web stats

Madhugirinews

#1NewsofMadhugiri

ವೀಕೆಂಡ್ ವಿತ್ ಮ್ಯಾಂಗೋ ಟ್ಯೂರ್ ಇನ್ ಮಧುಗಿರಿ

ಭಾನುವಾರ ಬಂತೆAದರೆ ಸಾಕು ಬೆಂಗಳೂರಿನಿAದ ನೂರಾರು ಐಟಿ ಉದ್ಯೂಗಿಗಳು ಸುಡು ಬಿಸಿಲಕಿನಲ್ಲಿ ಬೆವರು ಸುರಿಸುತ್ತಾ ತೋಟವೆಲ್ಲಾ ಸುತ್ತಾಡಿ ಮಲ್ಲಿಕಾ, ಬಾದಮಿ, ರಸಪೂರಿ, ಮಲಗೋಬ ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣು ಕಿತ್ತು ಖರೀಧಿಸಲು ವೇದಿಕೆ ಸಿದ್ಧವಾಗಿದೆ. ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೊಬಳಿಯ ದೊಡ್ಡಮಾಲೂರು ಗ್ರಾಮದ ಹೊರವಲಯದಲ್ಲಿರುವ ರೈತ ಅಂಜಿನಪ್ಪ ಹಾಗೂ ಅರುಣ ಎಂಬುವವರ ಸುಮಾರು 40 ಎಕರೆ ಮಾವಿನ ತೋಟದಲ್ಲಿ ಈ ಬಾರಿ ಮ್ಯಾಂಗೋ ಪಿಕ್ಕಿಂಗ್ ಟೂರಿಸಂ ನಡೆಯಲಿದೆ.ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ವತಿಯಿಂದ ಈ ಬಾರಿ ಮ್ಯಾಂಗೋ ಟೂರ್ ನಡೆಯಲಿದ್ದು ಬರುವ ಪ್ರತಿ ಪ್ರವಾಸಿಗಳ ಕನಿಷ್ಠ 6ಕೆಜಿ ಮಾವು ಖರೀಧಿಸಬೇಕೆಂಬ ಷರತ್ತು ವಿಧಿಸಲಾಗಿತ್ತು, ಆದರೆ ಇಲ್ಲಿಗೆ ಬಂದ ಗ್ರಾಹಕರು 30 ರಿಂದ 40 ಕೆಜಿ ಖರೀಧೀಸಿದರು, ಇದೇ ವೇಳ ಗ್ರಾಹಕರು ತಮ್ಮ ಮಕ್ಕಳನ್ನು ವಿವಿಧ ಬಗೆಯ ಮಾವಿನ ತಳಿಗಳ ಪರಿಚಯ ಮಾಡಿಸಿದಲ್ಲದೆ, ತಮಗೆ ಇಷ್ಟ ಬಂದ ಜಾತಿಯ ಮಾವನ್ನು ಕೇಳಿ ಖರೀಸಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿದೇರ್ಶಕ ವಿಎಸ್ ವಿಶ್ವನಾಥ್ ಗೌಡ,

ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ನಿಗಧಿಪಡಿಸಿದ ಧರವೇ ಇಲ್ಲೆ ಅಂತಿಮ್ಮವಾಗಿದ್ದು, ಇಲ್ಲಿಗೆ ಬರುವ ಗ್ರಾಹಕರು ಚೌಕಾಸಿ ಮಾಡುವಂತಿಲ್ಲಾ, ಪ್ರತಿ ವರ್ಷ ಮಾವು ಖರೀಧಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅಪ್ಪಟ ಕುರಿ ಹಾಗೂ ಕೊಟ್ಟಿಗೆ ಗೊಬ್ಬರ ಬಳಸಿದ್ದು ರಸಾಯಿನಿಕ ಮುಕ್ತ ಮಾವಿನಹಣನ್ನು ರೈತರಿಂದ ನೇರವಾಗಿ ಗ್ರಾಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುವುದು ಉತ್ತಮ, ವಾರಾಂತ್ಯದಲ್ಲಿ ತುಸು ನೆಮ್ಮದಿಯ ವಾತವರಣದಲ್ಲಿ ಬೆರೆಯಲು ಇಂತಹ ತೋಟಗಳಿಗೆ ಬಂದು ತಮಗಿಷ್ಟವಾದ ಹಣ್ಣು ಕೊಳ್ಳುವುದೇ ಲೇಸು ಎನ್ನುತ್ತಾರೆ ಇಲ್ಲಿಗೆ ಬರುವ ಗ್ರಾಹಕರು.

ಆನ್‌ಲೈನ್‌ನಲ್ಲೂ ಲಭ್ಯ ಮಾವು

ಮ್ಯಾಂಗೋ ಬೋರ್ಡ್ ಹಾಗೂ ಅಂಚೆ ಇಲಾಖೆಯ ಸಹಕಾರದೊಂದಿಗೆ ಪೋಸ್ಟ್ ಡೆಲಿವೆರಿ ಸೌಲಭ್ಯ ಸಹ ಒದಗಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ Http://karsirimangoes.karnataka.gov.in ಇದರಲ್ಲಿ ಆನ್‌ಲೈನ್ ಬುಕ್ ಮಾಡಬಹುದು. ಕೆಂಪೇಗೌಡ ಫಾರ್ಮ್ನ ಕರ್‌ಸಿರಿ ವ್ಯಬ್‌ನಲ್ಲಿ ಲಾಗಿನ್ ಆಗಿ ಎಲ್ಲಾ ಜಾತಿಯ ಮಾವಿನ ದರಗಳನ್ನು ನೋಡಿ ಆಲ್‌ಲೈನ್ ಬುಕ್ ಮಾಡಿದರೆ ನೇರವಾಗಿ ಮನೆಬಾಗಿಲಿಗೆ ಓದಗಿಸುವ ಸೌಲಭ್ಯ ಇದೆ ಹೆಚ್ಚಿನ ಮಾಹಿತಿಗಾಗಿ ದೂ 8453062389 ಸಂಪರ್ಕಿಸಬಹುದು.

You may have missed