web stats

Madhugirinews

#1NewsofMadhugiri

ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ

ಮಧುಗಿರಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹಾಗೂ ವಿಷಯಗಳನ್ನು ಕಲಿಕಾ ಹಬ್ಬದಲ್ಲಿ ಸ್ಪರ್ಧಿಸಿ, ತಮ್ಮ ಕಲಿಕೆಯನ್ನು ಉತ್ತಮವಾಗಿಸುವ ಅವಕಾಶ ಇದಾಗಿದೆ ಎಂದು ಬಿ.ಆರ್.ಸಿ ಪವನ್ ಕುಮಾರ್ ರೆಡ್ಡಿ ತಿಳಿಸಿದರು.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಪೊಲೇನಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ವ ಶಿಕ್ಷಣ ಅಭಿಯಾನದಡಿ ಶೈಕ್ಷಣಿಕ ಸಾಲಿನ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೋತ್ಸವವನ್ನು ಎಂಬವಿನೂತನ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ. ಕೋವಿಡ್ ನಂತರ ಬಹಳಷ್ಟು ಮಕ್ಕಳು ಕಲಿಕಾ ಕೊರತೆಯನ್ನು ಎದುರಿಸುತಿದ್ದು ಇದರಿಂದ ಪ್ರಶ್ನೆಯೇ ಪ್ರಜ್ಞೆಯಾಗಲಿ ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಕ್ಕಳ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ ಇದಾಗಿದೆ. ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆಯನ್ನು ಹೊರಗೆಳೆಯಲು ಪೂರ್ವ ತಯಾರಿ ನಡೆಸುವ ಹಬ್ಬವೇ ಕಲಿಕಾ ಹಬ್ಬ. ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ ಎಂದರು.

ಇಸಿಒ ಶ್ರೀನಿವಾಸ್ ಎಂ.ಆರ್ ಮಾತನಾಡಿ ವಿಫಲತೆಗಳ ಬಗ್ಗೆ ಚಿಂತಿಸದಿರಿ ಎಂಬAತೆ ಸೋಲು ಗೆಲುವುಗಳ ಸಮಾನ ಸ್ವೀಕರಾದ ಮೋಭಾವವನ್ನು ಮಕ್ಕಳಲ್ಲಿ ಬೆಳಸಲು ಇಂತಹ ಚಟುವಟಿಕೆ ಅವಶ್ಯಕ. ಶಿಕ್ಷಕರು ವರ್ಷವಿಡೀ ಮಕ್ಕಳಿಗೆ ತರಗತಿಯಲ್ಲಿ ಪಾಠಬೋಧನೆ ಮಾಡುವುದರಿಂದ ಪುಸ್ತಕದ ಹುಳಗಳನ್ನಾಗಿ ಮಾಡಿದಂತಾಗುತ್ತದೆ. ಅದನ್ನು ತಪ್ಪಿಸಲು ಚಟುವಟಿಕೆ ಆಧಾರಿತ ಕಲೆಯನ್ನು ಮಕ್ಕಳಲ್ಲಿ ತುಂಬಿದರೆ, ಸೃಜನಾತ್ಮಕ ಕೌಶಲ್ಯಕ್ಕೆ ಅವಕಾಶ ನೀಡಿ, ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಮುಖ್ಯಶಿಕ್ಷಕರಾದ ನರಸಿಂಹಮೂರ್ತಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ದಾಖಲಾತಿ ಸುಧಾರಿಸುವ ಹಾಗೂ ಸಮುದಾಯದ ಜತೆಗೆ ಬಾಂಧವ್ಯ ವೃದ್ಧಿಸುವಲ ಸೇತುವೆಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಆರ್.ಪಿ ಯಶೋಧಮ್ಮ, ಬಿಐಆರ್‌ಟಿ ದಾಸಪ್ಪ, ಮಹದೇವಯ್ಯ, ಮುಖ್ಯಶಿಕ್ಷಕರಾದ ನರಸಿಂಹಮೂರ್ತಿ ಎಂ.ಎಸ್. ಶ್ರೀಕಾಂತ್, ಲಕ್ಷಿö್ಮನರಸಪ್ಪ, ನಟರಾಜು, ಕಲ್ಪನಾ, ಶಾಂತಲಕ್ಷಿö್ಮ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷ ನಾಗರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

You may have missed