
ಮಧುಗಿರಿ: ರಾಜ್ಯದಲ್ಲಿ ಧ್ವನಿಲ್ಲದವರ ಪರವಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದು ವಿರೋಧ ಪಕ್ಷದವರ ಯಾವ ಟೀಕೆಗೂ ಬಗ್ಗಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ತಾಲೂಕಿನ ಕೊಡಿಗೇಹಳ್ಳಿಯ ಬೆಸ್ಕಾಂ ನೂತನ ಪೊಲೀಸ್ ಠಾಣೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಧ್ವನಿ ಇಲ್ಲದವರ, ಬಡವರ, ಅಹಿಂದ ಜನರ ಆಶೀರ್ವಾದದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹೊಟ್ಟೆ ತುಂಬಿದವರು ಮಾಡುವ ಟೀಕೆಗೆಲ್ಲ ನಾವು ಬಗ್ಗುವುದಿಲ್ಲ ಎಂದರು. ಈ ಮಧುಗಿರಿಯ ಜನ ನನ್ನನ್ನು ಸಾಕಿ ಬೆಳೆಸಿದ್ದು ಶಾಸಕನಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಕೆಪಿಸಿಸಿಯ ರಾಜ್ಯ ಅಧ್ಯಕ್ಷನಾಗಿ ಈಗ ಗೃಹ ಸಚಿವ ನಾಗಿದ್ದೇನೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದವೇ ಕಾರಣ. ಹಾಗೆಯೇ ಮಧುಗಿರಿಗೆ ನನ್ನ ಕೈಲಾದ ಸೇವೆಯನ್ನ ಮಾಡಿದ್ದೇನೆ. ಈ ಕಟ್ಟಡ 1954 ರಲ್ಲಿ ನಿರ್ಮಾಣವಾಗಿದ್ದು, ಈಗ. ಹೊಸದಾಗಿ ನಿರ್ಮಿಸಲಾಗಿದೆ. ರಾಜಣ್ಣನವರ ಮಾತಿನಂತೆ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಕೇAದ್ರದಿAದ ಉತ್ತಮ ಪೊಲೀಸ್ ಇಲಾಖೆ ಎಂಬ ಗೌರವ ಕೂಡ ಸಿಕ್ಕಿದ್ದು ಇದು ನಮ್ಮ ಆಡಳಿಕ್ಕೆ ಕನ್ನಡಿಯಾಗಿದೆ. ಕೊರಟಗೆರೆಯಲ್ಲಿ 560 ಕೋಟಿ ವೆಚ್ಚದಲ್ಲಿ 12ನೇ ಪೊಲೀಸ್ ಬೆಟಾಲಿಯನ್ ಕೇಂದ್ರ ಸ್ಥಾಪಿಸಿದ್ದೇವೆ. ಇಂದು ಕೂಡ ಮಧುಗಿರಿಯಲ್ಲಿ 36 ಕೊರಟಗೆರೆಯಲ್ಲಿ 36 ಪೊಲೀಸ್ ವಸತಿ ಗೃಹಗಳನ್ನ ಲೋಕಾರ್ಪಣೆ ಮಾಡಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಬಾರಿ ಅಂದರೆ 17ನೇ ಬಾರಿ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಯಾರು ಹೇಳಿ ಕೊಡಬೇಕಾಗಿಲ್ಲ ಎಂದು ತಿಳಿಸಿದರು.
ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ ಪರಮೇಶ್ವರ್ ಮಧುಗಿರಿಯ ಮೂಲ ಹಕ್ಕುದಾರರು. ಅವರ ಸಹಕಾರದಿಂದ ಈ ಕಟ್ಟಡ ನಿರ್ಮಾಣವಾಗಿದೆ. ಬಿಜೆಪಿ ಅರುಣ್ ಚಕ್ರವರ್ತಿ ರವರು ಸಂಪೂರ್ಣ ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿ ಗೃಹ ಖಾತೆಯನ್ನು ಪರಮೇಶ್ವರ್ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಹಿಂದೆ ಕೂಡ ಮಧುಗಿರಿಯಲ್ಲಿ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿದ್ದಾರೆ. ಬರಗಾಲದಿಂದ ಈ ಭಾಗದ ರೈತರು ಕಷ್ಟ ಪಡುತ್ತಿದ್ದು ಎತ್ತಿನಹೊಳೆ ಯೋಜನೆಯು ವರದಾನವಾಗಿದ್ದು 44 ಕೆರೆಗಳಿಗೆ ನೀರು ತುಂಬಿಸುತ್ತಿದ್ದೇವೆ. ಇದು ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತದೆ. 18 ಹಾಗೂ 8 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಿಸುತ್ತಿದ್ದು ರಸ್ತೆ ಹಾಗೂ ಅಂತರ್ಜಲ ವೃದ್ಧಿಯಾಗಲಿದೆ ಎಂದರು.
