
ಏಕಶಿಲಾ ನಗರಿಯಲ್ಲಿ ಕ್ಷೀರಕ್ರಾಂತಿಯ ಹರಿಕಾರ ಕೊಂಡವಾಡಿ ಚಂದ್ರಶೇಖರ್ ಪರಿಚಯ
ಮಧುಗಿರಿ ನ್ಯೂಸ್.ಕಾಂ ಸಂಪಾದಕಿಯ
ಛಲವಿದ್ದರೆ ಹಳ್ಳಿಯಿಂದ ದಿಲ್ಲಿವರೆಗೂ ಸಾಧನೆ ಮಾಡಬಹುದು ಎಂಬುದಕ್ಕೆ ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿದೇರ್ಶಕ ಕೊಂಡವಾಡಿ ಚಂದ್ರಶೇಖರ್ ಸಾಕ್ಷಿಯಾಗಿದ್ದಾರೆ.
ಹೌದು ಮಧುಗಿರಿ ತಾಲ್ಲೂಕಿನ ಪುಟ್ಟ ಹಳ್ಳಿ ಕೊಂಡವಾಡಿಯ ಲೇ ಕೆಂಪಣ್ಣ ಹಾಗೂ ಲಕ್ಷಮ್ಮ ದಂಪತಿಯ ಕೃಷಿಕ ಕುಟಂಬದಲ್ಲಿ ಅವರ ಹಿರಿಯ ಪುತ್ರರಾಗಿರುವ ಕೊಂಡವಾಡಿ ಚಂಧ್ರಶೇಖರ್ ಬಾಲ್ಯದ ಶಿಕ್ಷಣವನ್ನು ಕೊಂಡವಾಡಿ ಮತ್ತು ಚಿಕ್ಕಮಾಲೂರಿನ ಸರಕಾರಿ ಶಾಲೆಯಲ್ಲಿ ಪೂರೈಸಿ ಬಿ.ಎ ಪದವಿಧರರಾಗಿದ್ದಾರೆ. 2007 ರಲ್ಲಿ ರಲ್ಲಿ ಕೊಂಡವಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮೊದಲ ಬಾರಿ ಹೈನುಗಾರಿಕೆ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಇಲ್ಲಿಂದ ಇವರ ಹೈನುಗಾರಿಕೆ ಕ್ಷೇತ್ರ ವಿಭಿನ್ನ ಹುದ್ದೆಗಳು ನಿಭಾಯಿಸಿದ್ದಾರೆ.
2010-11ರಲ್ಲಿ ಬ್ಯಾಲ್ಯ ವಿಎಸ್ಸೆಸ್ಸೆಎನ್ ನಿದೇರ್ಶಕ ಹಾಗೂ 2010-11 ರಲ್ಲಿ ಟಿಎಪಿಸಿಎಂಎಸ್ ನಿದೇರ್ಶಕರಾಗಿ ಆಯ್ಕೆಯಾಗಿದ್ದಾರೆ. 2004-05 ರಲ್ಲಿ ಡಿಸಿಸಿ ಬ್ಯಾಂಕ್‌ನ ನಿದೇರ್ಶಕರಾಗಿ 2014-15 ರಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು. 2013 ರಲ್ಲಿ ತುಮುಲ್ ಅಧ್ಯಕ್ಷರಾಗಿ 5 ವರ್ಷ ಸುಸೂತ್ರವಾಗಿ ನಿಭಾಯಿಸಿದ್ದಾರೆ. 2013 ರಿಂದ ಇದುವರೆಗೂ ತುಮುಲ್ ನಿದೇರ್ಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ಒಟ್ಟಾರೆ ಕೊಂಡವಾಡಿ ಚಂದ್ರಶೇಖರ್ ಕುಟುಂಬ ಹೈನುಗಾರಿಕೆ ಮತ್ತು ರಾಜಕೀಯವಾಗಿ ತೊಡಗಿಕೊಂಡಿದ್ದು ಇವರ ಧರ್ಮ ಪತ್ನಿ ಸುಮನ ಚಂಧ್ರಶೇಖರ್ 2008 ರಲ್ಲಿ ಸಿದ್ದಾಪುರ ಜಿಪಂ ಸದಸ್ಯರಾಗಿ ರಾಜಕೀಯನ ಅನುಭವಿಯಾಗಿದ್ದಾರೆ. ಇವರ ಏಕೈಕ ಪುರ ಸುಮುಖ ಚಂಧ್ರಶೇಖರ್ ಬಿಇ ಪದವಿಧರನಾಗಿದ್ದು ಎನ್.ಎಸ್.ಯು.ಐ ಅಧ್ಯರಾಗಿ 3 ವರ್ಷ, ಹಾಲಿ ಯೂತ್ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
