web stats

Madhugirinews

#1NewsofMadhugiri

480 ಹಾಸಿಗೆಗಳ ಮಹಿಳಾ ವಸತಿ ನಿಲಯಕ್ಕೆ ಶಂಕುಸ್ಥಾಪನೆ

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದಎರಡು ಮುಖಗಳಂತೆ ಒಂದಾಗಿ ಕೆಲಸ ಮಾಡಿದರೆ ಮಾತ್ರಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ನಾನೂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಅವರುಒಂದಾಗಿಅಭಿವೃದ್ಧಿಕಾರ್ಯ ಮಾಡುತ್ತೇವೆ. ಕೇಂದ್ರ ಸರ್ಕಾರದಜೊತೆ ನೀವು ಎಷ್ಟು ದೂರ ಹೋಗುವಿರೊಸರ್ಕಾರ ಅಷ್ಟು ದೂರ, ನೀವು ಎಷ್ಟು ಹತ್ತಿರಬರುವಿರೋ ಅಷ್ಟು ಹತ್ತಿರಕೇಂದ್ರಸರ್ಕಾರ ಬರುತ್ತದೆಎಂದುಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ತುಮಕೂರು ತಾಲೂಕಿನ ಪಂಡಿತನಹಳ್ಳಿ ಹಾಗೂ ಹೆಗ್ಗೆರೆಯಲ್ಲಿ ರೈಲ್ವೆಗೇಟ್ ಭಾಗದಲ್ಲಿ ಮೇಲ್ಸೆತುವೆ ನಿರ್ಮಾಣ ಹಾಗೂ ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯವಸಂತನರಸಾಪುರದಕೈಗಾರಿಕಾ ಪ್ರದೇಶದಒಂದನೇ ಹಂತದ ಪ್ಲಾಟ್ ನಂ.161 ಇ2ರಲ್ಲಿಕೋಟಿರೂ.ವೆಚ್ಚದ 480 ಹಾಸಿಗೆಗಳ ಏಳು ಹಂತಸ್ತಿನ ಉದ್ಯೋಗಿತ ಮಹಿಳೆಯರ ವಸತಿ ನಿಲಯ ನಿರ್ಮಾಣಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ನಮ್ಮಕೇಂದ್ರ ಸರ್ಕಾರ 490 ಕಡೆ 5 ಲಕ್ಷಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ನಿರ್ಮಿಸಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯಕ್ಯಾಂಪಸ್‌ನಲ್ಲಿಉದ್ಯೋಗಿ ಹೆಣ್ಣುಮಕ್ಕಳ ವಸತಿ ನಿಲಯ ನಿರ್ಮಾಣಕ್ಕಾಗಿಒಂದು ತಿಂಗಳಲ್ಲಿ 40 ಕೋಟಿರೂ.ಬಿಡುಗಡೆ ಮಾಡುವುದಾಗಿ ಹೇಳಿದ ಸಚಿವರು, ಇಂತಹ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಿಳಾ ಸಬಲೀಕರಣದ ಹೊಸ ಸಂದೇಶಎAದರು.
ರೈಲ್ವೆಗೇಟ್‌ನಿAದ ಸಾರ್ವಜನಿಕರಿಗೆ ಎಷ್ಟು ತೊಂದರೆಆಗುತ್ತಿದೆಎAದುತಮಗೆಗೊತ್ತಿದೆ. ಜಿಲ್ಲೆಯಎಲ್ಲಾರೈಲ್ವೆ ಗೇಟ್‌ಗಳನ್ನು ತೆರವುಗೊಳಿಸಿ ಅಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಿಜನರಿಗೆ ಅನುಕೂಲ ಮಾಡಲಾಗುವುದು.ಮುಂದಿನ ತಿಂಗಳು ನಾಲ್ಕು ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗುವುದು.ರೈಲ್ವೆಇಲಾಖೆಯಲ್ಲಿಜಿಲ್ಲೆಯ ವಿವಿಧ ಕಾಮಗಾರಿಗಳಿಗೆ 575 ಕೋಟಿರೂ.ಖರ್ಚು ಮಾಡಲಾಗಿದೆ.89 ಕೋಟಿರೂ.ವೆಚ್ಚದಲ್ಲಿತುಮಕೂರುರೈಲು ನಿಲ್ದಾಣ, 24 ಕೊಟಿ ರೂ.ಗಳಲ್ಲಿ ತಿಪಟೂರು ನಿಲ್ದಾಣ ಹಾಗೂ 13 ಕೋಟಿರೂ, ವೆಚ್ಚದಲ್ಲಿಗುಬ್ಬಿರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುತ್ತದೆಎಂದುಸಚಿವ ಸೋಮಣ್ಣಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದಎರಡು ಮುಖಗಳಾಗಿ ಕೆಲಸ ಮಾಡಿದರೆಜನರ ಕೆಲಸ ಮಾಡಲುಸಾಧ್ಯವಾಗುತ್ತದೆ. ಇಲ್ಲವಾದರೆ ಕೆಲಸಕಾರ್ಯಗಳು ಕುಂಠಿತವಾಗುತ್ತವೆ.ಒಕ್ಕೂಟ ವ್ಯವಸ್ಥೆಯಲ್ಲಿಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು. ರಾಜ್ಯದಿಂದಕೇAದ್ರ ಸರ್ಕಾರಕ್ಕೆ 4.5 ಲಕ್ಷಕೋಟಿರೂ. ಜಿಎಸ್‌ಟಿ ಸಂಗ್ರಹವಾಗಿದೆ.ದೇಶದಲ್ಲಿಅತಿ ಹೆಚ್ಚು ಜಿಎಸ್‌ಟಿ ಪಾವತಿಸಿದ ಎರಡನೇರಾಜ್ಯಕರ್ನಾಟಕಆಗಿದೆ.ಆದರೆಕೇಂದ್ರ ಸರ್ಕಾರವುರಾಜ್ಯಕ್ಕೆಕೊಡಬೇಕಾದಜಿಎಸ್‌ಟಿ ಹಣಕೊಟ್ಟಿಲ್ಲ. ನಾವು ಕೊಟ್ಟ 4.5 ಲಕ್ಷಕೋಟಿ ರೂ.ಗಳಿಗೆ ಕೇಂದ್ರಕೊಟ್ಟಿರುವುದು ಕೇವಲ 50 ಸಾವಿರಕೋಟಿರೂ.ಮಾತ್ರ. ನಮಗೆ ಬರಬೇಕಾದನ್ನು ಪಡೆಯಲು ಹೋರಾಟ ಮಾಡಿಯೋ, ಮನವಿ ಮಾಡಿಯೋ ಪಡೆಯುವ ಕೆಲಸದಲ್ಲಿ ಪಕ್ಷಾತೀತವಾಗಿ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್,ಜಿಲ್ಲಾ ಬಿಜೆಪಿ ಅಧ್ಯಕ್ಷರವಿಶಂಕರ್ ಹೆಬ್ಬಾಕ, ರೈಲ್ವೆ ಇಲಾಖೆ ಸಿಎಓ ಅಜಯ್ ಶರ್ಮಾ, ಎಡಿಆರ್‌ಎಂ ಪ್ರವೀಣ್, ಡಿವೈಸಿ ಪ್ರಸಾದ್, ಜಿಲ್ಲಾ ಪಂಚಾಯ್ತಿ ಮಾಜಿಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ವಸಂತನರಸಾಪುರ ಕೈಗಾರಿಕೆಗಳ ಸಂಘದಅಧ್ಯಕ್ಷ ಹರೀಶ್‌ಮೊದಲಾದವರು ಭಾಗವಹಿಸಿದ್ದರು.

You may have missed