web stats

Madhugirinews

#1NewsofMadhugiri

ಕೊಡಿಗೇನಹಳ್ಳಿಯ ಮುತ್ಯಾಮ್ಮ ದೇವಿಗೆ ಆರತಿ ಸೇವೆ

ಮಧುಗಿರಿ: ಜಯಮಂಗಲಿ ನದಿಯ ತಟದಲ್ಲಿ ಚದುರಿದ ಮನೆಗಳು ಕಟ್ಟಿಕೊಂಡು ಒಕ್ಕಲುತನವನ್ನು ನಂಬಿರುವ ರೈತ ಕುಟುಂಬಗಳು ಮುತ್ಯಾಮ್ಮ ದೇವಿಗೆ  ಆರತಿ ಸೇವೆ ನೆರವೇರಿಸಿದರು.

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಕುಟುಂಬಗಳು ಹಾಗೂ ಅವರು ಸಾಕಿರುವ ದನ-ಕರುಗಳು ಮತ್ತು ಕುರಿ-ಮೇಕೆಗಳಿಗೆ ರೋಗ ರುಜಿನ ಕಾಡದಂತೆ, ಆರೋಗ್ಯವಾಗಿ ಇರಲಿ ಎಂಬ ನಂಬಿಕೆಯಿAದ ಹೋಬಳಿಯಲ್ಲಿ ಪ್ರಸಿದ್ದ ದೇವತೆಯಾದ ಮುತ್ಯಾಲಮ್ಮ ಗ್ರಾಮ ದೇವತೆಯನ್ನು ಕರೆತಂದು, ಹಸಿರು ಚಪ್ಪರ ಜತೆಗೆ ಶಾಮಿಯಾನ ಹಾಕಿಸಿ, ಆರತಿ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿದರು.

ಈ ಭಾಗದ ರೈತರು 3 ಅಥವ 5 ವರ್ಷಕ್ಕೊಮ್ಮೆ ಮುತ್ಯಾಲಮ್ಮದೇವಿಯನ್ನು ಕರೆ ತಂದು ದೇವಿಗೆ ಆರತಿ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ ನಾವು ಸಾಕುವ ಪ್ರಾಣಿಗಳು ಅರೋಗ್ಯವಾಗಿರುತ್ತವೆ. ಮತ್ತು ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿ, ಬೆಳೆ ಬೆಳೆಯಾಗುತ್ತದೆ ಎಂಬುದು ಈ ಭಾಗದ ರೈತರ ನಂಬಿಕೆಯಾಗಿದೆ.
ಕುರಿಗಾಹಿಗಳು ತಮ್ಮ ಕುರಿಗಳ ಮಂದೆಯನ್ನು ಅಪ್ಪಿಕೊಂಡು ಬಂದು, ಪ್ರತಿ ವರ್ಷದಂತೆ ದೇವಿಗೆ ಪ್ರದಕ್ಷಿಣೆ ಹಾಕಿಸಿ, ತಾವೂ ದೇವಿಯ ದರ್ಶನವನ್ನು ಪಡೆದರು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಗ್ರಾಮಸ್ಥರು ದೇವಿಯ ದರ್ಶನ ಪಡೆದರು.

 

You may have missed