20013 ರಲ್ಲಿ ತುಮುಲ್ ಒಕ್ಕೂಟ ನಷ್ಟಕ್ಕೆ ಸಿಲುಕಿದಾಗ ಮಧುಗಿರಿ ಅಭಿವೃದ್ಧಿಯ ಹರಿಕಾರ ಅಂದಿನ ಶಾಸಕ ಕೆ.ಎನ್ ರಾಜಣ್ಣನವರು ಕೊಂಡವಾಡಿ ಚಂದ್ರಶೇಖರ್ ಅವರನ್ನು ತುಮುಲ್ ನಿದೇರ್ಶಕ ಸ್ಥಾನಕ್ಕೆ ಸ್ಪರ್ಧಿಸಲು ಸೂಚಿಸಿದಾಗ ಕೆ.ಎನ್.ಆರ್ ಅವರ ಮಾರ್ಗದರ್ಶನ ಹಾಗೂ ಅವರ ಸಹಕಾರದಿಂದ ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೈನುಗಾರಿಕೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದೇನೆ ಎಂದು ಇಂದಿಗೂ ಕೆ.ಎನ್ ರಾಜಣ್ಣನವರನ್ನು ನೆನೆಯುತ್ತಾರೆ
ಈ ಹಿಂದೆ ತುಮಕೂರು ಹಾಲು ಒಕ್ಕೂಟದಲ್ಲಿ ಪ್ರತೀ ದಿನ ಕೇವಲ 4.20 ಲಕ್ಷ ಲೀಟರ್ ಹಾಲು ಮಾತ್ರ ಸರಬರಾಜಾಗುತ್ತಿತ್ತು. ಕ್ಷೀರ ಕ್ರಾಂತಿಯ ಹರಿಕಾರ ಹಾಗೂ ಅಮುಲ್ ಡೈರಿಯ ಸ್ಥಾಪಕ ಡಾ ವರ್ಗೀಸ್ ಕುರಿಯನ್ ಅವರ ಹುಟ್ಟ ಹಬ್ಬ ನ 26 ರಂದು 2013 ರಲ್ಲಿ ತುಮುಲ್ ನ ಅಧ್ಯಕ್ಷರಾಗಿ ಕೊಂಡವಾಡಿ ಚಂದ್ರಶೇಖರ್ ಅಧಿಕಾರ ವಹಿಸಿಕೊಂಡ ನಂತರ 2013-18 ಅವಧಿಯಲ್ಲಿ ತುಮುಲ್ ನ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿ ಹಾಲಿನ ಹೊಳೆಯನ್ನೇ ಹರಿಸಿದರು.
ಸಂಕಷ್ಟದಲ್ಲಿದ್ದ ತುಮುಲ್ ಸಂಸ್ಥೆಯನ್ನು ಅಧ್ಯಕ್ಷರಾದ ನಂತರ 5 ವರ್ಷಗಳಲ್ಲಿ ತಮ್ಮದೇ ಆದ ವಿನೂತನ ಚಿಂತನೆಗಳು ಮತ್ತು ವರ್ಗೀಸ್ ಕುರಿಯನ್ ಅವರ ಆವರ ಆದರ್ಶಗಳ ಮೂಲಕ ಲಾಭದತ್ತ ಕೊಂಡೊಯ್ಯುವ ಮೂಲಕ ಕ್ಷೀರ ಕ್ರಾಂತಿಯ ಹರಿಕಾರರೆನಿಸಿಕೊಂಡಿದ್ದಾರೆ. ಹAತ ಹಂತವಾಗಿ ತುಮುಲ್ ನಲ್ಲಿ ಕ್ಷೀರ ಧಾರೆ ಹರಿಸಲು ಶ್ರಮ ವಹಿಸಿ ಪ್ರತೀದಿನ 7.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುವಂತೆ ಕ್ರಮ ಕೈಗೊಂಡಿಲ್ಲದೆ ಇದರ ಜೊತೆಗೆ ಸದಾ ನಷ್ಟದಲ್ಲೇ ಇದ್ದ ಒಕ್ಕೂಟವನ್ನೂ ಲಾಭದತ್ತ ಮುಖ ಮಾಡುವಂತೆ ಮಾಡಿದ್ದಾರೆ. ಒಟ್ಟಾರೆ ವ್ಯವಹಾರಿಕ ಸಂಸ್ಥೆಯಾಗಿದ್ದು ತುಮುಲ್ ಒಕ್ಕೂಟವನ್ನು ಸಮಾಜ ಮುಖಿ ಒಕ್ಕೂಟವನ್ನಾಗಿ ಮಾಡಿ ರೈತರ ಮನೆ ಬಾಗಿಲಿಗೆ ತಲುಪಿಸಿದ ಕೀರ್ತಿ ಕೊಂಡವಾಡಿ ಚಂಧ್ರಶೇಖರ್ ಅವರಿಗೆ ಸಲ್ಲುತ್ತದೆ.

