
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂಬAಧಿಸಿದAತೆ ಚರ್ಚೆ ನಡೆಯುತ್ತಿರುವ ವೇಳೆ, ಮಾಜಿ ಸಚಿವ K.N RAJANNA ಮಹತ್ವ ಹೇಳಿಕೆಯನ್ನು ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಜಣ್ಣ, ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ ಶಿವಕುಮಾರ್ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ ಮತ್ತೆ ಅದನ್ನೇ ಹೇಳ್ತೀನಿ ಎಂದಿದ್ದಾರೆ.
ಅಧಿಕಾರ ಹುಡುಕಿ ಹೋದವನಲ್ಲ
ಯಾರೆಲ್ಲಾ ನನ್ನ ಪರವಾಗಿ ಅಭಿಪ್ರಾಯ, ವಿಶ್ವಾಸ ವ್ಯಕ್ತಪಡಿಸ್ತಾರೆ ಅವರಿಗೆ ಆಭಾರಿಯಾಗಿದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ, ಅಧಿಕಾರ ಬೇಕು ಅಂತಾ ಸಂಪೂರ್ಣ ಅಪೇಕ್ಷೇ ಪಡೋನು ಅಲ್ಲಾ ಅಂತK.N RAJANNA ಹೇಳಿದ್ದಾರೆ.
ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡ
ಮತ್ತೆ ಹೇಳ್ತೀನಿ ಡಿಕೆಶಿ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ ನನಗೆ ಸಾಕು ಇನ್ನೋಬ್ಬರಿಗೆ ಅವಕಾಶ ಕೊಡಲಿ ಅಂತ K.N RAJANNA ಹೇಳಿದ್ದಾರೆ.ನಾನು ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿಲ್ಲ. ಆದ್ರೆ ಅದೇನು ಆಗೇ ಬಿಡ್ತಾರೆ ಅಂದು ಕೊಂಡಿದ್ದೀರಾ? ಅಂತ ರಾಜಣ್ಣ ಪ್ರಶ್ನಿಸಿದ್ದಾರೆ.

More Stories
ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ
ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ರಾಜಣ್ಣ, ಸೋಮಣ್ಣ ಸಮ್ಮಿಲನ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಡಲಿ- ವಿಸೋಮಣ್ಣ