ತುಮಕೂರು: ತಾಲ್ಲೂಕಿನ ಬೆಳಧರ ಬಳಿ ಶನಿವಾರ ಸಂಜೆ ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಯ ಶಿವಕುಮಾರ್ (28), ಗೋವಿಂದಪ್ಪ (60), ಬೈಚಾಪುರದ ಶಿವಶಂಕರ್ (28) ಮೃತರಾಗಿದ್ದಾರೆ ಎಂದು ಗುರುತಿಸಲಾಗಿದೆ.
ಕತ್ತಿನಾಗೇನಹಳ್ಳಿಯ ಗೋಪಾಲ್ (28), ರೆಡ್ಡಿಹಳ್ಳಿಯ ಶಂಕರ್ (28) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಧರ್ಮಸ್ಥಳಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ‘ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
More Stories
ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಕಿವಿಗೂಡಬೇಡಿ-: ಹಾಲಪ್ಪ
ಕ್ರಿಕೆಟ್ ಎಂಬುದು ಯುವ ಸಮೂಹಕ್ಕೆ ಸ್ಪೂರ್ತಿದಾಯಕ
ಕಳವು ಆರೋಪಿಗಳ ಬಂಧನ