ಬಾಂಬೆ ಮಾರಿಕಟ್ಟೆ ಬುನಾದಿ ಹಾಕಿದ ಕೆ. ಚಂದ್ರಶೇಖರ್
ತುಮುಲ್ ಹಾಲಿನ ಹರಿವು ಏರಿಕೆ ಕಂಡಿದಾಗ ಮಾರುಕಟ್ಟೆ ಅಷ್ಟಾಗಿರಲಿಲ್ಲ, ಹಾಲು ಮಾರಾಟ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದಾಗ ಗುಜರಾತ್‌ನ ಅಮುಲ್ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಕೊಂಡವಾಡಿ ಚಂದ್ರಶೇಖರ್ ಅವರು, ಒಕ್ಕೂಟಕ್ಕೆ ಹೆಚ್ಚುವರಿ ಹಾಲು ಪೂರೈಕೆಯಾದ ನಂತರ ಕೈಕಟ್ಟಿ ಕೂರಲಿಲ್ಲ. ಹಾಲನ್ನು ಹೆಚ್ಚು ದಿನಗಳ ಕಾಲ ಕೆಡದಂತೆ ಇಡುವುದು ಅಸಾಧ್ಯದ ಕೆಲಸ. ಮಾರುಕಟ್ಟೆಗಳನ್ನು ಸೃಷ್ಟಿ ಮಾಡಿದರೆ ಮಾತ್ರ ಹಾಲು ಮಾರಾಟ ಮಾಡಲು ಸಾಧ್ಯ ಎಂಬುದನ್ನು ಮನಗಂಡು ಬಾಂಬೆಯಲ್ಲಿ ಹಾಲಿನ ಪೂರೈಕೆಗೆ ಕ್ರಮ ಕೈಗೊಂಡರು. ಅಮುಲ್ ಡೈರಿಯನ್ನು ಮಾಧರಿಯಾಗಿ ಮಾರಕಟ್ಟೆ ಮಾಡಲು ಹೊರಟಾಗ ತುಂಬ ಕಷ್ಟಪಟ್ಟಿದ್ದೇವೆ. ಬಾಂಬೆಯಲ್ಲಿ ಮಾರುಕಟ್ಟೆ ಮಾಡಲು ಕೆ.ಎಂ.ಎಫ್ ಅಧ್ಯಕ್ಷರಾಗಿದ್ದ ಎಂ.ಪಿ ನಾಗರಾಜು, ಸಚಿವ ಎ ಮಂಜು ಸಹಕಾರ ನೀಡಿ ಭರವಸೆ ನೀಡಿದರು. ಬಾಂಬೆಯ ಕನ್ನಡ ಪರ ಸಂಘಟನೆಗಳ ಜೊತೆ ನಿರಂತರ ಸಂಪರ್ಕವಹಿಸಿ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಹಾಲು ಮಾರಾಟಕ್ಕೆ ಮುನ್ನುಡಿ ಬರೆದರು. ಬಾಂಬೆಯಲ್ಲಿ ಮಾರುಕಟ್ಟೆ ಮಾಡಲು ಹೊರಟಾಗ ಡಾ ವೀರೇಂದ್ರ ಹೆಗ್ಡೆ ಹಾಗೂ ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿ ಬಾಂಬೆಯಲ್ಲಿ ಮಾರಕಟ್ಟೆ ಶುರು ಮಾಡಿದಾಗ ಆರಂಭದಲ್ಲಿ ಕೇವಲ 9 ಸಾವಿರ ಲೀಟರ್ ಹಾಲು ಮಾತ್ರ ಪೂರೈಕೆಯಾಗುತ್ತಿತ್ತು. ಸತತ ಪ್ರಯತ್ನ ಮತ್ತು ನಿರಂತರ ಗುಣ ಮಟ್ಟ ಕಾಯ್ದುಕೊಂಡ ಹಿನ್ನೆಲೆಯಲ್ಲಿ 2.10 ಲಕ್ಷ ಲೀಟರ್ ಹಾಲು ಪ್ರತೀ ದಿನ ಪೂರೈಕೆಯಾಗುತ್ತಿದ್ದು, ಈಗ ಕೋವಿಡ್ ಸಂಕಷ್ಟದಾಗಿ ಇಳಿಕೆ ಕಂಡಿತು ಇದೀಗಾ ಹಂತ ಹಂತವಾಗಿ ಚೇತರಿಕೆ ಕಂಡಿದೆ.
