web stats

Madhugirinews

#1NewsofMadhugiri

ನೀರಿನ ಘಟಕ ದುರಸ್ಥಿಗೆ ಆಗ್ರಹಿಸಿ ಗ್ರಾಪಂ ಮುಂಭಾಗ ಅಡುಗೆ ಮಾಡಿ ಪ್ರತಿಭಟನೆ

ಮಧುಗಿರಿ: ಕಳೆದ 6 ತಿಂಗಳಿAದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದ್ದರೂ ಸಹ ಸಂಬAಧಿಸಿದವರು ಯಾರೊಬ್ಬರು ಗಮನಹರಿಸುತ್ತಿಲ್ಲ ಎಂದು ಗ್ರಾಪಂ ಮುಂಭಾಗದಲ್ಲೇ ಸೌದೆ ಓಲೆ ಹಚ್ಚಿ ಅಡುಗೆ ಮಾಡಿದ ಘಟನೆ ನಡೆದಿದೆ.

ಕೊಡಿಗೇನಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಪಂ ಮುಂಭಾಗ ಸೋಮವಾರ ಅಡವಿನಾಗೇನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು 6 ತಿಂಗಳು ಕಳೆದರೂ ಇದುವರೆಗೂ ಗ್ರಾಮದ ಸಮಸ್ಯೆ ಬಗ್ಗೆ ಯಾರೊಬ್ಬರು ಗಮನಹರಿಸುತ್ತಿಲ್ಲ ಎಂದು ಆರೋಪಿಸಿ ಬೆ 10 ಗಂಟೆಯಿAದ ಸಿಂಗನಹಳ್ಳಿ ಗ್ರಾಪಂಮAದೆ ಊರಿನ ಎಲ್ಲ ಪ್ರಮುಖರು ಊಟ ಮಾಡದೆ ಧರಣಿ ಕುಳಿತು ನೀರು ಬೇಕು ಅಂತ ಕೇಳುತ್ತಿದ್ದೇವೆ.

 

 

ಆದರೆ ಇಲ್ಲಿ ಅಧ್ಯಕ್ಷರು, ಪಿಡಿಒ ಹಾಗೂ ಇತರೆ ಸಂಬAಧಪಟ್ಟ ಅಧಿಕಾರಿಗಳು ಕೇವಲ ಉಡಾಫೆ ಉತ್ತರ ನೀಡುತ್ತಿದ್ದಾರೆಯೇ ಹೊರತು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕುಡಿಯುವ ನೀರಿಲ್ಲದೆ ವಯಸ್ಸಾದವರು, ಮಕ್ಕಳು, ಶಾಲೆ ಮಕ್ಕಳು ಹುಷಾರಿಲ್ಲದೆ ಮಲಗಿಕೊಂಡು ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರ ಬಗ್ಗೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒಗೆ ಎಷ್ಟೋ ಬಾರಿ ಅರ್ಜಿ ಕೊಟ್ಟಿದ್ದಾರೆ. ಆದರೆ ಅವರು ಇವತ್ತು, ನಾಳೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. 3 ಗಂಟೆವರೆಗೂ ಪಂಚಾಯಿತಿ ಮುಂದೆ ಕುಳಿತಿದ್ದರೂ ಯಾರೊಬ್ಬರೂ ಬಂದಿಲ್ಲ. ನಮಗೆ ಶೀಘ್ರ ