web stats

Madhugirinews

#1NewsofMadhugiri

ನಮ್ಮಲ್ಲೆಲ್ಲ ಯುಸ್ ಲೆಸ್ ಆಫೀಸರ್‌ಗಳು-ಕೆ.ಎನ್.ಆರ್. ಆಕ್ರೋಶ

ಮಧುಗಿರಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತಿರುವ ಶಾಸಕ.ಕೆ. ಎನ್.ರಾಜಣ್ಣ ಇಂದು ನಡೆದ ಕೆಡಿಪಿ ಸಭೆಯಲ್ಲಿ ಡಿಸಿ ಶೂಭ ಕಲ್ಯಾಣ್ ಸಮ್ಮುಖದಲ್ಲಿ ಅಧಿಕಾರಿಗಳ ವಿರುದ್ಧ ಹರಿ ಹಾಯ್ದರು. ನಮ್ಮಲಿರುವ ಅಧಿಕಾರಿಗಳು ಯುಸ್ ಲೆಸ್ ಅಧಿಕಾರಿಗಳು ನಿಮ್ಮ ನಡವಳಿಕೆ ಹಿಗೆ ಮುಂದುವರೆದರೇ ಎಲ್ಲರನ್ನು ಮಾರ್ಚ್ನಲ್ಲಿ ವರ್ಗಾವಣೆ ಮಾಡಿಸುತ್ತೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾ.ಪಂ. ಕಚೇರಿಯಲ್ಲಿ ನಡೆದ 2025-26ನೇ ಸಾಲಿನ ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ಉದಾಸೀನ ವರ್ತನೆಯಿಂದ ಆಕ್ರೋಶಗೊಂಡ ಶಾಸಕರು ಕೇವಲ ಪತ್ರ ವ್ಯವಹಾರದಲ್ಲೇ ವರ್ಷಾನುಗಟ್ಟಲೆ ಸಮಯವನ್ನು ಹಾಳು ಮಾಡುತ್ತಿದ್ದೀರಾ ಕೆಲಸವನ್ನು ಮುಗಿಸಲು ಅನುದಾನ ಕೊಟ್ಟರು ಉದಾಸೀನ ಮಾಡುತ್ತಿರುವುದನ್ನು ಸರಿಯಲ್ಲ ಇಂತಹ ಅಧಿಕಾರಿಗಳು ನಮ್ಮ ತಾಲೂಕಿಗೆ ಬೇಕಿಲ್ಲ ಎಂದರು.

ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಅಂಗಡಿ ಗೂಡ ಅಂಗಡಿಗಳನ್ನು ಕಡ್ಡಾಯವಾಗಿ ತಿರುಗೊಳಿಸಬೇಕು ಅವರ್ಗಲ್ಲು ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಇನ್ನು ಮೀನಾ ಮೇಷ ಎಣಿಸುತ್ತಿದ್ದು ಪೊಲೀಸರನ್ನು ಕರೆದುಕೊಂಡು ಬೇಗ ಪೊಲೀಸರನ್ನು ಕರೆಸಿ ಬೇಗ ಕೆಲಸ ಮುಗಿಸಬೇಕು ಎಂದರು.

ಜಿಲ್ಲೆಯಲ್ಲಿ 450 ಕೋಟಿ ಬಳಕೆಯಾಗದೆ ಉಳಿದಿದೆ ಮಧುಗಿರಿಯಲ್ಲೂ ಹದಿಮೂರು ಕೋಟಿ ಕೆಲಸ ಇನ್ನೂ ಆರಂಭಿಸಿಲ್ಲ ಅಧಿಕಾರಿಗಳು 1 ತಿಂಗಳ ಒಳಗಾಗಿ ಗುದ್ದಲಿ ಪೂಜೆ ಮಾಡಿಸಬೇಕು ಇದು ಸರ್ಕಾರದ ಕಾರ್ಯದರ್ಶಿಗಳ ಆದೇಶವಾಗಿದ್ದು ಗಂಭೀರವಾಗಿ ಪರಿಗಣಿಸುವಂತೆ ಕಡಕ್ ಸೂಚನೆ ನೀಡಿದರು. ಅನುದಾನ ನೀಡಿದ್ದರು ಶೇ 30ರಷ್ಟು ಮಾತ್ರ ಕೆಲವಾಗಿದೆ ಉಳಿದ ಕೆಲಸ ಏಕೆ ಮಾಡಿಲ್ಲ ಎಂದು ಶಾಸಕರು ಅಸಮಾಧಾನ ಹೊರಹಾಕಿದರು.

