web stats

Madhugirinews

#1NewsofMadhugiri

ಕೊಲೆ ಪ್ರಕರಣದ ಆರೋಪಿಯ ಬಂಧನ

ತುಮಕೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಮಧು ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಗುಬ್ಬಿ ತಾಲೂಕು ಸಿ.ಎಸ್.ಪುರ ಪೊಲೀಸ್ ಕೆ.ಹರಿವೇಸಂದ್ರ ಗ್ರಾಮದ ಮಂಜುಳಾ ಎಂಬಾಕೆಯೊAದಿಗೆ ಮಧು ಬಿನ್ ಅಶ್ವತ್ಥನಾರಯಣ ಎಂಬಾತº Àಲವಾರು ವರ್ಷಗಳಿಂದ ವೈಯಕ್ತಿಕ ಹಾಗೂ ಹಣಖಾಸಿನ ಸಂಬAದ ಇಟ್ಟುಕೊಂಡಿದ್ದು ನ30 ರಂದು ಸಂಜೆ 05-00 ಗಂಟೆಯ ನಂತರ ಹಣಖಾಸಿನ ವಿಚಾರವಾಗಿ ಗಲಾಟೆ ನಡೆದಿದ್ದು ಗಲಾಟೆಯಲ್ಲಿ ಮಂಜುಳಾ ಎಂಬಾಕೆಯನ್ನು ಕೊಲೆ ಮಾಡಿ ಆರೋಪಿ ನಾಪತ್ತೆಯಾಗಿದ್ದ ಈ ಬಗ್ಗೆ ಸಿ.ಎಸ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ. 131/2025 ಪ್ರಕರಣ ದಾಖಲಾಗಿತ್ತು. ಸಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಕೆ ಶೇಖರ್ ರವರ ಮಾರ್ಗಸೂಚನೆ ಮೇರೆಗೆ ಗುಬ್ಬಿ ಸಿಪಿಐ ರಾಘವೇಂದ್ರ ಟಿ.ಆರ್. ಪಿಎಸ್‌ಐ-1 ಧರ್ಮಾಂಜಿ, ಹಾಗೂ ಸಿಬ್ಬಂದಿಗಳಾದ ರಾಜು, ತ್ಯಾಗರಾಜು, ನವೀನ್ ಕುಮಾರ್, ವಿಜಯಕುಮಾರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿ ನರಸಿಂಹರಾಜು, ಜಗದೀಶ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

You may have missed