web stats

Madhugirinews

#1NewsofMadhugiri

ಮೇ 13 ರಂದು ಕೆ.ಎನ್.ಆರ್ ಅಮೃತ ಮಹೋತ್ಸವ

ಮಧುಗಿರಿ: ರಾಜಣ್ಣನವರ ನೇತೃತ್ವದಲ್ಲಿ ಕಳೆದ 3 ವರ್ಷದ ಹಿಂದೆ ನಡೆದ ರಾಜ್ಯ ಮಟ್ಟದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 14 ಲಕ್ಷಕ್ಕು ಅಧಿಕ ಜನ ಭಾಗಿ ರಾಷ್ಟçಮಟ್ಟದಲ್ಲಿ ಯಶಸ್ಸು ಕಂಡಿತ್ತು. ಅದೇ ರೀತಿ ಕೆ.ಎನ್. ರಾಜಣ್ಣ ಅಭಿನಂದನಾ ಕಾರ್ಯಕ್ರಮ ಯಶಸ್ಸು ಕಾಣಬೇಕು ಎಂದು ವಿ.ಪ ಸದಸ್ಯ ಆರ್ ರಾಜೇಂದ್ರ ತಿಳಿಸಿದರು.

ಪಟ್ಟಣದ ಸಚಿವರ ಸ್ವಗೃಹದಲ್ಲಿ ನಡೆದ ಸಚಿವ ಕೆ.ಎನ್.ರಾಜಣ್ಣನವರ 75ನೇ ಜನ್ಮದಿನದ ಅಮೃತ ಮಹೋತ್ಸವ, ಅಭಿನಂದನಾ ಗ್ರಂಥ ಬಿಡುಗಡೆ, 45 ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ 13 ರಂದು ತುಮಕೂರು ಜೂನಿಯರ್ ಕಾಲೇಜಿನಲ್ಲಿ ನಡೆವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಚಿವರು ನಡೆದ ಬಂದ ರಾಜಕೀಯ ಚರಿತ್ರೆ, ಸಹಕಾರಿ ಕ್ಷೇತ್ರದ ಬೆಳವಣಿಗೆ ಹಾಗೂ ರೈತ ಪರ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಸಂಪೂರ್ಣ ಚಿತ್ರವವನ್ನು ಸಾಹಿತಿಗಳು, ಹಿರಿಯ ಸಚಿವರು ಹಾಗೂ ಸ್ನೇಹಿತರು ಸೇರಿಕೊಂಡು ಒಂದು ಸಾವಿರ ಪುಟದಿಂದ 500 ಪುಟಕ್ಕೆ ಭಾಗ-1 ಒಂದು ಗ್ರಂಥ ಮಾಡಲಾಗಿದೆ ಎಂದರು.

ಅಭಿನAದನಾ ಗ್ರಂಥದಲ್ಲಿ ಸಚಿವರ ರಾಜಕೀಯ ಸಹಕಾರಿ ಕ್ಷೇತ್ರದ ಬದಲಾವu, ಸಹಕಾರಿ ಕ್ಷೇತ್ರದಲ್ಲಿ ನಡೆದು ಬಂದ ದಾರಿ ಬಗ್ಗೆ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಇದು ಪಕ್ಷದ ಕಾರ್ಯಕ್ರಮವಲ್ಲ ಕೆ.ಎನ್ ರಾಜಣ್ಣನವರ ಕಾರ್ಯಕ್ರಮ ಆಗಿರುವುದರಿಂದ ಪಕ್ಷತೀತಾವಾಗಿ ಎಲ್ಲಾ ಪಕ್ಷದ ಸ್ನೇಹಿತರನ್ನು ಆಹ್ವಾನಿಸಲಾಗಿದ್ದು ಈ ವರ್ಷ ದಾಖಲೆ ನಿರ್ಮಿಸುವ ಒಂದು ಮೈಲಿಗಲ್ಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವ ವಿ ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರು ಸಚಿವರು ಭಾಗಿಯಾಗಲಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಯಣ ರೆಡ್ಡಿ ಮಾತನಾಡಿ ಇಡೀ ಜಿಲ್ಲೆಯಲ್ಲಿ ನಿರಂತರವಾಗಿ ರೈತರಿಗೆ ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಿಂದ ಕೋಟ್ಯಾಂತರ ರೂ ಕೃಷಿ ಸಾಲ ನೀಡುವ ಮೂಲಕ ಸುಮಾರು 400 ಕೋಟಿಗೂ ಅಧಿಕ ಸಾಲ ನೀಡಿ ರೈತರ ಸಮಗ್ರ ಅಭಿವೃದ್ಧಿ ಶ್ರಮಿಸಿದ್ದಾರೆ. ಅವರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದು ಅವರ ಕೈ ಬಲಪಡಿಸಬೇಕು ಎಂದರು.

ಸಹಕಾರಿ ಕ್ಷೇತ್ರದಲ್ಲಿ ತನ್ನದೇ ವರ್ಚಸ್ಸಿನ ಮೂಲಕ ಸಾವಿರಾರು ರೈತರ ನೆರವಿಗೆ ಧಾವಿಸಿದ್ದು ತನ್ನ ಜೀವನದ ಪ್ರತಿ ಕ್ಷಣವನ್ನೂ ರೈತಪರವಾಗಿ ಮಿಡಿಯುವ ಸಚಿವರ ಅಮೃತ ಮಹೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವ ಇಚ್ಚೇಯಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಶಾಂತಲಾ ರಾಜಣ್ಣ, ಪುರಸಭೆ ಅಧ್ಯಕ್ಷ ಲಾಲಾ ಪೇಟೆ ಮಂಜುನಾಥ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ಕೆಪಿಸಿಸಿ ಸದಸ್ಯ ಎಂ.ಎಸ್ ಮಲ್ಲಿಕಾರ್ಜುನಯ್ಯ, ಡಾ ರಂಗಶಾಮಣ್ಣ, ತುಂಗೋಟಿ ರಾಮಣ್ಣ, ಕೆ.ಎಂ.ಎಫ್ ನಿರ್ದೇಶಕ ಕಾಂತರಾಜು, ತುಮುಲ್ ನಿದೇರ್ಶಕ ನಾಗೇಶ್ ಬಾಬು, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಚೌಡಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

You may have missed