ಆಹಾರ ಇಲಾಖೆಯಲ್ಲಿ ಅನ್ನ ಸುವಿಧ ಯೋಜನೆಯಲ್ಲಿ ಕಳಪೆ ನಿರ್ವಹಣೆ ಬಗ್ಗೆ ಅಧಿಕಾರಿಗಳನ್ನ ಕರಾಟೆಗೆ ತೆಗೆದುಕೊಂಡು 2326 ಹಿರಿಯ ನಾಗರಿಕರಿದ್ದು 326 ಮಂದಿಗೆ ಮಾತ್ರ ಈ ಯೋಜನೆ ತಲುಪುತ್ತಿದೆ ಉಳಿದವರಿಗೆ ಯಾಕೆ ನೀಡಿಲ್ಲ ಎಂದರು ಇದಕ್ಕೆ ಉತ್ತರಿಸಿದ ಆಹಾರ ಶೀರಸ್ದೆ ದಾರ್ ಸುಜಾತ ಈ ಕಾರ್ಯಕ್ರಮಕ್ಕೆ ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು ಇದಕ್ಕೆ ಅಂತಹ ಸೊಸೈಟಿಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಬಕಾರಿ ಇಲಾಖೆಯಲ್ಲಿ ಅಕ್ರಮ ಮಧ್ಯ ಮಾರಾಟದ ಬಗ್ಗೆ ಕ್ರಮ ವಹಿಸಿದ್ದು 153 ಕೇಸ್ ಗಳನ್ನು ದಾಖಲು ಮಾಡಿದ್ದೇವೆ ಎಂದು ಅಧಿಕಾರಿ ಶೀಲತಾ ತಿಳಿಸಿದರು ತಕ್ಷಣ ಪ್ರತಿಕ್ರಿಯಿಸಿದ ಶಾಸಕರು ಹಳ್ಳಿಗಳಲ್ಲಿ ಲಾಭಕ್ಕೋಸ್ಕರ ಮಧ್ಯ ಮಾರಾಟ ಮಾಡುವವರನ್ನು ಹಿಡಿಯುತ್ತೀರಾ ಆದರೆ ಅವರಿಗೆ ಮಧ್ಯ ಸರಬರಾಜು ಮಾಡುವ ಬಾರ್ ಗಳ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಮೊದಲು ಬಾರ್ ಗಳ ಮೇಲೆ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು ಹಾಗೂ ಪ್ರತಿ ಹಳ್ಳಿಗೂ ಸಾರಿಗೆ ಸೌಲಭ್ಯ ಸಿಗಬೇಕು ಈ ನಿಟ್ಟನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಡಿಸಿ ಶುಭ ಕಲ್ಯಾಣ್ ಮಾತನಾಡಿ ತುಮಕೂರು ಗ್ರಾಮಾಂತರದಲ್ಲಿ ಇದೇ ರೀತಿಯ ಸಮಸ್ಯೆ ಇದ್ದು ಹಾಲಿನ ತಹಶಿಲ್ದಾರ್ ಎಲ್ಲವನ್ನು ಬಗೆಹರಿಸಿದ್ದಾರೆ ಅವರ ಬಳಿ ಸಲಹೆ ಪಡೆದು ರಸ್ತೆ ಇಕ್ಕೆಲಗಳಲ್ಲಿರುವ ಗೂಡ ಅಂಗಡಿಗಳನ್ನು ಕಡ್ಡಾಯವಾಗಿ ತೆರವು ಮಾಡಿ ಎಂದರು.

