web stats

Madhugirinews

#1NewsofMadhugiri

ಮಹಿಳೆ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಧುಗಿರಿ: ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಗ್ರಾಮದ ಆರೋಪಿ ಶಿವಕುಮಾರ್ ಅಲಿಯಾಸ್ ಗೆಣಸು ಬಿನ್ ನಂಜಪ್ಪ (42 ವರ್ಷ) ಹಾಗೂ ಮಧುಗಿರಿ ತಾಲೂಕಿನ ಬಿಜಾವರ ಗ್ರಾಮದ 2ನೇ ಆರೋಪಿ ಮಂಜುನಾಥÀ ಅಲಿಯಾಸ್ ಮೆಂಟಲ್ ಮಂಜ ( 44 ವರ್ಷ) ಇಬ್ಬರ ಸಂಬAಧಿಯಾಗಿದ್ದ ತುಂಬಾಡಿ ಗ್ರಾಮದ ಗಿರಿಜಮ್ಮ ಕೊಂ. ಲೇ. ಮೂಡಲಗಿರಿಯಪ್ಪ ರವರು ಪರಸ್ಪರ ಸಂಬAಧಿಕರಾಗಿದ್ದು ಗಿರಿಜಮ್ಮ ರವರ ಬಳಿಯಿದ್ದ ಬಂಗಾರದ ವಡವೆಗಳ ಆಸೆಗಾಗಿ ಕೊಲೆ ಮಾಡಿದ್ದರು ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಮೊ.ನಂ. 60/2019, ಎಸ್.ಸಿ. ಸಂ: 5037/2019ರಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್. ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದÄ, ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ರವರು ಇಬ್ಬರೂ ಆರೋಪಿತರಿಗೆೆ ಭಾರತೀಯ ದಂಡ ಸಂಹಿತೆಯ ಕಲಂ: 302, 201, 404 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಏನಿದು ಸ್ಟೋರಿ ಅಂತೀರಾ…?
ಆರೋಪಿಗಳಾದ ಶಿವಕುಮಾರ್ ಹಾಗೂ ಮಂಜುನಾಥ ಇಬ್ಬರು ಸೇರಿಕೊಂಡು ಜೂ 6 2019 ರಂದು ತುಂಬಾಡಿಗೆ ತೆರಳಿ ಗಿರಿಜಮ್ಮರನ್ನು ತುಂಬಾಡಿಯಿAದ ಕೆ.ಎ-06-ಡಿ-3279 ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾರೆ. ನಂತರ ಬಡವನಹಳ್ಳಿ ಠಾಣಾ ವ್ಯಾಪ್ತಿಯ ಮಾಯಗೊಂಡನಹಳ್ಳಿ ಕ್ರಾಸ್ ಬಳಿ ಕೆಂಪಚೆನ್ನೇನಹಳ್ಳಿ ಸರ್ವೆ ನಂ:8/1ರಲ್ಲಿ ಗಿರಿಜಮ್ಮಳ ಕುತ್ತಿಗೆಗೆ ಹಗ್ಗ ಬಿಗಿದು ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ. ಆಕೆಯ ಬಳಿಯಿದ್ದ ಸುಮಾರು 1,83,500 ರೂ ಬೆಲೆಯ ವಡವೆಗಳನ್ನು ತೆಗೆದುಕೊಂಡಿದ್ದು ರಂಟವಾಳದಲ್ಲಿ ಡಿಸೇಲ್ ಖರೀಧಿಸಿ ಆಂದ್ರ ಪುಲಮಘಟ್ಟದ ನಾರಾಯಣಪ್ಪನ ಜಮೀನಿನಲ್ಲಿ ಗಿರಿಜಮ್ಮಳ ಮೃತ ದೇಹಕ್ಕೆ ಡೀಸೆಲ್ ಹಾಕಿ ಸುಟ್ಟು ಮೃತಳ ಮೊಬೈಲ್ ಮತ್ತು ಸಿಮ್ ಸಿಗದಂತೆ ನಾಶಪಡಿಸಿದ್ದಾರೆ. ಮೃತಳ ಮೈಮೇಲಿನ ಒಡವೆಗಳನ್ನು ಕೊರಟಗೆರೆಯ ಮುತ್ತೂಟ್ ಪೈನಾನ್ಸ್ನಲ್ಲಿ ನೆಕ್ಲೆಸ್ ಮತ್ತು ಉಂಗುರ ಅಡವಿಟ್ಟು ಸಾಲ ಪಡೆದು ಇನ್ನುಳಿದ ಒಡವೆಗಳನ್ನು ತೋವಿನಕೆರೆಯ ಭಾಗ್ಯಲಕ್ಷಿö್ಮÃ ಜ್ಯೂವೆರ‍್ಸ್ಗೆ ಹೊಸದಾಗಿ ಸರ ತಾಳಿ ಓಲೆ ಮಾಡಿಕೊಡುವಂತೆ ಕೊಟ್ಟು ಬಂದಿದ್ದಾರೆ.

You may have missed