
ಮಧುಗಿರಿ: ಒಂದು ಕಾಲದಲ್ಲಿ ಈ ಭಾಗದ ರೈತರು ಕಬ್ಬು, ಮೆಣಸಿನ ಕಾಯಿ, ಹೊಗೆ ಸೊಪ್ಪು ಬೆಳೆಯುತ್ತಿದ್ದರು ಸತತ ಬರಗರದಿಂದ ರೈತರ ಬೆಳೆಗಳು ಕಣ್ಮರೆಯಾಗಿವೆ ನಾನು ಗೆದ್ದರೆ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳು ತರುವ ಮೂಲಕ ರೈತರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಲೋಕಸಭಾ ಚುನಾವಣೆಯ ಎನ್.ಡಿ.ಎ ಅಭ್ಯರ್ಥಿ ವಿ ಸೋಮಣ್ಣ ಹೇಳಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ತೆರೆದ ವಾಹನದಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು ರೈತರ ಬದುಕು ಕಂಗಾಲಾಗಿ ಜೀವನ ಸಾಗಿಸಲು ಕಷ್ಟಕರವಾಗಿದೆ ಈ ಬಗ್ಗೆ ಈಗಾಗಲೇ ನಾನು ಕ್ರಿಯಾ ಯೋಜನೆಯನ್ನು ತಯಾರಿಸಿಕೊಂಡಿದ್ದೇನೆ ಎಂದರು. ನಿಮ್ಮ ಪ್ರತಿಯೊಂದು ಮತಕ್ಕೆ ಬೆಲೆ ಇದೆ ಇದು ದೇಶದ ಚುನಾವಣೆ ಭಾರತೀಯ ಸಾರ್ವಭೌಮತದ ಚುನಾವಣೆಯಾಗಿದೆ. ಇದು ಸಿದ್ದರಾಮಯ್ಯನವರ 2000 ಗ್ಯಾರಂಟಿಯ ಚುನಾವಣೆ ಅಲ್ಲ ದೇಶವನ್ನು ಸುಭದ್ರವಾಗಿ ಸಂರಕ್ಷಣೆ ಮಾಡಿ ದೇಶದ 142 ಕೋಟಿ ಭಾರತೀಯರನ್ನು ಸಂತೃಪ್ತಿ ಮಾಡುವ ಚುನಾವಣೆಯಾಗಿದೆ ದೇಶದ ಉಳಿವಿಗಾಗಿ ನನಗೆ ಮತ ನೀಡಿ ಮೋದಿಯವರ ಕೈ ಬಲಪಡಿಸಿ ಎಂದರು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಅಭಿವೃದ್ಧಿಯ ಕಾರ್ಯವನ್ನು ಕೈಗೊಳ್ಳಲು ನರೇಂದ್ರ ಮೋದಿಯವರ ಕೈ ಬಲಪಡಿಸಲು ತಾವುಗಳು ನಮ್ಮನ್ನು ಜಯಶೀಲರನ್ನಾಗಿ ಮಾಡಿದರೆ ನರೇಂದ್ರ ಮೋದಿ ಅವರನ್ನು 3 ನೇ ಬಾರಿಗೆ ಪ್ರಧಾನಯಾಗುತ್ತಾರೆ ಎಂದರು.
ಸಿದ್ಧರಾಮಯ್ಯನವರ ಎರಡು ಸಾವಿರ ಶಾಶ್ವತವಲ್ಲ ನಮಗೆ ದೇಶ ಮುಖ್ಯ ದೇಶದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಧ್ಯೇಯ. ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವ ನೀರಾವರಿ, ಕೃಷಿ ಕ್ಷೇತ್ರ, ಕೈಗಾರಿಕೆ, ಶಿಕ್ಷಣ, ಪ್ರವಾಸೋಧ್ಯಮ ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ಕೈಗೊಂಡು ಅಭಿವೃದ್ಧಿಯ ಕಾರ್ಯವನ್ನು ಮಾಡಲು ನಮ್ಮನ್ನು ಜಯಶೀಲರನ್ನಾಗಿ ಮಾಡಿ ಎಂದು ವಿ ಸೋಮಣ್ಣ ಮನವಿ ಮಾಡಿದರು.
ಬಿಜೆಪಿ ಮುಖಂಡ ಎಲ್ ಸಿ ನಾಗರಾಜು ಮಾತನಾಡಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಒತ್ತಾಯ ಮೇರೆಗೆ ಇಂಡಿಯಾ ಅಭ್ಯರ್ಥಿಯಾಗಿ ಸೋಮಣ್ಣ ಅವರನ್ನು ಕಳುಹಿಸಲಾಗಿದೆ. ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ಸೋಮಣ್ಣನವರೇ ಸೂಕ್ತ ಅಭ್ಯರ್ಥಿ. ಸೋಮಣ್ಣನವರ ಗೆಲುವು ನಿಶ್ಚಿತ, ಜೆಡಿಎಸ್ ಮತ್ತು ಬಿಜೆಪಿ ಎರಡು ಸೇರಿ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆ ತರಲು ಸಂಕಲ್ಪ ಮಾಡಿದೆ ಎಂದರು. ನೀರಾವರಿ ಯೋಜನೆಗಳು ಜಾರಿಯಾದರೆ ಈ ಭಾಗದ ಜನತೆ ಬದುಕು ಹಸನವಾಗುತ್ತದೆ ಎಂದರು.
ಈ ಭಾಗದಲ್ಲಿ ಕೃಷಿ ಮತ್ತು ಉದ್ಯೋಗದ ವ್ಯವಸ್ಥೆ ಇಲ್ಲದೆ ಗುಳೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಈ ಭಾಗದಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡಲು ಈಗಾಗಲೇ ಮನವಿ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಂ.ವಿ ವೀರಭಧ್ರಯ್ಯ ಮಾತನಾಡಿ ಪ್ರಧಾನ ನರೇಂದ್ರ ಮೋದಿಯವರು ಕೈಗೊಂಡಿರುವ ಅಭಿವೃದ್ಧಿಯ ಕಾರ್ಯಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚಿಗೆ ವ್ಯಕ್ತಪಡಿಸಿದೆ ನಮ್ಮ ದೇಶದ ಜನತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಯುವ ಜನತೆಗಳು ಅತಿ ಹೆಚ್ಚು ಮತ ನೀಡಿ ಜಯಶೀಲರನ್ನಾಗಿ ಮಾಡುವ ಹೋಣೆ ನಮ್ಮ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಹೊಸಹಳ್ಳಿ ಪ್ರಕಾಶ್, ಮುಖಂಡರಾದ ವಿಜಿ ರೆಡ್ಡಿ, ನಾಗಭೂಷಣ್ ರೆಡ್ಡಿ. ಸುಧಾಕರ್ ರೆಡ್ಡಿ, ಮೋಹನ್ ರೆಡ್ಡಿ, ಅಂಜನ ರೆಡ್ಡಿ. ಹರೀಶ್ ರೆಡ್ಡಿ ಮಧುಸೂಧನ್ ರೆಡ್ಡಿ, ದಾಳಪ್ಪ, ನಾಗರಾಜು. ಸಾಗರ್, ದಿವಾಕರ್. ರಕ್ಷಿತ್, ಚೇತನ್ ಗೌಡ. ರಾಜಶೇಖರ್ ರೆಡ್ಡಿ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು