
ಮಧುಗಿರಿ : ಶಿಕ್ಷಣಕ್ಕೆ ನಮ್ಮ ಜೀವನವನ್ನು ಬದಲಿಸುವ ಶಕ್ತಿ ಇದೆ ಅದರಲ್ಲೂ ವಿದ್ಯೆ ಕಲಿತು ವೃತ್ತಿ ಜೀವನದಲ್ಲಿ ಶಿಕ್ಷಕ ವೃತ್ತಿ ಸರ್ವ ಶೇಷ್ಠವಾದದ್ದು ಎಂದು ಬಿಇಓ ಹನುಮಂತರಾಯಪ್ಪ ತಿಳಿಸಿದರು.
ತಾಲೂಕಿನ ಕೊಡಿಗೇಹಳ್ಳಿಯ ಸರ್ವೋದಯ ಬಾಲಕೀಯ ಪ್ರೌಢ ಶಾಲೆಯಲ್ಲಿ ಸುಮಾರು 32 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಶಿಕ್ಷಕ ಜಿ.ಎನ್.ಸದಾಶಿವರೆಡ್ಡಿ ಅವರನ್ನು ಬೀಳ್ಕೊಟು ಮಾತನಾಡಿದ ಅವರು ನಾನು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಆಂದು ಹೋಬಳಿಯ ಪ್ರಮುಖ ಶಿಕ್ಷಣ ಕೇಂದ್ರವಾಗಿತ್ತು ಈ ಶಾ¯ಗೆ ಚಂದನದೂರು-ಐಡಿಹಳ್ಳ್ಳಿ ಪುರವರ ಹಾಗೂ ಆಂಧ್ರದ ಕೆಲ ವಿದ್ಯಾರ್ಥಿಗಳು ಸೇರುತ್ತಿದ್ದು 18 ವಿಭಾಗಗಳು ಇದ್ದು ಶಾಲೆ ಬಿಟ್ಟಾಗ ಶಿಕ್ಷಣ ಜಾತ್ರೆಯಾಂತೆ ಭಾಸವಾಗುತ್ತಿತ್ತು ಎಂದರು.
ರ್ವೋದಯ ಶಾಲೆಯ ವಿದ್ಯಾರ್ಥಿಯಾಗಿ ಇದೇ ಶಾಲೆಯಲ್ಲಿ 33 ವರ್ಷ 6 ತಿಂಗಳು 22 ದಿನ ಸೇವೆಸಲ್ಲಿಸಿ ಉತ್ತಮ ಶಿಕ್ಷರೆನಿಸಿದ್ದಾರೆ. ಉತ್ತಮ ಶಿಕ್ಷಕನಿಗೆ ಸಮಾಜದಲ್ಲಿ ಉತ್ತಮ ಗೌರವ ದೊರೆಯುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನು ಕೇವಲ 102 ದಿನ ಬಾಕಿ ಇದ್ದು ಟಿವಿ, ಸಿನಿಮಾ ಮೊಬೈಲ್ ಬದಿಗಿಟ್ಟು ಪಠ್ಯಚಟುವಟಿಕೆ ಮತ್ತು ಅಭ್ಯಸದಿಂದ ಪರೀಕ್ಷೆಗೆ ಸಿದ್ದರಾಗಿ. ನನ್ನ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಜಿ.ವಿ ವೆಂಕಟರಾಮಯ್ಯ ಬಾವುಕರಾಗಿ ನಮ್ಮ ಸಂಸ್ಥೆಯಲ್ಲಿ ಶಾಲೆಯ ವಿದ್ಯಾರ್ಥಿಯಾಗಿ ನನ್ನ ಸೇವೆಯ ಅವದಿಯಲ್ಲಿ ಸಹಶಿಕ್ಷರಾಗಿ, ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗ ದರ್ಶಕರಾಗಿದ್ದು ಶಾಲಾಪ್ರವಾಸದ ಸಮಯದಲ್ಲಿ ಉತ್ತಮ ರೀತಿ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ಪಾರದರ್ಶಕವಾಗಿ ಸೇವೆನೀಡಿದ್ದಾರೆ. ಸರಕಾರದ ನಿಯಮದಂತೆ ನ30 ವಯೋನಿವೃತ್ತಿ ಹೊಂದಿದ್ದು ಇವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು ನಿವೃತ್ತಿಯ ನಂತರವು ಇವರೇ ಸಿಗಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಜಿ.ಎನ್.ಸದಾಶಿವರೆಡ್ಡಿ ಮಾತನಾಡಿ ಶಿಕ್ಷಕರ ಆಸ್ತಿ ವಿದ್ಯಾರ್ಥಿಗಳು ನಿವೃತ್ತಿಯ ನಂತರ ವಿದ್ಯಾರ್ಥಿಗಳು ಕಂಡು ನಾನು ನಿಮ್ಮ ಸ್ಟುಡೆಂಟ್ ಎಂzಗ Àಶಿಕ್ಷಕನಿಗೆ ಸಿಗುವ ಅನಂದ ಕೋಟಿ ರೂ ಕೊಟ್ಟರು ಸಿಗದು. ನಮ್ಮ ಶಾಲೆಯ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಇದ್ದು ಅವರ ಜೀವನ ರೂಪಿಸಿರುವ ಈ ಶಿಕ್ಷಕವೃತ್ತಿಯಿಂದ. ನಾನು ಸಮಾಜ ಶಿಕ್ಷಕ ಆಗಿ ಪಾಠ ಮಾಡುವಾಗ ಭೂಪಟದಲ್ಲಿ ದೇಶಗಳ ಬಗ್ಗೆ ಪಾಠ ಮಾಡಿದ್ದು ಇಂದು ಅದೇ ದೇಶಗಳಲ್ಲಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇರುವುದು ಸಂತೂಷವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಂಗಧಾಮಯ್ಯ, ಸಂಸ್ಥೆಯ ಅಧ್ಯಕ್ಷ ರವಿಮೋಹನರೆಡ್ಡಿ, ನಿರ್ದೇಶಕ ರಾಜಗೋಪಾಲರೆಡ್ಡಿ, ಪುಟ್ಟನರಸರೆಡ್ಡಿ, ಸದಾಶಿವರೆಡ್ಡಿ, ಹಿರಿಯ ಶಿಕ್ಷಕರಾದ ಮುದ್ದಮಲ್ಲಯ್ಯ, ಮುಖ್ಯ ಶಿಕ್ಷಕ ಸದಾನಂದಯ್ಯ, ಸುಮಲತಾ, ಉಪನ್ಯಾಸಕ ರಾಮಚಂದ್ರಪ್ಪ, ಮುರಾಜಿ ದೇಸಾಯಿ ಹಿರಿಯ ಶಿಕ್ಷಕ ಮಂಜುನಾಥ್, ನಿವೃತ್ತ ಶಿಕ್ಷಕ ನಭೀಸಾಬ್, ಕಾಳಪ್ಪ, ಸುಶೀಲ ವಿಶ್ವನಾಥ್, ನಾರಾಯಣಪ್ಪ, ಸಂಪತ್ ಕುಮಾರ್ ಹಾಜರಿದ್ದರು.

More Stories
ಕಲಿಕಾ ಹಬ್ಬ ಕಲಿಕೆಯನ್ನು ಅಳೆಯಲು ಉತ್ತಮ ವೇದಿಕೆ
ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ರಾಜಣ್ಣ, ಸೋಮಣ್ಣ ಸಮ್ಮಿಲನ
ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಡಲಿ- ವಿಸೋಮಣ್ಣ