ತುಮಕೂರು: ಕುಣಿಗಲ್ ಅನ್ನು ಬೆಂಗಳೂರು ದಕ್ಷಿಣಕ್ಕೆ ಅಲ್ಲ, ಸೌತ್ ಆಫ್ರಿಕಾಗೆ ಬೇಕಾದರೂ ಸೇರಿಸಿಕೊಳ್ಳಿ. ಯಾವನು ಬೇಡ ಅಂತಾರೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಣಿಗಲ್ ನಮ್ಮಜಿಲ್ಲೆಯಲ್ಲಿರಬೇಕೆಂದು ಅಪೇಕ್ಷೆಪಡುವಂತವನು ನಾನು. ಇವರು ಬೆಂಗಳೂರು, ರಾಮನಗರ, ಕನಕಪುರಕ್ಕೆ ಸೇರಿಸಿಕೊಳ್ಳುವ ಚಿಂತನೆ ಸರಿಯಲ್ಲ ಎಂದರು. ಹೇಮಾವತಿ ನೀರನ್ನು ಕುಣಿಗಲ್ ಗೆ ತೆಗೆದುಕೊಂಡು ಹೋಗುವುದಕ್ಕೆ ಆಕ್ಷೇಪಯಿಲ್ಲ, ಕುಣಿಗಲ್ ಹೊರತುಪಡಿಸಿ ಬೇರೆ ಜಾಗಕ್ಕೆ ನೀರು ತೆಗೆದುಕೊಂಡು ಹೋಗಲು ನಮ್ಮ ಜನ ಒಪ್ಪುವುದಿಲ್ಲ ಎಂದರು.
ಕಾAಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುತ್ತದೆ.ಚುನಾವಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಕೆಲವು ಕ್ಷೇತ್ರ ಮರು ವಿಂಗಡಣೆ ಆಗಬೇಕು, ಆಗುತ್ತವೆಂದರು. ಐದು ವರ್ಷ ಕಾಂಗ್ರೆಸ್ ಸರಕಾರ ನಿರಂತರವಾಗಿರುತ್ತದೆ. ಸಿದ್ದರಾಮಯ್ಯ ಸಿಎಂ ಆಗಿಯೇ ಇರುತ್ತಾರೆ, ಏಕೆ ಅನುಮಾನನಾ ಎಂದು ಪ್ರಶ್ನಿಸಿದರು.
ನವೆಂಬರ್ ನಲ್ಲಿ ಕ್ರಾಂತಿ ನಡೆಯಲಿದೆ ಎಂದು ಒಂದು ಗುಂಪು ಊಹೆ ಮಾಡುತ್ತಿದೆ. ಆದರೆ ನನಗೆ ತಿಳಿದಿರುವಂತೆ ಸರಕಾರದಲ್ಲಿ ಯಾವುದೇ ಬದಲಾವಣೆ ಆಗದು. ಸಿದ್ದರಾಮಯ್ಯ ಅವರೇ ಉಳಿದ ಅವಧಿಯಲ್ಲೂ ಮುಂದುವರೆಯಲ್ಲಿದ್ದಾರೆ. ಅನುಮಾನಬೇಡವೆಂದರು. ಬಿಜೆಪಿ ಸುಳ್ಳು ಹೇಳಿಕೊಂಡು ರಾಷ್ಟ್ರ , ರಾಜ್ಯದಲ್ಲಿ ಇಲ್ಲಿಯವರೆಗೂ ಬಂದಿದ್ದಾರೆ. ಅವರ ಮಾತಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲವೆಂದರು.
More Stories
ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಕಿವಿಗೂಡಬೇಡಿ-: ಹಾಲಪ್ಪ
ಕ್ರಿಕೆಟ್ ಎಂಬುದು ಯುವ ಸಮೂಹಕ್ಕೆ ಸ್ಪೂರ್ತಿದಾಯಕ
ಕಳವು ಆರೋಪಿಗಳ ಬಂಧನ