web stats

Madhugirinews

#1NewsofMadhugiri

BIG NEWS ತುಮಕೂರು ಪೊಲೀಸರಿಂದ ಸರಣಿ ಭೇಟೆ

ಕಳ್ಳತನ 3ಆರೋಪಿಗಳಿಂದ 22 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ತುಮಕೂರು: ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ ಅಂತರ್ ಜಿಲ್ಲಾ 3ಜನ ಆರೋಪಿತರುಗಳ ಬಂಧಿಸಿ, ಆರೋಪಿಗಳಿಂದ ಸುಮಾರು 22 ಲಕ್ಷದ ಅರು ಸಾವಿರದ ಎರಡು ನೂರು ಮೌಲ್ಯದ 218.594 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆ ಸರ್ಕಲ್ ಅನ್ನಪೂರ್ಣ ಟಿ.ಕೆ. ಕೋಂ ಲೇಟ್ ರಂಗನಾಥ ಎಂಬುವವರ ಮನೆಯ ಬೀರುವಿನಲ್ಲಿದ್ದ ಸುಮಾರು 90 ಸಾವಿರ ಮೌಲ್ಯದ ಮೌಲ್ಯದ ಚಿನ್ನ, ನಗದು ಕಳ್ಳತನವಾಗಿರುವ ಬಗ್ಗೆ ಅ 7ರಂದು ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ ಮೇರೆಗೆ ತನಿಖೆ ಕೈಗೊಂಡ ಚಿಕ್ಕನಾಯಕನಹಳ್ಳಿ ಸಿಪಿಐ ನೇತೃತ್ವದ ತಂಡ ಎಫ್.ಕೆ.ನದಾಫ್ ಹಾಗೂ ಸಿ.ಪಿ.ಐ. ಪಿ.ಆರ್. ಜನಾರ್ಧನ್ ನೇತೃತ್ವದ ಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದಾಗ ಚಿತ್ರದುರ್ಗ ಜಿಲ್ಲೆಯ ಕೃಷ್ಣಮೂರ್ತಿ ಬಿನ್ ನಾಗರಾಜಪ್ಪ, 28 ವರ್ಷ, ಶ್ರೀಧರ ಬಿನ್ ಗಜೇಂದ್ರ, 28 ವರ್ಷ, ಮಂಜುನಾಥ ಬಿನ್ ಲೇಟ್ ಕೃಷ್ಣಮೂರ್ತಿ, 35 ವರ್ಷ, ಬಂಧಿಸಿದ್ದು ಮಾಲು ಸಹಿತ ಬಂಧಿಸಿದ್ದಾರೆ.

ಸದರಿ ಆರೋಪಿಗಳು ಒಟ್ಟು ಹಂದನಕೆರೆ ಪೊಲೀಸ್ ಠಾಣೆಯ 2 ಪ್ರಕರಣಗಳು, ಹೊಸದುರ್ಗ ಪೊಲೀಸ್ ಠಾಣೆ 2 ಪ್ರಕರಣಗಳು ಹಾಗೂ 1 ಅರಸೀಕೆರೆ ಪೊಲೀಸ್ ಠಾಣೆಯ, ಸೇರಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.

14 ಲಕ್ಷ ಮೌಲ್ಯದ ಆಭರಣ ವಶಕ್ಕೆ
ತುಮಕೂರು: ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಭಗವತಿ ಭಗಮಾಲಿನಿ ದೇವಸ್ಥಾನದ ಬಾಗಿಲನ್ನು ನ 16 ರಂದು ಹೊಡೆದು ಒಳ ಹೋಗಿ ಸುಮಾರು ರೂ 14,25,000ರೂ ಮೌಲ್ಯದ 14ಳಿ ಕೆ.ಜಿ ತೂಕದ ಬೆಳ್ಳಿ ವಡವೆಗಳು, ಸುಮಾರು 20 ಸಾವಿರ ನಗದು ಹಣವನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಜಿ.ಎಸ್ ಯೋಗೀಶ್ ಬಿನ್ ಶಿಲ್ಪಾಚಾರ್. 28 ವರ್ಷ, ಜಿ.ಎಸ್ ನವೀನ್ ಬಿನ್ ಸಿದ್ದಪ್ಪ 27 ವರ್ಷ ಎಂಬ ಆರೋಪಿಗಳನ್ನು ಬಂಧಿದ್ದು ಆರೋಪಿಗಳು ಶ್ರೀ ಭಗವತಿ ಭಗಮಾಲಿನಿ ದೇವಸ್ಥಾನದಲ್ಲಿ ಕಳ್ಳತನದ ಜತೆಗೆ ಕುದೂರು, ಶ್ರೀರಂಗಪಟ್ಟಣ ಗ್ರಾಮಾಂತರ, ಅರಸೀಕೆರೆ ಗ್ರಾಮಾಂತರ, ಬೇಲೂರು ಠಾಣಾ ಸರಹದ್ದಿನ ದೇವಸ್ಥಾನ ಕಳ್ಳತನ ಮಾಡಿದ್ದಾರೆ ಎಂದು ವಿಚಾರವೇಳೆ ತಿಳಿದು ಬಂದಿದೆ. ಆರೋಪಿಗಳಿಂದ 33 ಲಕ್ಷ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ವಡವೆಗಳು ಹಾಗೂ ಒಂದು ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.

