web stats

Madhugirinews

#1NewsofMadhugiri

ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಅಗತ್ಯ

ಮಧುಗಿರಿ: ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿಯ ನಂತರ ಮುಖ್ಯ ಸ್ಥಾನ ಸಿಗುವುದು ಶಿಕ್ಷಕರಿಗೆ ಮಾತ್ರ ಆ ಸ್ಥಾನ ಜನಸ್ನೇಹಿತಿಯಾಗಿರಬೇಕು ಎಂದು ಪ್ರಿನ್ಸಿಪಾಲ್ ಮರಳುಸಿದ್ದೇಶ್ವರ್ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿಧ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಶಾಲಾ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಮೊಬೈಲ್ ಹಿಡಿದು ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದರು.

ನಮ್ಮ ವಸತಿ ಶಾಲೆಯಲ್ಲಿ ಸರಕಾರ ಶಿಕ್ಷಣಕ್ಕೆ ಪೂರಕ ವಾತರವಣ ನಿರ್ಮಿಸಿದ್ದು 6 ರಿಂದ ಪಿಯುಸಿ ವರೆಗೂ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆ. ಇಲ್ಲಿ ಯಾವುದೆ ರೀತಿಯ ಇತರೆ ಚಟುವಟಿಕೆಗಳಿಗೆ ಅವಕಾಶವಿಲ್ಲ ಅಂತಹ ಯಾವುದೆ ಮಾಹಿತಿ ಇದ್ದರೂ ಪೋಷಕರನ್ನು ಕರೆಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಕ್ಷಕ ಮಹೇಶ್ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಅಗತ್ಯ, ಮಕ್ಕಳ ಮುಖ್ಯ ಗುರಿ ಉತ್ತಮ ಶಿಕ್ಷಣವಾಗಿರುಬೇಕು. ಇಲ್ಲಿ ಅಗತ್ಯವಾದ ಸೌಲಭ್ಯವಿದೆ. ಇಲ್ಲಿ ಉತ್ತಮ ವಿದ್ಯಾಭ್ಯಾಸಕ್ಕೆ ಸೂಕ್ತ ಸಮಯ ಎಲ್ಲರಿಗೂ ನಿಮಗೆ ಸಿಕ್ಕಿರುವ ಅವಕಾಶಗಳು ಸಿಗುವುದಿಲ್ಲ. ಬಹುತೇಕ ವಿಧ್ಯಾರ್ಥಿಗಳು ರಾಜ್ಯ ಮೂಲೆ ಮೂಲೆಯಿಂದ ಬಂದಿದ್ದು ಬಹುತೇಕರು ಗ್ರಾಮೀಣಾ ಭಾಗದವರೇ ಆಗಿದ್ದೀರಿ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ವೈದ್ಯಧಿಕಾರಿ ಡಾ ದರ್ಶನ್ ಮಾರೇಗೌಡ ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ವಿಧ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು. ವಸತಿ ನಿಯಲಗಳಲ್ಲಿ ವಿಧ್ಯಾರ್ಥಿಗಳು ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಸಮಯ ನಿಗಧಿಪಡಿಸಿ ಆರೋಗ್ಯ ತಪಾಸಣೆ ಸ್ವಚ್ಚತೆ ಪರಿಶೀಲನೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸರ್ವೋದಯ ಶಾಲೆ ಮುಖ್ಯ ಶಿಕ್ಷಕ ಸದಾಶಿವಾ ರೆಡ್ಡಿ, ಸದಾನಂದ್ ಮಾತನಾಡಿದರು. ಇದೇ ವೇಳೆ ಶಾಲಾ ಸಂಸತ್ ಕಾರ್ಯಕ್ರಮ ಆಯೋಜಿಸಿ ವಿವಿಧ ವಿಭಾಗಕ್ಕೆ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಂಜುನಾಥ್ ರಾಜಣ್ಣ ಮಾರುತೇಶ್ ಲತಾ ಸೌಭಾಗ್ಯ ಶಿಲ್ಪಾ, ಮಾನಸ, ಮಧೂಸೂಧನ್, ಮಹೇಶ್ ಹಾಜರಿದ್ದರು.

You may have missed