
ಮಧುಗಿರಿ:ಸೀಮಾಂದ್ರ ಗಡಿಭಾಗದ ತೆರೆಯೂರು ಶ್ರೀ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಪರಸ್ಪರ ಎದುರಾಗಿ ಒಬ್ಬರಿಗೂಬ್ಬರು ಕೈಮುಗಿದುಕೊಂಡು ಆತ್ಮೀಯತೆಯಿಂದ ಮಾತನಾಡಿದರು.
ಮಧುಗಿರಿ ತಾಲ್ಲೂಕಿನ ತೆರಿಯೂರು ಗ್ರಾಮದ ಅನ್ನದಾನ ಶ್ರೀ ಸುಬ್ರಮಣ್ಯಶ್ವರಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಭಾಗಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸೋಮಣ್ಣ ಹಾಗೂ ರಾಜಣ್ಣ ಪಕ್ಷದ ಭಿನ್ನಮತ ಮರೆತು ಒಂದಾದರು.
ಮುದ್ದೇನಹಳ್ಳಿ ಬಳಿ ಜಯಮಂಗಲಿ ನದಿಗೆ ಅಡ್ಡಲಾಗಿ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಬ್ಯಾರೇಜ್‌ನ್ನು ಜ 3 ರಂದು ಶಂಕುಸ್ಥಾಪನೆ ನೆರವೇರಲಿದೆ. ಕ್ಷೇತ್ರದ ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ, ರಾಜಣ್ಣ ನೀನು ಯಾವಾಗಲು ನಗುತ್ತಿರಬೇಕು ಚೆನ್ನಾಗಿರಬೇಕು ಎಂದು ಸೋಮಣ್ಣ ತಿಳಿಸಿ ರಾಜಣ್ಣನವರು ನಗುಮೊಗದಲ್ಲೇ ಸೋಮಣ್ಣನವರನ್ನು ಬೀಳ್ಕೊಟ್ಟರು.
ರಾಜೇಂದ್ರ ಅಮಿತ್ ಷಾ ಭೇಟಿ
ಎಂಎಲ್‌ಸಿ ರಾಜೇಂದ್ರ ರವರು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಭೇಟಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸೋಮಣ್ಣ ಯಾಕಪ್ಪ ಹೋಗಬಾರದ ರಾಜೇಂದ್ರ ಯುವ ನಾಯಕನಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಅವರೇನು ಅಮಿತ್ ಷಾ ಮನೆಗೆ ಹೋಗಿಲ್ಲ. ಬಿಜೆಪಿ ಸೇರುತ್ತೀನಿ ಅಂದಿಲ್ಲ. ಇದೊಂದು ಒಕ್ಕೂಟದ ವ್ಯವಸ್ಥೆಯಾಗಿದ್ದು ಅಭಿವೃದ್ಧಿಗಾಗಿ ಭೇಟಿ ನೀಡಿದರೆ ತಪ್ಪೇನು ಇಂತಹ ಅನುಮಾನ ಬೇಡ. ಎಲ್ಲರೂ ಸೇರಿ ಜನರ ಕೆಲಸ ಮಾಡೋಣ ಎಂದರು.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್