web stats

Madhugirinews

#1NewsofMadhugiri

ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು

ಮಧುಗಿರಿ: ಕುರಿಗಾಹಿಗಳಿಗೆ ಅನುಕೂಲವಾಗಲು 10 ಕುರಿಗಳನ್ನು ಖರೀಧಿ ಮಾಡಲು ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗವು ಬರಪೀಡಿತ ಪ್ರದೇಶವಾಗಿದ್ದು ಬಹುತೇಕ ರೈತರು ಹೈನುಗಾರಿಕೆ ಹಾಗೂ ಕುರಿಗಳನ್ನು ನಂಬಿ ಜೀವನ ಮಾಡುತಿದ್ದಾರೆ. ಸಂಘದಲ್ಲಿರುವ ಸದಸ್ಯರಿಗೆ ಪಟ್ಟಿ ಮಾಡಿ ಅರ್ಹರನ್ನು ಆಯ್ಕೆ ನೀಡಿದರೆ ಸುಮಾರು 10 ರಿಂದ 15 ಕುರಿಗಳನ್ನು ಖರೀಧಿಸಲು ಸಾಲ ಸೌಲಭ್ಯ ಒದಗಿಸುತ್ತೇನೆ ಎಂದರು.

ಇನ್ನೂ ಪ್ರತಿ ವಾರ ಕುರಿ ಸಂತೆ ಬೇರೆ ಕಡೆ ತೆರಳುತ್ತಾರೆ ಇದೇ ಸಂಘದ ಅಡಿಯಲ್ಲಿ ಕುರಿ ಸಂತೆ ನಡೆಸಲು ಸರ್ವೆ ನಂ 160 ರಲ್ಲಿ ಸುಮಾರು 5 ಎಕರೆ ಜಾಗವನ್ನು ತಕ್ಷಣ ಮಂಜೂರು ಮಾಡಲು ಸ್ಥಳದಲ್ಲಿದ್ದ ತಹಶಿಲ್ದಾರ್ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಶು ಪಾಲನ ಇಲಾಖೆಯ ಸಹಾಯಕ ನಿದೇರ್ಶಕ ಡಾ ನಾಗೇಶ್ ಕುಮಾರ್ ಟಿ, ಡಾ ಎಸ್.ಕೆ ಜಗದೀಶ್, ಮೈಲಾರ ಲಿಂಗೇಶ್ವರ ಸ್ವಾಮಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ನಾಗರೆಡ್ಡಿ, ಕಾರ್ಯದರ್ಶಿ ಲಕ್ಷಿö್ಮÃಶ್ ರೆಡ್ಡಿ, ನಿರ್ದೇಶಕರಾದ ಇಬ್ರಾಹೀಂ ಬಾಬು, ಸಿದ್ಧವೀರಯ್ಯ, ಗೋಪಾಲ ರೆಡ್ಡಿ, ನಾರಾಯಣಪ್ಪ, ಶಶಿಧರ್ ಹಾಜರಿದ್ದರು.

You may have missed