ಈ ಭಾಗದ ಹೆಣ್ಣು ಮಕ್ಕಳು ಬೇರೆ ಕಡೆ ಉದ್ಯೋಗಕ್ಕೆ ಹೋಗುತ್ತಿದ್ದು ಮುಂದಿನ ದಿನದಲ್ಲಿ ನಾವೇ ಇಲ್ಲಿ ಗಾರ್ಮೆಂಟ್ಸ್ ಆರಂಭಿಸಲಿದ್ದೇವೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದು ಜನರು ಸ್ಮರಿಸಬೇಕಿದೆ. ಅಲ್ಪಸಂಖ್ಯಾತರಿಗೆ ಉತ್ತಮ ಕಾರ್ಯಕ್ರಮವನ್ನು ನಮ್ಮ ಸರ್ಕಾರ ನೀಡಿದೆ. ಅವರ ಕಲ್ಯಾಣಕ್ಕಾಗಿ ಎಲ್ಲ ಸೌಲಭ್ಯವನ್ನು ನೀಡುತ್ತಿದ್ದೇವೆ. ಮುಂದೆ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನ ಮಾಡಲೇಬೇಕು. ಪ್ರಜಾಪ್ರಭುತ್ವಕ್ಕಾಗಿ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವ ಸಲುವಾಗಿ ಚುನಾವಣೆಯನ್ನು ಮಾಡಲೇಬೇಕು ಎಂದರು.
ಈ ಸಂದರ್ಭದಲ್ಲಿ ಡಿಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಕೇಂದ್ರ ವಲಯ ಮಹಾ ನಿದೇರ್ಶಕ ಲಾಭೂರಾಮ್, ಎಸ್.ಮುರುಗನ್ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಬಿಎಂಟಿಸಿ ಉಪಾಧ್ಯಕ್ಷ ನಿಖೇತ್ ರಾಜಮೌರ್ಯ, ಎಎಸ್ಪಿ ಪುರುಷೋತ್ತಮ್, ಗೋಪಾಲ್, ಡಿವೈಎಸ್ಪಿ ಮಂಜುನಾಥ್, ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಸಿಪಿಐ ಹನುಮಂತರಾಯಪ್ಪ, ಪಿಎಸೈ ಶ್ರೀನಿವಾಸ್ ಪ್ರಸಾದ್, ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಚಂಧ್ರಶೇಖರ್ ಗೌಡ ಮುಖಂಡರಾದ ಪಿ.ಸಿ.ಕೃಷ್ಣ ರೆಡ್ಡಿ, ಕಾಂತರಾಜು, ಆದಿನಾರಾಯಣ ರೆಡ್ಡಿ, ಜೆಡಿ ವೆಂಕಟೇಶ್ ಹಾಜರಿದ್ದರು.
ಇದು ಪೊಲೀಸ್ ಇಲಾಖೆಯ ಕಾರ್ಯಕ್ರಮವಾಗಿದ್ದು ಎಲ್ಲರನ್ನೂ ಆಹ್ವಾನಿಸಿದ ಎಸ್ಪಿ ಅಶೋಕ್ ಕೆ.ವಿ. ರವರು ವೇದಿಕೆಯಲ್ಲಿ ಆಸೀನರಾಗಿದ್ದ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಯಾಗಿ ಹಾಗೂ ಮಧುಗಿರಿ ಕ್ಷೇತ್ರದ ದಂಡಾಧಿಕಾರಿಗಳಿಗೆ ಸ್ವಾಗತ ಕೋರುವುದನ್ನು ಮರೆತು ಅವರಿಗೆ ಅಪಮಾನ ಮಾಡಿದ್ದಾರೆಂದು ನೆರೆದಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಮಾತನಾಡುತ್ತಿದ್ದು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 1999 ರ ಚುನಾವಣೆಯಲ್ಲಿ ಹೋಬಳಿಯ ಗುಟ್ಟೆ ಗ್ರಾಮದ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲಾ.ರಾಜಣ್ಣ ನಿನಗೆ ರಾಜಕೀಯ ಸಾಕಾಗಿದೆ ಅಂತಾ ನೀನು ಹೇಳ ಬೇಡಾ ಅದನ್ನು ಜನರು ಹೇಳುತ್ತಾರೆ ಸಹಕಾರಿ ಕ್ಷೇತ್ರದಲ್ಲಿ ಬಡವರ ಪರವಾಗಿ,ಬೀದಿ ಬದಿ ವ್ಯಾಪಾರಿಗಳ ಪರವಾಗಿ ಸಾಲ ಸೌಲಭ್ಯಗಳನ್ನು ನೀಡುವುದರ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ನಿನ್ನದ್ದಾಗಿದೆ.-ಡಾ.ಜಿ.ಪರಮೇಶ್ವರ ಗೃಹ ಸಚಿವ.
ಎಫ್ ಎಸ್ ಎಲ್ ಘಟಕ
ಹಿಂದೆ ತುಮಕೂರಿಗೆ ವಿವಿ ಮಂಜೂರು ಮಾಡಿದ್ದು ಉತ್ತಮ ಹೆಸರನ್ನು ಗಳಿಸಿದೆ. ಮಧುಗಿರಿ ಕ್ಷೇತ್ರದಲ್ಲಿ ರಾಜಣ್ಣ ಉತ್ತಮವಾದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಮಧುಗಿರಿಯನ್ನ ತುಮಕೂರು ಮಾಡಲು ಹೊರಟಿದ್ದಾರೆ. ಈ ವಿಚಾರದಲ್ಲಿ ಅವರ ಕಾರ್ಯಕ್ಕೆ ಜಯ ಸಿಗಲಿ. ನಾನು ಅವರ ಬೆಂಬಲಕ್ಕೆ ಇರುತ್ತೇನೆ ತುಮಕೂರು ಜಿಲ್ಲೆಯಲ್ಲಿ 36 ಕೋಟಿ ವೆಚ್ಚದ ಎಫ್ ಎಸ್ ಎಲ್ ಘಟಕ ನಿರ್ಮಾಣ ನಿರ್ಮಿಸಲು ಮುಂದಾಗಿದ್ದೇವೆ ಎಂದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್