ಮನೆ ಕಳ್ಳತನ ಮಾಡುತ್ತಿದ್ದ 3 ಆರೋಪಿಗಳ ಬಂಧನ
ತುಮಕೂರು: ಹೇಮಲತಾ ಎಂಬ ಮಹಿಳೆಯು ತನ್ನ ವ್ಯಾನಿಟಿ ಬ್ಯಾಗಿನಲ್ಲಿ ವಡವೆಗಳನ್ನು ಒಟ್ಟು ರಾತ್ರಿ ಮಲಗುವಾದ ನೋಡಿದಾಗ ಕಾಣೆಯಾಗಿದ್ದು ಮನೆಯ ಕೆಲಸಕ್ಕೆ ಬಂದಿದ್ದ ಶಂಕರಬಾಬು, ಗುರುರಾಜ, ಮನೋಜ್ ಎಂಬುವರ ವಿರುದ್ಧ ದೂರು ನೀಡಿದ್ದರು.

ದೂರಿನ ಮೇರೆಗೆ ತನಿಖೆ ಮಾಡಿದ ತಿಪಟೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿ ಕುಮಾರ್ ಎ ರವರ ನೇತೃತ್ವದಲ್ಲಿ ಶಂಕರಬಾಬು, ಗುರುರಾಜ, ಮನೋಜ್ ಎಂಬ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಒಟ್ಟು ಸುಮಾರು 9 ಲಕ್ಷ ರೂ ಬೆಲೆಬಾಳುವ ಸುಮಾರು 90 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.

5 ಪೆಡ್ಲರ್‌ಗಳ ಬಂಧನ; 1ಲಕ್ಷ ಮೌಲ್ಯದ ಎಂಡಿಎAಎ ವಶಕ್ಕೆ

ತುಮಕೂರು: ನಿಷೇದಿತ ಮಾದಕ ವಸ್ತುಗಳನ್ನು ಹೊರರಾಜ್ಯಗಳಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದು ತುಮಕೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸಿದ 05 ಜನ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ನಗರ ಮತ್ತು ಹೊರವಲಯದಲ್ಲಿ ಮತ್ತು ಶಾಲಾ ಕಾಲೇಜ್‌ಗಳ ಸಮೀಪದಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದಂದೆಕೋರರ ಪತ್ತೆಗಾಗಿ ಬಲೆಬೀಸಿದ ಪೊಲೀಸರು ಒಟ್ಟು 5ಜನ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 1ಲಕ್ಷ ಮೌಲ್ಯದ ಎಂಡಿಎAಎ ಎಂಬ ಮಾದಕ ವಶ್ತುವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಮೂಲದ ಆಯಿಷಾ @ ಅಲೈನಾ ಬಿನ್ ಮಹಮ್ಮದ್ ರಿದ್ವಾನ್, ವೇಣುರಾಜು ಬಿನ್ ಸಿದ್ದರಾಜು, ರಾಕೇಶ್ ಬಿನ್ ಚಿದಾನಂದ್, ತುಮಕೂರು ಮೂಲದ ಸೈಯದ್ ಸಖ್ಲೇನ್ ಬಿನ್ ಸೈಯದ್ ರಹಮತ್, ಸಲ್ಮಾನ್ @ ಡವ್ ಬಿನ್ ಪಾಷಾಜಾನ್,28 ವರ್ಷ ಎಬ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 1 ಲಕ್ಷ ಬೆಲೆ ಬಾಳುವ 23ಗ್ರಾಂಎAಡಿಎAಎ ಎಂಬ ಮಾದಕ ವಸ್ತುವನ್ನು 2 ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದಾರೆ. ಕಾಲೇe ಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್ಗಳಲ್ಲಿ ಮಾದಕ ವಸ್ತುಗಳನ್ನು ಮಾರುತ್ತಿರುವ ಬಗ್ಗೆ ಅಥವಾ ಅನುಮಾನ ಬಂದಲ್ಲಿ ತಕ್ಷಣ 112 ಗೆ ಕರೆಮಾಡಿ ನಶೆ ಮುಕ್ತ ತುಮಕೂರು ಮಾಡಲು ಸಹಕರಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.

You may have missed