
ತುಮಕೂರು: ಅಂಗನವಾಡಿ, ಬಿಸಿಊಟ, ಆಶಾ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಅಂಗನವಾಡಿ, ಬಿಸಿಊಟ, ಆಶಾ ನೌಕರರು ಸಿಐಟಿಯು ನೇತೃತ್ವದಲ್ಲಿ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಕಛೇರಿ ಎದುರು ಧರಣಿಗೆ ಜಮಾವಣೆಗೊಂಡಾಗ ಪ್ರತಿಭಟನಕಾರರನ್ನು ಪೋಲಿಸರು ಧರಣಿಗೆ ಅವಕಾಶ ನೀಡದ ಕಾರಣ ನಗರದ ಟೌನ್ ಹಾಲ್ ಬಳಿ ಧರಣಿ ಮಾಡಿದ ಪ್ರತಿಭಟನೆಯನ್ನು ಹಮ್ಮಿಕೊಮಡಿದ್ದರು.
ಅಂಗನವಾಡಿ ಬಿಸಿಊಟ, ಆಶಾ, ನೌಕರರಿಗೂ ಮುಟ್ಟಿನ ರಜೆ ನೀಡಬೇಕು. 56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ. 2018 ರಿಂದ ಅಂಗನವಾಡಿ, ಬಿಸಿಊಟ ನೌಕರರಿಗೆ ಕೇಂದ್ರ ಸರಕಾರ ವೇತನ ಹೆಚ್ಚಳ ಮಾಡಲಿಲ್ಲ, ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700 ರೂ., ಸಹಾಯಕಿಗೆ 1350 ರೂ ಮಾತ್ರ ನೀಡುತ್ತಿದೆ. 2009 ರಿಂದ ಬಿಸಿಊಟ ನೌಕರಿಗೆ ಕೇವಲ 600 ರೂಗೆ ದುಡಿಸಲಾಗುತ್ತಿದೆ ಆದ್ದರಿಂದ ಕೇಂದ್ರ ಸರಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದ. ಕಾರ್ಯ ಸಾಧುವಲ್ಲದ ಎಫ್‌ಆರ್‌ಎಸ್ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ ಎಫ್‌ಆರ್‌ಎಸ್ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು ಐಸಿಎಸ್, ಬಿಸಿಯೋಟ ನೌಕರರನ್ನು ಖಾಯಂಗೊಳಸಿಬೇಕು. 2018 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ-ಪದಾರ್ಥಗಳನ್ನು ನೀಡಬೇಕು. ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ರಾಜ್ಯ ಕಾರ್ಯಧರ್ಶಿ ಮುನಿರಾಜು, ಸಿಪಿಐ.ಎಂ. ಜಿಲ್ಲಾ ಕಾರ್ಯಧರ್ಶಿ, ಅಂಗನವಾಡಿ ನೌಕರರ ಸಂಘದ ರಾಜ್ಯ ಖಜಾಂಚಿ ಜಿ.ಕಮಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಸೇರಿದಂತೆ ಸಿಐಟಿಯು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಅಶಾ ಕಾರ್ಯಕರ್ತೇಯರ ಸಂಘದ ಪದಾಧಿಕಾರಿಗಳು ಸೇರಿದಂತೆ ಚಿತ್ರದುರ್ಗ, ಶಿವಮೊಗ್ಗ. ದಕ್ಷಿಣ ಕನ್ನಡ, ಬಳ್ಳಾರಿ. ವಿಜಯನಗರ, ಉಡುಪಿ ಜಿಲ್ಲೆಗಳ ಅಂಗನವಾಡಿ. ಬಿಸಿಊಟ, ಅಶಾ ಕಾರ್ಯಕರ್ತರು ಭಾಗವಹಿಸಿದ್ದಾರೆ.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್