ಫ್ಲೆಕ್ಸಿ ಪ್ಯಾಕ್ ಘಟಕದ ರೂವಾರಿ:
ಹಿಂದೆಲ್ಲಾ ಒಕ್ಕೂಟಕ್ಕೆ ಹೆಚ್ಚುವರಿ ಹಾಲು ಬಂದರೆ ಉತ್ಪಾದಕರಿಗೆ ರಜಾ ನೀಡಲಾಗುತ್ತಿತ್ತು. ಈಗ ಅಂತಹ ಪರಿಸ್ಥಿತಿಯಿಲ್ಲ. ಒಕ್ಕೂಟದ ಹೆಚ್ಚುವರಿ ಹಾಲನ್ನು ಕೆಡೆದಂತೆ ಮಾಡಲು 55 ಕೋಟಿ ವೆಚ್ಚದಲ್ಲಿ ಫ್ಲೆಕ್ಸಿ ಪ್ಯಾಕ್ ಘಟಕವನ್ನು ಆರಂಭಿಸಿ ಹೆಚ್ಚುವರಿ ಹಾಲನ್ನು ಸಂಸ್ಕರಿಸಿ 180 ದಿನಗಳವರೆಗೆ ಕೆಡದಂತೆ ಇಡಬಹುದು. ಈ ಘಟಕಕ್ಕೆ ಯಾವುದೇ ಸಂಘ ಸಂಸ್ಥೆಗಳಿAದ ಸಾಲ ಹಾಗೂ ಸರಕಾರದ ಅನುದಾನದ ಮೊರೆ ಹೋಗದೇ ಒಕ್ಕೂಟದಿಂದ ಬಂದ ಲಾಭದ ಹಣದಲ್ಲಿ ಖರೀದಿಸಿರುವುದು ವಿಶೇಷ. ಇದರಿಂದ ಪ್ರತೀ ದಿನ 50 ಸಾವಿರ ಲೀಟರ್ ಹಾಲನ್ನು ಸಂಸ್ಕರಿಸಿ ಮಾರಾಟ ಮಾಡಲು ಸಹಕಾರಿಯಾಗಿದೆ. ಎಷ್ಟೇ ಹಾಲು ಬಂದರೂ ಉತ್ಪಾದಕರಿಗೆ ರಜೆ ನೀಡದೇ ಹಾಗು ಬೇರೆಡೆ ವರ್ಗಾವಣೆ ಮಾಡದೇ ಹಾಲು ಶಿಥಲೀಕರಿಸುವ ಸಾಮಥ್ಯ ಹೊಂದುವAತೆ ಮಾಡಲಾಗಿದೆ.
ಮುಂದಿನ ಸಂಚಿಕೆ ನಿರೀಕ್ಷಿಸಿ

More Stories
ವಿಧ್ಯಾರ್ಥಿ ಜೀವನದಲ್ಲಿ ಕಲಿಕಾ ಮನೋಭಾವ ಬೆಳಸಿಕೊಳ್ಳಿ-DDPI
ಕ್ರೀಡಾಕೂಟದಲ್ಲಿ ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ
ಶೋಷಣೆ ನಿವಾರಣೆ ಶಿಕ್ಷಣದಿಂದ ಮಾತ್ರ ಸಾದ್ಯ: ಗೃಹ ಸಚಿವ ಡಾ. ಜಿ.ಪರಮೇಶ್ವರ