
ಮಧುಗಿರಿ: ಟೈಲ್ಸ್ ತುಂಬಿಕೊAಡು ಹೋಗುತಿದ್ದ ಟೆಂಪೋ ಟೈರ್ ಬ್ಲಾಸ್ಟ್ ಆದ ಪರಿಣಾಮ ಟೆಂಪೋ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಬ್ಬಘಟ್ಟ ಪದವಿ ಪೂರ್ವ ಕಾಲೇಜಿನ ಸಮೀಪ ಸಿರಾ-ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಕೈಮರಕ್ಕೆ ಟೈಲ್ಸ್ ಬಾಕ್ಸ್ ತುಂಬಿಕೊAಡು ಹೋಗುತಿದ್ದ ಟೆಂಪೋ ಟೈರ್ ಬ್ಲಾಸ್ಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ.
ಪಟ್ಟಣದ ಕೆ ಆರ್ ಬಡಾವಣೆ ನಿವಾಸಿ ಗಂಗಣ್ಣ (48) ಹಾಗೂ ಅಗಸರ ಹೊಳೆ ರಂಗನಾಥ್ (50) ತೀವ್ರವಾಗಿ ಗಾಯಗೊಂಡಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
.ಟೆಂಪೋ ಹಿಂಭಾಗದಲ್ಲಿ ಕುಳಿತಿದ್ದ 3 ಜನರಲ್ಲಿ ಹೊಸಕೆರೆಯ ಬಸವನಹಳ್ಳಿ ಗ್ರಾಮದ ರಂಗನಾಥ ಎಂಬಾತ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ
ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ರಾಜಣ್ಣ, ಸೋಮಣ್ಣ ಸಮ್ಮಿಲನ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಡಲಿ- ವಿಸೋಮಣ್ಣ