
ಮಧುಗಿರಿ: ವಿದ್ಯಾ ದಧಾತಿ ವಿನಯಂ ಎಂಬAತೆ ಯಾವ ವಿದ್ಯೆ ವಿನಯದಿಂದ ಕೂಡಿರುತ್ತದೋ ಆ ವಿಧ್ಯೆ ಬುದ್ಧಿ ಹಾಗೂ ವಿವೇಕಪೂರ್ಣವಾಗಿ ಇರಬೇಕು ಎಂದು ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ರಮಾನಂದ ಮಹಾರಾಜ ಸ್ವಾಮಿಜಿ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ ನವೀನ ಭಾರತ್ ಪಬ್ಲಿಕ್ ಶಾಲೆಯ ನವಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಧ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದುಕೊಂಡರೆ ಸಾಲದು ಅದನ್ನು ಪ್ರಾಯೋಗಿಕವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಧ್ಯಾವಂತರಿಗೆ ವಿನಯತೆಯೇ ಶೋಭೆ ವಿಧ್ಯಾರ್ಥಿಗಳಲ್ಲಿ ಶಿಕ್ಷಣದ ಜತೆ ವಿನಯತೆ ಇಲ್ಲದಿದ್ದರೆ ಶಿಕ್ಷಣ ಪಡೆದರೂ ವ್ಯರ್ಥ ಎಂದರು.
ಮನುಷ್ಯನಿಗೆ ವಿದ್ಯೆ ಜತೆ ಮಾನವೀಯತೆ ಗುಣಗಳು ಇರಬೇಕು. ಸವಾರ್ಯಯಾಮಿ ಇರುವ ಆಯಾ ಧರ್ಮಕ್ಕೆ ಅನುಗುಣವಾಗಿ ಧಾರ್ಮಿಕ ನಂಬಿಕೆ ಇರಬೇಕು ಆಗ ಮಾತ್ರ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ, ವ್ಯವಸಾಯ ಕೂಲಿ ಮಾಡಿಯಾದರೂ ತನ್ನ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸಲು ಪೋಷಕರು ಶ್ರಮಿಸುತ್ತಾರೆ ಜತೆಗೆ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಕಾಳಜಿವಹಿಸಬೇಕಾಗದ ಅನಿವಾರ್ಯತೆ ಇದೆ
ಕೆಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ ಮಕ್ಕಳ ಸರ್ವೋತೋಮುಖ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ, ಶಿಕ್ಷಕರ ಪರಿಶ್ರಮವೇನು ಎಂಬುದು ಪೋಷಕರು ಗಮನಿಸಬೇಕು. ಇತ್ತೀಚಿನ ಮಕ್ಕಳು ಸಹನೆ ಕಳೆದುಕೊಳ್ಳುತಿದ್ದಾರೆ. ಮಕ್ಕಳ ಜತೆಯಲ್ಲಿದ್ದರೂ ನಿಯಂತ್ರಿಸುವುದು ಬಹಳ ಕಷ್ಟದ ಸ್ಥಿತಿ ಎದುರಾಗಿದೆ. ಮಕ್ಕಳಿಗೆ ಶಾಲೆಗೆ ಕಳುಹಿಸುವುದಷ್ಟೇ ಅಲ್ಲದೆ ಅವರ ನಡುವಳಿಕೆ ಬಗ್ಗೆ ಸೂಕ್ಷö್ಮವಾಗಿ ಗಮನಿಸಬೇಕು ಎಂದರು.
ಶಿಕ್ಷಣದಲ್ಲಿ ಶಿಕ್ಷಕರ ಮೇಲೆ ಎಷ್ಟು ಹೋಣೆ ಇರುತ್ತೋ ಪೋಷಕರ ಮೇಲೂ ಅಷ್ಟೆ ಹೊಣೆ ಇರುತ್ತದೆ. ಗ್ರಾಮೀಣಾ ವಿಧ್ಯಾರ್ಥಿಗಳು ಶಿಕ್ಷಣದಲ್ಲಿ ಹಲವು ಸವಾಲುಗಳು ಎದುರಿಸಬೇಕಾಗುತ್ತದೆ ಇದು ಮಕ್ಕಳಿಗೆ ಮಾನಸೀಕವಾಗಿ ಸಿದ್ಧಗೊಳಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಪೋಷಕರು ಮಕ್ಕಳ ಶಿಕ್ಷಣದ ಜತೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಾಜಿವಹಿಸಬೇಕು. ಬೀದಿ ಬದಿ ಆಹಾರದಿಂದ ದೂರವಿರಲಿ ಜತೆ ಮೊಬೈಲ್ ಬಳಕೆಯನ್ನು ನಿಯಂತ್ರಿಸಿದರೆ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಎರಡನ್ನು ವೃದ್ಧಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ನವೀನ ಭಾರತ ಪಬ್ಲಿಕ್ ಶಾಲೆಯ ಅಧ್ಯಕ್ಷ ಚಿಕ್ಕಣ್ಣ ಜಿ.ಎನ್, ಕಾರ್ಯದರ್ಶಿ ಪಲ್ಲವಿ ಶಿವಕುಮಾರ್, ಆಡಳಿತ ಮಂಡಳಿಯ ರಾಮಕೃಷ್ಣ ರೆಡ್ಡಿ, ಸಂಸ್ಥಾಪಕ ನವೀನ್ ಕುಮಾರ್, ಮುಖ್ಯ ಶಿಕ್ಷಕ ರಾಮಚಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್