web stats

Madhugirinews

#1NewsofMadhugiri

ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ.!

ಹೌದು ಹೆತ್ತ ತಾಯಿಯನ್ನ ಅತ್ಯಾಚಾರ ಮಾಡಿದ್ದ ಮಗನಿಗೆ ನ್ಯಾಯಾಲಯ ದಂಡವನ್ನ ಹಾಕಿ ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ.ಅತ್ಯಂತ ಕ್ರೂರ, ಮಾನವೀಯತೆಯನ್ನು ನಾಚಿಸುವಂತೆಯೇ ಹೆತ್ತ ತಾಯಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಮಗನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ! ಈ ಸ್ಟೋರಿ ನೋಡಿ!!!

ಒಂಬತ್ತು ತಿಂಗಳು ತನ್ನ ಮಗುವನ್ನು ಹೊಟ್ಟೆಯಲ್ಲಿ ಜೋಪಾನವಾಗಿ ನೋಡಿಕೊಂಡು. ನಂತರ ಹೆತ್ತ ಮಕ್ಕಳಿಗೆ ಉತ್ತಮವಾದ ಭವಿಷ್ಯ ರೂಪಿಸಬೇಕು ಎಂದು ಎತ್ತ ತಂದೆ ತಾಯಿಯ ಆಸೆ ಆಗಿರುತ್ತೆ, ಆದರೆ ಇನ್ನೊಬ್ಬ ಕ್ರೂರಿ ಮನಸುಳ್ಳ ಮಗ ಎತ್ತ ತಾಯಿಯನ್ನೇ ತಿಪ್ಪೆಗೆ ಎಳೆದೊಯ್ದು ಅತ್ಯಾಚಾರ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿ ನಡೆದಿದೆ, ಗುಡಿಬಂಡೆ ಮೂಲದ ಅಶೋಕ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಪಾಪಿ ಮಗನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟವಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ.

ಇನ್ನು ಅಶೋಕ ಎಂಬ ಆರೋಪಿ ತನ್ನ ತಾಯಿ ರಾಮಕ್ಕ (65) ಅವರನ್ನು ತಿಪ್ಪೆಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಅಮಾನುಷ ಘಟನೆ ಕಳೆದ ವರ್ಷ 5 ಆಗಸ್ಟ್ 2024 ರಂದು ನಡೆದಿತ್ತು. ನಂತರ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇನ್ನು ಪೊಲೀಸರ ತ್ವರಿತ ತನಿಖೆ
ಘಟನೆ ನಂತರ ಪೊಲೀಸರು ಶೀಘ್ರ ತನಿಖೆ ನಡೆಸಿ, ದೋಷಾರೋಪಣ ಪತ್ರ (ಚಾರ್ಜ್‌ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸಾಕ್ಷ್ಯಾಧಾರಗಳನ್ನು ಪ್ರಸ್ತುತ ಪಡಿಸಿದ್ದರು. ವಾದ- ಪ್ರತಿ ವಾದ ಆಲಿಸಿದ ನ್ಯಾಯಾಧೀಶ ಶ್ರೀ ಕಾಂತರಾಜು ಎಸ್.ವಿ. ಅವರು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಒಟ್ಟಾರೆಯಾಗಿ ಹೆತ್ತ ತಾಯಿಯನ್ನೇ ಬಲತ್ಕಾರ ಮಾಡಿದ ಕ್ರೂರ ಪಾಪಿ ಮಗನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮುಂದೆ ಇಂತಹ ಒಂದು ಘಟನೆ ಎಲ್ಲೂ ಆಗದಂತೆ & ನಡೆಯದಂತೆ ನ್ಯಾಯಾಲಯವು ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆರೋಪಿಯ ಅಣ್ಣಾ ಶ್ರೀನಿವಾಸ್ ತಿಳಿಸಿದ್ದಾರೆ.

You may have missed