web stats

Madhugirinews

#1NewsofMadhugiri

ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್

ಮಧುಗಿರಿ: ಕೊಡಿಗೇನಹಳ್ಳಿಯ ರಾಜ್ಯ ಹೆದ್ದಾರಿಯ ಹಿಂದೂಪುರ-ಮಧುಗಿರಿ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳ ಎರಡು ಬದಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಫುಟ್ ಪಾತ್ ಒತ್ತುವರಿ ತೆರವು ಮಾಡುವಂತೆ ಉಪ ವಿಭಾಗಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ತೆರವು ಮಾಡಲು ಖಡಕ್ ಸೂಚನೆ ನೀಡಲಾಯಿತು.

ಮಧುಗಿರಿ ಪಟ್ಟಣ ತಾ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ಎನ್ ರಾಜಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಸಭೆ ಮುಗಿಸಿದ ಅಧಿಕಾರಿಗಳು ಕೊಡಿಗೇನಹಳ್ಳಿಗೆ ದೌಡಾಯಿಸಿ ಕೊಡಿಗೇನಹಳ್ಳಿ ಗ್ರಾಪಂ ಇಂದ ಹಿಂದೂಪುರದ ರಸ್ತೆ ವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿ ಒತ್ತುವರಿ ಪರಿಶೀಲನೆ ಮಾಡಿ ತುರ್ತಾಗಿ ಒತ್ತುವರಿ ತೆರವು ಮಾಡಿ ಇಲ್ಲದಿದ್ದರೆ ಕಾನೂನು ಮೂಲಕ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪ ವಿಭಾಗಾಧಿಕಾರಿ ಗೋಟುರು ಶಿವಪ್ಪ ನೇತೃತ್ವದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಪಿಡಬ್ಲ್ಯೂಡಿ ಎಇಇ ಸಂಪತ್ ಕುಮಾರ್, ಇಇ ಹನುಮಂತರಾವ್, ಪಿಎಸೈ ಶ್ರೀನಿವಾಸ್, ಕಂದಾಯ ಅಧಿಕಾರಿ ರವೀಂದ್ರ, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್ ಒತ್ತುವರಿ ತೆರವು ಕಾರ್ಯಚರಣೆಯಲ್ಲಿ ಕೊಡಿಗೇನಹಳ್ಳಿ ಗ್ರಾಪಂ ಇಂದ ಕೊಲ್ಲಾಪುರದಮ್ಮ ದೇವಸ್ಥಾನದ ಹಿಂದೂಪುರದ ರಸ್ತೆ ಹೊರಗೆ ರಸ್ತೆಯ ಎರಡು ಬದಿಯಲ್ಲಿ ರಸ್ತೆ ಮದ್ಯ ಮಾರ್ಗದಿಂದ ತುರ್ತಾಗಿ ರಸ್ತೆ ಮಧ್ಯ ಮಾರ್ಗದಿಂದ ಕನಿಷ್ಠ 15 ಮೀಟರ್ ಒತ್ತುವರಿ ತೆರವು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೀದಿ ಬದಿ ಇರುವ ಗೂಡ ಅಂಗಡಿಗಳ ಮಾಲೀಕರು ಕನಿಷ್ಠ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದ್ಯಾವುದಕ್ಕು ಒಪ್ಪದ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಬಂದ ಯಾವುದೆ ಅಂಗಡಿಗಳನ್ನು ಮುಲಾಜಿಲ್ಲದೆ ಮಾರ್ಕ್ ಮಾಡಿ ತೆರವು ಮಾಡಲಾಗುವುದು ಎಂದು ತಿಳಿಸಿದರು.

ಬೀದಿ ಅಂಗಡಿ ಮಾಲೀಕರು ಒಟ್ಟಾಗಿ ಸೇರಿ ಕನಿಷ್ಟ ಬೀದಿ ಬದಿ ವ್ಯಾಪಾರ ಮಾಡಿಕೊಳ್ಳುವಷ್ಟು ಜಾಗದಲ್ಲಿ ವ್ಯಾಪಾರ ಮಾಡಿಕೊಳ್ಳುತ್ತೇವೆ ಮಂಗಳವಾರದೊಳಗೆ ಒತ್ತುವರಿ ತೆರವು ಮಾಡುತ್ತೇವೆ ಅಲ್ಲಿವರೆಗೆ ಸಮಯ ನೀಡಿ ಈ ಬಗ್ಗೆ ಶಾಸಕರನ್ನು ಸಹಿತ ಬೇಡಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

You may have missed