
ಮಧುಗಿರಿ: ಪೂರ್ವಜರ ಕಾಲದಲ್ಲಿ ಯಾವುದೆ ವೈದ್ಯಕೀಯ ಸೇವೆ ಇಲ್ಲದ ಸಂದರ್ಭದಲ್ಲಿ ಕರವುಗಲ್ಲು ನಂಬಿಕೊAಡು ಪೂಜೆ ಪುನಸ್ಕಾರಗಳು ಮಾಡಲಾಗುತಿತ್ತು ಎಂದು ಧರ್ಮದರ್ಶಿ ನಾಗರಾಜ ಶಾಸ್ತಿçà ತಿಳಿಸಿದರು.
ತಾಲೂಕಿನ ಐ.ಡಿ ಹಳ್ಳಿ ಹೋಬಳಿಯ ತಾಡಿ ಗ್ರಾಮದಲ್ಲಿ ನೂತನ ಕರವುಗಲ್ಲು(ಗೊಡ್ಡರಾಯ) ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಹಿರಿಯರ ತಲೆಮಾರುಗಳಿಂದ ನಂಬಿಕೆಕೊAಡು ಬರುತಿದ್ದ ಕರವುಗಲ್ಲು ಇತ್ತೀಚಿಗೆ ಕಾಮಗಾರಿ ಮಾಡುವ ವೇಳೆ ಧ್ವಂಸವಾಗಿತ್ತು. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮದ ಎಲ್ಲಾ ಸಮುದಾಯದವರು ಒಟ್ಟೂಗೂಡಿ ಕಳೆದ ಮೂರು ದಿನಗಳಿಂದ ಪುನರ್ ಪ್ರತಿಷ್ಠಾಪನೆ ಮಾಡಲು ಸಹಕರಿಸಿದ್ದಾರೆ ಎಂದರು.
ದೊಡ್ಡದಾಳವಟ್ಟ ಧರ್ಮದರ್ಶಿ ತಾಡಿ ಶಿವರಾಂ ಮಾತನಾಡಿ ಗ್ರಾಮಸ್ಥರ ಒತ್ತಾಯಸಂತೆ ಗ್ರಾಮದ ಮುಖ್ಯದ್ವಾರದಲ್ಲಿ ಕರವುಗಲ್ಲು ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದಿದೆ. ಗ್ರಾಮದಲ್ಲಿ ಯಾವುದೆ ಕೇಡು ಬಾರದಂತೆ ಬುಧವಾರದಿಂದ ಪೂಜಾ ಪುನಸ್ಕಾರಗಳು ನಡೆದಿದ್ದು ಕಳಸ ಸ್ಥಾಪನೆ, ಕಲಾಕರ್ಷಣೆ, ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಕುಂಭಾಭೀಷೇಕವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದೆ ಎಂದರು.
ಎಪಿಎAಎಸಿ ಅಧ್ಯಕ್ಷ ಪಿ.ಟಿ ಗೋವಿಂದಪ್ಪ ಮಾತನಾಡಿ ಇಂದು ಶುಭದಿನ ದಿನ ಗ್ರಾಮದ ಗೌಡರು, ಶಾನಭೋಗರು ಆಯಗಾರರು ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದವರ ಸಹಕಾರದಿಂದ ಈಶಾನ್ಯ ದಿಕ್ಕಿನ ಗ್ರಾಮದ ಮುಂಭಾಗ ಕರವುಗಲ್ಲು ಸ್ಥಾಪನೆ ಮಾಡಿದ್ದು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಪೂಜೆ ಪುನಸ್ಕಾರಗಳು ಹಮ್ಮಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಿ.ವಿ ನಾಗರಾಜು, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಶಿವರಾಮಪ್ಪ, ನಾಗಪ್ಪ, ಮುಖಂಡರಾದ ರಾಜಣ್ಣ, ನಾಗೇಗೌಡ, ನಾಗರಾಜು, ದಾಳಪ್ಪ ದೊಡ್ಡನಾಗಪ್ಪ, ಶಿವರಾಮಪ್ಪ, ನರಸಿಂಹಮೂರ್ತಿ, ಪ್ರಕಾಶ್ ಸ್ವಾಮಿ, ನಾಗಭೂಷಣ್, ಗೋಪಿನಾಥ್, ಸೂರ್ಯಪ್ರಕಾಶ, ಮುರಳಿ ಟಿ.ಎಸ್. ನರಸಿಂಹಮೂರ್ತಿ ಹಾಜರಿದ್ದರು.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್