ಜೆಜೆ ಎಂ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ನಾಲ್ಕು ತಿಂಗಳು ಸಮಯವಿದ್ದರೂ ಶೇಕಡ 30ರಷ್ಟು ಮಾತ್ರ ಪ್ರಗತಿಯಾಗಿದೆ 153 ಕಾಮಗಾರಿಗಳಲ್ಲಿ 10 ಮಾತ್ರ ಮುಗಿದಿದೆ ಇಂಥ ಬೇಜವಾಬ್ದಾರಿ ಕೆಲಸ ಮಾಡಲು ನೀವೇ ಬೇಕಾ ಇನ್ನು ಒಂದು ತಿಂಗಳ ಅವಧಿ ಒಳಗಾಗಿ ಉಳಿದ ಕೆಲಸಗಳನ್ನು ಮುಗಿಸಿ ನನಗೆ ವರದಿ ನೀಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕಿಗೆ 6.21ಕೋಟಿ ಬಿಡುಗಡೆಯಾಗಿದೆ 3.85 ಕೋಟಿ ಖರ್ಚಾಗಿದ್ದು ಕೆಲಸ ಮಾತ್ರ ಪ್ರಗತಿಯಲ್ಲಿಲ್ಲ ಕೆಡಿಪಿ ಸಭೆಯ ಮಹತ್ವ ತಿಳಿದಿಲ್ಲವೇ ಪ್ರಗತಿ ಬಗ್ಗೆ ನೆನಪಿರಲಿ ಈ ಬಗ್ಗೆ ಇಒ ಹಾಗೂ ಎಒ ರವರ ಕಾರ್ಯವೈಕರಿ ಬಗ್ಗೆ ಅಸಮದಾನ ಗೊಂಡ ಡಿ.ಸಿ ರವರು ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸದ ಗುಣ ಮಟ್ಟ ಪರಿಶೀಲನೆ ಮಾಡಬೇಕು ಈ ವಿಚಾರವಾಗಿ ನನ್ನ ಕಡೆಯಿಂದ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡುವಂತೆ ಸೂಚಿಸಿದರು.

ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ 5054 – ಮತ್ತು 3054 ಅನುದಾನ ಸಂಸ್ಥೆಯಿAದ ಕೂಡಿದ್ದು ಎಲ್ಲಾ ಕೆಲಸಗಳು ಬಾಕಿ ಇಟ್ಟುಕೊಂಡಿದ್ದೀರಾ ಈ ಬಗ್ಗೆ ಒಂದು ತಿಂಗಳಲ್ಲಿ ಕೆಲಸ ಪೂರ್ಣವಾಗಬೇಕು ಪ್ರಗತಿ ಪಟ್ಟಿಯಲ್ಲಿ 10 ಕೋಟಿಯಲ್ಲಿ ಒಂದುರೂ ಕೂಡ ಖರ್ಚು ಮಾಡಿಲ್ಲ ಎಂದರೆ ಹೇಗೆ ಎಂದ ರಾಜಣ್ಣನವರು ಈ ಅನುದಾನ ಬಿಡುಗಡೆ ಮಾಡಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಹಣ ಕೊಡಿಸುವದಾಗಿ ಡಿಸಿ ಸೂಚಿಸಿದರು ಹಾಗೂ ಎಲ್ಲಾ ಕೆಲದ ಬಿಲ್ ಗಳನ್ನು ಮಾರ್ಚ್ 5 ಅಥವಾ 10 ಒಳಗೆ ಖಜಾನೆಗೆ ತಲುಪಿಸಿ ಹಣ ಪಡೆಯುವಂತೆ ಸೂಚಿಸಿದರು.

You may have missed