
* :ವಿಕಸಿತ ಭಾರತದತ್ತ ನಮ್ಮ ದೇಶ ದಾಪುಗಾಲು ಇಡುತಿದ್ದು ದೇಶವು ಸ್ವಾÀ್ವವಲಂಬಿಯಾಗಿ ಸಧೃಡವಾಗಿ ನಿಂತಿದೆ. ಪ್ರಪಂಚದಲ್ಲಿ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದ್ದು ಮುಂದೆ 2ನೇ ಸ್ಥಾನಕ್ಕೆ ಬರಲಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 101 ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ನಂತರ ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಇಂಡಿಯಾ ಖೇಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ನದಿ ಜೋಡಣೆಯಂತಹ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು ವಾಜಪೇಯಿಯವರು. ಆದರೆ ಇದನ್ನು ಮಾಡಲು ಮೋದಿಯವರೇ ಬರಬೇಕಾಯಿತು ಎಂದರು.
ಇAತಹ ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿಯವರ ಸಾರಥ್ಯ ಅನಿವಾರ್ಯ. ಮೋದಿಯವರು ನನಗೆ ಎರಡು ಖಾತೆ ನೀಡಿ ಕೆಲಸ ಮಾಡು ಎಂದು ಬಿಟ್ಟಿದ್ದಾರೆ. ದೇಶದಲ್ಲಿ ಗ್ರಾಮೀಣಭಾಗದ ಮಕ್ಕಳು ಸೇರಿ 1.78 ಕೋಟಿ ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು ಖೇಲ್ ಇಂಡಿಯಾದಲ್ಲಿ ನೊಂದಣಿ ಮಾಡಿಸಿದ್ದು ಅದಕ್ಕಾಗಿ ಈ ವರ್ಚುವಲ್ ಕಾರ್ಯಕ್ರಮ ನಡೆಸಿದ್ದಾರೆ. ಕಲಿಕೆಯ ಜತೆಗೆ ಕ್ರೀಡೆಗೂ ಆಸಕ್ತಿವಹಿಸಿ ದೇಶದ ಹೆಸರಲ್ಲಿ ಸಾಧನೆ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಈಗ ಜಿಲ್ಲಾಕೇಂದ್ರದಲ್ಲಿ ಆರಂಭಿಸಿದ್ದು, ಭವ್ಯ ಭಾರತದ ಭವಿಷ್ಯಕ್ಕೆ ಯುವಶಕ್ತಿ ಅವಶ್ಯಕತೆಯನ್ನು ಮೋದಿ ಅರಿತಿದ್ದು ಈ ಕಾರ್ಯಕ್ರಮವನ್ನು ವಿಶ್ವದ ದೊಡ್ಡ ರಾಷ್ಟ್ರಗಳು ಒಪ್ಪಿಕೊಂಡಿದೆ ಎಂದರು.
*ವ್ಯಕ್ತಿಗಿಂತ ಪಕ್ಷ ದೊಡ್ಡದು* ಪಕ್ಷಕ್ಕಿಂತ ದೇಶ ದೊಡ್ಡದು ಇಂತಹ ದೇಶಾಭಿಮಾನವನ್ನು ಹೊಂದಿರುವ ಎನ್.ಡಿ.ಎ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಸಂಸದರು ಹಿಂದಿ ಅರ್ಥ ಮಾಡಿಕೊಂಡಿದ್ದರೆ ಸ್ವತಂತ್ರ ಬಂದಾಗಿನಿAದ ಇದುವರೆಗೂ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.1 ಆಗುತಿತ್ತು. ದೇಶದಲ್ಲಿ ಹಿಂದಿ ಸಾಮಾನ್ಯ ಭಾಷೆ, ಹಿಂದಿ ಭಾಷೆ ಸಂವಹನೆಯಿAದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಆದರೆ ಹಿಂದಿ ಕಲಿಯದೆ ಕರ್ನಾಟಕ ಹಾಗೂ ತಮಿಳುನಾಡು ಅಭಿವೃದ್ದಿಯಲ್ಲಿ ಹಿಂದೆ ಉಳಿದಿವೆ ಎಂದು ವಿ ಸೋಮಣ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಸಿ.ನಾಗರಾಜು, ಪುರವರ ಮೂರ್ತಿ, ಟಿ.ಜಿ ಗೋವಿಂದರಾಜು, ಬಿಜೆಪಿ ಜಿಲ್ಲಾ ಒಬಿಸಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಎನ್.ಡಿ.ಎ ಮುಖಂಡರಾದ ಶಿವಲಿಂಗ, ರೆಡ್ಡಿಹಳ್ಳಿ ವೆಂಟಕೇಶ್, ಲಕ್ಷಿö್ಮಪತಿ, ರಾಮದಾಸ್, ಬಸವರಾಜು, ಎಸ್.ಡಿ.ಕೃಷ್ಣಪ್ಪ, ಜಗಣ್ಣ ಹಾಜರಿದ್ದರು.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್