web stats

Madhugirinews

#1NewsofMadhugiri

ಟಾಟಾ ಏಸ್ ಸಹಿತ ವ್ಯಕ್ತಿ ಸಜೀವ ದಹನ ಕೊಲೆಯ ಶಂಕೆ

ತುಮಕೂರು: ಅನುಮಾನಾಸ್ಪದವಾಗಿ ತನ್ನ ಟಾಟಾ ಏಸ್ ವಾಹನದ ಸಹಿತ ವ್ಯಕ್ತಿಯೊಬ್ಬ ಸುಟ್ಟು ಕರಕಲಾದಂತಹ ಘಟನೆ ಗುರುವಾರ ರಾತ್ರಿ ನಡೆದಿದ್ದು ಘಟನೆಯು ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪಾವಗಡ ತಾಲೂಕಿನ ಬಳ್ಳಾರಿ ರಸ್ತೆಯ ವೀರಮ್ಮನಹಳ್ಳಿ ಗೇಟ್ ನಿಂದ ಪಲವಳ್ಳಿಗೆ ಬರುವ ಮಾರ್ಗ ಮಧ್ಯದ ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ ಶುಕ್ರವಾರ ಬೆಳಗಿನ ಜಾವ 5 ಗಂಟೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

ದುರ್ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನು ವೈ ಎನ್ ಹೊಸಕೋಟೆ ಗ್ರಾಮದ ಸುಮಾರು 45 ವರ್ಷದ ರವಿಕುಮಾರ್ s/o ನಾರಾಯಣಪ್ಪ ಎಂದು ತಿಳಿದಿದ್ದು ಇವರಿಗೆ ಪತ್ನಿ ಮತ್ತು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿ ಮೇರೆಗೆ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡಿದ್ದು ವ್ಯಕ್ತಿಯ ಈ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ತುಮಕೂರು ಹೆಚ್ಚುವರಿ ಎಸ್ ಪ ಮರಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may have missed