web stats

Madhugirinews

#1NewsofMadhugiri

ಯು.ಪಿ ಬುಲ್ಡೋಜರ್ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ವಿರೋಧಿ ಸಂಸ್ಕೃತಿ- ಪ್ರೊ.ಕೆದೊರೆರಾಜ್

????????????????????????????????????

ತುಮಕೂರು: ಉತ್ತರ ಪ್ರದೇಶದಲ್ಲಿ ಬಡವರು .ದಲಿತರು.ಅಲ್ಪಸಂಖ್ಯಾತರ ಮನೆಗಳ ಮೇಲೆ ನಡೆಯುತ್ತಿರುವ ಸಂವಿಧಾನಬಾಹಿರ ಬುಲ್ಡೋಜರ್ ಸಂಸ್ಕೃತಿ ವಿರೋಧಿಸಿ ತುಮಕೂರು ನಗರದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದಚರ್ಚ್ ಸರ್ಕಲ್ (ಸ್ವಾತಂತ್ರ ಚೌಕ)ದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಚಿಂತಕರಾದ ಕೆ.ದೊರೈರಾಜ್ ಉತ್ತರಪ್ರದೇಶದ ಸರ್ಕಾರಜನರ ಮೇಲೆ ಹಲ್ಲೆ ಮಾಡುವುದಷ್ಟೆ ಅಲ್ಲದೇ ಜನರ ಮಧ್ಯೆ ಆಶಾಂತಿ ಯನ್ನುಂಟು ಮಾಡುವ ವಾತವರಣ ಸೃಷ್ಠಿಸುತ್ತಿದೆ. ನಮ್ಮದೇಶದ ಪ್ರಜ್ಞಾವಂತ ನಾಗರೀಕರು ಇಂತಹ ಕೋಮು ಪ್ರಚೋಧನೆಗಳಿಗೆ ಒಳಗಾಗದೇ ಶಾಂತಿ. ಸೌಹಾರ್ದ, ಸಾಮರಸ್ಯದ ಸಮಾಜವನ್ನು ಕಟ್ಟುವಲ್ಲಿ ಮುಂದಾಗಬೇಕಿದೆ. ಇತ್ತೀಚಿನ ಸರ್ಕಾರಗಳು ಮತ್ತು ಪ್ರಭುತ್ವಗಳು ಎಲ್ಲಾ ಜನರನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಹೊತ್ತಿರುವಂತವು ಸಮಾಜವನ್ನು ಸೌಹಾರ್ದ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರಿಗೂ ನೆಮ್ಮದಿಯ ವಾತಾವರಣP Áಪಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಉತ್ತರ ಪ್ರದೇಶದಲ್ಲಿ ಇವತ್ತು ಬುಲ್ಡೋಜರ್ ಮೂಲಕ ಕಾನೂನಿಗೆ ವಿರುದ್ಧವಾಗಿ ತಾರತಮ್ಯದ ಅಧಿಕಾರವನ್ನು ಚಲಾಯಿಸುತ್ತಾ ಬಡವರು ಬದುಕುವ ಗಲ್ಲಿಗಳನ್ನು ನಾಶ ಮಾಡುತ್ತಿದ್ದಾರೆ ಇದು ಪ್ರಜಾಪ್ರಭುತ್ವನಾ..? ಪ್ರಭುತ್ವ ಮಾಡುವ ಕೆಲಸನಾ..? ಹಾಗಾಗಿ ಸರ್ಕಾರಗಳು ಕಾನೂನು ಬದ್ಧವಾದ ನಾಗರೀಕ ಸರ್ಕಾರಗಳಾಗಬೇಕೆ ಹೊರತು ಹೀಗೆ ಕಾನೂನುಗಳನ್ನು ಜಾತಿ.ಧರ್ಮ ಆಧರಿಸಿ ತಾರತಮ್ಯವೊಡ್ಡಿ ಬುಲ್ಡೋಜರ್ ಮಾಡುವುದನ್ನು ನಿಲ್ಲಿಸಬೇಕು.

ಸ್ಲಂಜನಾAದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿಯು.ಪಿ ಮತ್ತು ಜಾರ್ಖಾಂಡ್‌ಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾಗರೀಕ ಸಮಾಜ ಬಹಳ ಸೂಕ್ಷö್ಮವಾಗಿ ಅರ್ಥ ಮಾಡಿಕೊಳ್ಳಬೇಕಿದೆ ಯಾವಒಂದು ಪ್ರಜಾ ಕಲ್ಯಾಣ ಉದ್ದೇಶವಿಟ್ಟುಕೊಂಡು ಆಧಾರ ಸ್ಥಂಗಳನ್ನು ನಿರ್ಮಾಣ ಮಾಡಿದ್ದೇವೆ ಅದರ ತದ್ವಿರುದ್ಧವಾಗಿ ಯುಪಿ ಯೋಗಿ ಸರ್ಕಾರ ಮಾಡುತ್ತಿದೆ ಅನದೀಕೃತ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿಯ ನೆಪವನ್ನೊಡ್ಡಿ ಅವರು ವಾಸಿಸುವ ಮನೆಗಳನ್ನು ಧ್ವಂಸ ಮಾಡಿ ಬುಲ್ಡೋಜರ್ ಸಂಸ್ಕೃತಿ ಹೇರಿ ಹೋರಾಟ ಮಾಡುವಂತವರನ್ನು ಎದರಿಸುವಂತಹ ವಾತವರಣ ಸೃಷ್ಠಿಸಿರುವುದು ಅಂತರಾಷ್ಟಿçÃಯ ಮಟ್ಟದಲ್ಲಿ ಖಂಡನಾರ್ಹವಾಗಿ ರುವಂತಹದ್ದು ನಾಗರೀಕ ಸಮಾಜಕ್ಕೆ ತಲೆತಗ್ಗಿಸುವ ವಿಚಾರವಾಗಿದೆ. ಹಾಗಾಗಿ ಕೂಡಲೇ ಉತ್ತರ ಪ್ರದೇಶದಲ್ಲಿ ರಾಷ್ಟçಪತಿಗಳ ಆಡಳಿತವನ್ನು ಜಾರಿಗೊಳಿಸಿ ಪ್ರಜೆಗಳ ಹಿತವನ್ನು ಕಾಪಾಡಬೇಕಾಗಿದೆ ಕಾನೂನು ದುರ್ಬಳಕೆ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿ ದಲಿತ ಸಂಘಟನೆಯರಾಮಯ್ಯ, ವೆಲ್ಫೇರ್ ಪಾರ್ಟಿಆಫ್‌ಇಂಡಿಯಾದತಾಜುದ್ದೀನ್, ಪೌರಕಾರ್ಮಿಕ ಮುಖಂಡರಾದ ಸುಬ್ಬಣ್ಣ, ಮಾತನಾಡಿಯುಪಿ ಸರ್ಕಾರ ವಜಾಗೊಳಿಸಿ ರಾಷ್ಟçಪತಿಗಳ ಆಡಳಿತ ತರುವಂತೆ ಒತ್ತಾಯಿಸಿದರು. ಹಾಗೂ ಪ್ರತಿಭಟನೆಯಲ್ಲಿತುಮಕೂರು ಸ್ಲಂ ಸಮಿತಿಯಅರುಣ್. ತಿರುಮಲಯ್ಯಅಲ್ಪಸಂಖ್ಯಾತ ಸಮುದಾಯದ ಮುಖಂಡರು ವಿವಿಧ ಸಂಘಟನೆಗಳ ಮುಖಂರು ಪಾಲ್ಗೊಂಡಿದ್ದರು.

You may have missed