
ಮಧುಗಿರಿ: ಗ್ಯಾಸ್ ಏಜೆನ್ಸಿಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಸರಕಾರಿ ಯೋಜನೆಗಳ ಬಗ್ಗೆ ಮತ್ತು ದರಗಳ ಕುರಿತು ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಲವಡಿಸಬೇಕು ಎಂದು ತಹಸಿಲ್ದಾರ್ ಶಿರಿನ್ ತಾಜ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಎಲ್ಪಿಜಿ ಸಿಲಿಂಡರ್ ಸರಬರಾಜು ಮಾಡುವ ಕುರಿತು ಸರಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕು. ಸರಕಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಳಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಸಿಲೆಂಡರ್ ನಲ್ಲಿ ಕೆಜಿಗಟ್ಟಲೆ ಅನಿಲವನ್ನು ಕದ್ದು ಸಿಲಿಂಡರ್ ಸಾಗಿಸುವವರ ಕುರಿತು ಸಿಡಿಮಿಡಿಗೊಂಡ ತಾಶಿಲ್ದಾರ್ ಶಿರೀನ್ ತಾಜ್ ಪ್ರತಿ ಐದು ಕಿಲೋಮೀಟರ್ ಒಳಗೆ ಸಿಲಿಂಡರ್ ಸರಬರಾಜಿನ ಸೇವಾ ಶುಲ್ಕವನ್ನು ಸಾರ್ವಜನಿಕರಿಂದ ಹಣವನ್ನು ಪಡೆಯುವಂತಿಲ್ಲ, ಪ್ರತಿ ಕಿ.ಮೀ ಗೆ ಒಂದು ಪಾಯಿಂಟ್ ಆರು ರೂಪಾಯಿ ಮಾತ್ರ ಪಡೆದುಕೊಳ್ಳಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ, ಮತ್ತು ಸಿಲಿಂಡರ್ ಸರಬರಾಜು ಮಾಡುವ ಸಂದರ್ಭದಲ್ಲಿ ಸಂಬAಧಪಟ್ಟ ಏಜೆನ್ಸಿಯ ವಾಹನಗಳ ಮೂಲಕವೇ ಸಾಗಿಬೇಕು ಎಂದರು.
ತಾಲೂಕಿನಲ್ಲಿ ಒಟ್ಟು ಒ೯ ಗ್ಯಾಸ್ ಏಜೆನ್ಸಿಗಳಿದ್ದು ಇತ್ತೀಚಿನ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಸರಬರಾಜಿಗೆ ಮನಬಂದAತೆ 50 ರೂ, 100ರೂ ಹಣವನ್ನು ವಿತರಕರು ಪಡೆಯುತ್ತಿರುವ ಆರೋಪ ಕೇಳಿ ಬರುತಿದ್ದು ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಉಜ್ವಲ ಯೋಜನೆಯ ಸಂಪರ್ಕವನ್ನು ಉಚಿತವಾಗಿ ನೀಡಬೇಕು. ಡೆಲಿವರಿ ಬಾಯ್ಗಳು ಹೆಚ್ಚುವರಿ ಹಣ ವಸೂಲಿ, ಅಕ್ರಮ ದಾಸ್ತಾನು ಮಾಡುವ ಆರೋಪಗಳು ಕೇಳಿ ಬರುತಿದ್ದು ಇದನ್ನು ಮರಕಳಿಸದಂತೆ ಎಚ್ಚರವಹಸಿಬೇಕು ಎಂದರು. ಪ್ರತಿ ತಿಂಗಳು ಅಂತ್ಯದಲ್ಲಿ ಅನಿಲ ಸಂಪರ್ಕ ಮಾಡಿರುವ ಹಾಡ್ ð ಕಾಪಿಯನ್ನು ಕಡ್ಡಾಯವಾಗಿ ಕಚೇರಿಗೆ ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಹಾರ ಶಿರೆಸ್ತುದಾರ್ ಸುಜಾತ, ಆಹಾ ನೀರೀಕ್ಷಕ ನಸ್ರುದ್ದೀನ್ ಸೇರಿದಂತೆ ವಿವಿಧ ಗ್ಯಾಸ್ ಏಜೆನ್ಸಿಗಳ ಮಾಲೀಕರು ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು