತಸಿಂಗ್ ವಿಚಾರಗಳನ್ನು ಕೈ ಬಿಟ್ಟಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ್ ತಿಳಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಸುದ್ದಿಗೋಷ್ಠಿ ಮಾತನಾಡಿ ೧೦ ಜನರ ಕಮಿಟಿಯಲ್ಲಿ ೯ಜನ ಬ್ರಾಹ್ಮಣರಿದ್ದಾರೆ. ಹಿಂದಿನ ಮನುತತ್ವಗಳನ್ನು ತುರುಕಬೇಕೆಂಬ ಹುಚ್ಚಲ್ಲಿ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿದ್ದಾರೆ. ಈ ಹಿನ್ನಲೆ ಪ್ರತಿಭಟನೆ ಮಾಡಲು ಬಂದ ಅಮಾಯಕ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಜ್ಯಾದ್ಯಂತ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ.
ಕೂಡಲೇ ಬೊಮ್ಮಾಯಿ ಅವರು ಸಚಿವ ನಾಗೇಶ್ ನನ್ನು ಸಂಪುಟದಿAದ ವಜಾ ಮಾಡಬೇಕು. ಹಿರಿಯ,ಅನುಭವ ಸಾಹಿತಿಗಳ ಸಲಹೆ ಪಡೆದು ಪುಸ್ತಕ ಪರಿಷ್ಕರಣೆ ಮಾಡಬೇಕು. ರೋಹಿತ್ ಚಕ್ರತೀರ್ಥ ಒಬ್ಬ ಟ್ಯೂಷನ್ ಮೇಷ್ಟ್ರು.. ಶಿಕ್ಷಣ ಸಚಿವರಿಗೆ ಸಿ.ಇ.ಟಿ.ಅಂದ್ರೇನು ಐ.ಐ.ಟಿ.ಅಂದ್ರೇನು ಅನ್ನೋದೇ ಗೊತ್ತಿಲ್ಲಾ..? ಚಕ್ರತೀರ್ಥನನ್ನ ಸಿಇಟಿ ಪ್ರೋಫೆಸರ್ ಅಂದುಬಿಟ್ಟಿದ್ರು. ಆಗ ದೇಶನೇ ನಕ್ಕಿಬಿಡ್ತು ತಿಪಟೂರು ಕಡೆ ನೋಡಿ.. ಇಂಥ ಒಬ್ಬ ಶಿಕ್ಷಣ ಸಚಿವ ಈ ತಾಲ್ಲೂಕಿಂದ ಬಂದಿದ್ದಾನೆ ಅಂತಾ. ಇಂತಹ ವಿಚಾರಗಳಿಂದ ನಮ್ಮ ತಾಲ್ಲೂಕು ತಲೆ ತಗ್ಗಿಸುವಂತೆ ಮಾಡಿದೆ ಎಂದು ಸಚಿವ ಬಿ.ಸಿ.ನಾಗೇಶ್ ವಿರುದ್ದ ತಿಪಟೂರಿನಲ್ಲಿ ಲೋಕೇಶ್ವರ್ ವಾಗ್ದಾಳಿ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: https://youtu.be/i__EwcAY8CA

More Stories
ಕ್ರೀಡಾಕೂಟದಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ
ಸಾವಿರಾರು ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ.
ಇದು ರಸ್ತೆಯೋ ಕೆಸರುಗದ್ದೆಯೋ ಗ್ರಾಮಸ್ಥರ ಪ್ರಶ್ನೆ…?