
ಮಧುಗಿರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸೌಲಭ್ಯಗಳು ಮರೀಚಿಕೆ
ಮಧುಗಿರಿ ನ್ಯೂಸ್ ಡೆಸ್ಕ್
ಸರಕಾರ ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸಲು ಕೋಟ್ಯಾಂತರ ರೂ ವೆಚ್ಚ ಮಾಡುತ್ತಿದ್ದೆ ಆದರೆ ಇಲ್ಲಿ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬAತೆೆ ಎಲ್ಲಾ ಸೌಕರ್ಯಗಳಿದ್ದರು ಇಲ್ಲಿನ ಸಿಬ್ಬಂದಿಗಳೇ ಸೌಲಭ್ಯ ವಂಚಿತರನ್ನಾಗಿಸುತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಮಧುಗಿರಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಮೂಲ ಸೌಕರ್ಯಗಳ ಕೊರತೆ ಎದುರಾಗಿದ್ದು ಇಲಾಖೆಯ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕುತಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯವಿಲ್ಲ. ಸಂಜೆ ವೇಳೆ ಬಸ್ ನಿಲ್ದಾಣದಲ್ಲಿ ಕಗ್ಗತ್ತಿಲಿನಲ್ಲಿ ಪ್ರಯಾಣಿಕರ ಪರದಾಟ ಸಾರ್ವಜನಿಕರು ಬಸ್ಟಾಂಡ್ ನ ವ್ಯವಸ್ಥಾಪಕರನ್ನು ಕೇಳಿದಾಗ ವಿದ್ಯುತ್ ಬಿಲ್ ಹೆಚ್ಚುವರಿಯಾಗಿ ಬರುತ್ತಿದೆ ಎಂದು ಬಸ್ ನಿಲ್ದಾಣದ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ, ನಾವು ಎಷ್ಟು ಬಾರಿ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿದರೆ ಅದರಲ್ಲಿ ಕೈಗೊಳ್ಳುತ್ತಾರೆ ಎಂದು ನಿಲ್ಲಿಸಲಾಗಿದೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.

ಸಾರ್ವಜನಿಕರಿಗೆ ಕನಿಷ್ಠ ಸೌಲಭ್ಯ ನೀಡದ ಸಾರಿಗೆ ಇಲಾಖೆಯ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕುತಿದ್ದು ಇನ್ನಾದರೂ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರ ನೋಡಬೇಕಿದೆ. ಸಾರಿಗೆ ಇಲಾಖೆಯ ಪ್ರಯಾಣಿಕರಿಂದ ಪ್ರತಿಯೊಂದು ತೆರಿಗೆಯು ವಸೂಲಿ ಮಾಡುತಿದ್ದು ಕನಿಷ್ಠ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಮತು ಬೆಳಕಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲ ಮತ್ತು ನಿರ್ಲಕ್ಷö್ಯ ವಹಿಸಿರುವುದ ಯಕ್ಷ ಪ್ರಶ್ನೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರಿಗೆ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿದೆ ಇದರ ಬಗ್ಗೆ ಡಿಪೋ ಮ್ಯಾನೇಜರ್ ಗೆ ಪ್ರಯಾಣಿಕರು ದೂರು ನೀಡಿದರೂ ಕೂಡ ಸರಿಪಡಿಸುವುದಿಲ್ಲ ವೆಂದು ಆರೋಪಿಸಿದ್ದಾರೆ ಇನ್ನಾದರೂ ಸಂಬಂಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಾರೆ ಇಲ್ಲವೋ ಹಾಗೂ ಕ್ರಮ ಕೈಗೊಳ್ಳುತ್ತಾರ ಕಾದುನೋಡಬೇಕಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು