
ತುಮಕೂರು: ಜ್ಯುಯಲರಿ ಶಾಪ್ ಮಾಲೀಕನನ್ನು ಮಾರಣಾಂತಿಕ ಚಾಕು ತೋರಿಸಿ ದರೋಡೆಗೆ ಯತ್ನಿಸಿದ ಅಂತರ ರಾಜ್ಯ ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಮಹಾಲಕ್ಷಿ ಬ್ಯಾಂರ‍್ಸ್ ಮತ್ತು ಜ್ಯುಲರಿ ಅಂಗಡಿಗೆ ಡಿ 4 ರಂದು ಡೂಪ್ಲಿಕೇಟ್ ಕಾರ್ ನಂಬರ್ ಬಳಿಸಿ ಬಿಳಿಯ ಬಣ್ಣದ ಮಾರುತಿ ಬಲೆನೊ ಕಾರಿನಲ್ಲಿ ಬಂದ 6 ಜನ ಆರೋಪಿಗಳ ತಂಡ ಚಾಕು ಮತ್ತು ಗಮ್ ಟೇಪ್‌ಗಳನ್ನು ತಂದು ಅಂಗಡಿಯ ಒಳಬಾಗದಲ್ಲಿ ಮಾಲೀಕ ಸುನಿಲ್ ಬಿ. ಮೇಲೆ ಹಲ್ಲೆ ಮಾಡಿ ಚಾಕು ತೋರಿಸಿ ಬೆದರಿಕೆ ಹಾಕಿ ಜ್ಯುಯಲರಿ ಶಾಪ್ ನಲ್ಲಿ ಇದ್ದ ಚಿನ್ನದ ಆಭರಣ ದರೋಡೆ ಮಾಡಲು ಯತ್ನಿಸಿದಾಗ ಆಂಗಡಿ ಮಾಲೀಕ ಕೂಗಿಕೊಂಡಿದ್ದು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡ ಪೊಲೀಸ್ ಇಲಾಖೆ ತನಿಖೆ ಮಾಡಿದಾಗ ರಾಜಸ್ಥಾನ ರಾಜ್ಯದ ಬುನಿಯಾ ಗ್ರಾಮದ ಪ್ರವೀಣ್ ಕುಮಾರ್ ಬಿನ್ ಚೌಕರಾಮ್ ಜಿ, ಸರ್ಣವ್ ಗ್ರಾಮದ ಓಂ ಪ್ರಾಕಾಶ್ ಬಿಷ್ಣೋಯ್ ಬಿನ್ ಲೇಟ್ ಭಗೀರತ್ ರಾಮ್, ವಾಸ ಭಾವಿ ಗ್ರಾಮದ ದಿಲೀಪ್ ಬಿನ್ ಉಮೇದ್ ರಾಮ್ ಹಾಗೂ ರವೀಂದ್ರ ಶರಣ್ ಬಿನ್ ಮುನ್ನಾ ಶÀರಣ್, ದೇವಲಿಕಲ್ಲ ಗ್ರಾಮ ದಿನೇಶ್ ಬಿನ್ ಶೋಭಾರಾಮ್ ಹಾಗೂ ಕೆಲಾಶ್ ಚೌಧರಿ ಬಿನ್ ಲೇಟ್ ಮಹೇಂದ್ರ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆ ಮಾಡಲು ತಂದಿದ್ದ ಬುಲೆನೋ ಕಾರು, ಡೂಪ್ಲಿಕೇಟ್ ನಂಬರ್ ಪ್ಲೇಟ್‌ಗಳು, ಚಾಕು, ಗಮ್ ಟೇಪ್ ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳ ತಂಡ ಗುಬ್ಬಿ ತಾಲೂಕಿನ ವಿವಿಧ ಕಡೆಗಳಲ್ಲಿ ಜ್ಯೂವೆಲರಿ ಶಾಪ್‌ಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ದೃಡಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

More Stories
ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ
ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ರಾಜಣ್ಣ, ಸೋಮಣ್ಣ ಸಮ್ಮಿಲನ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಡಲಿ- ವಿಸೋಮಣ್ಣ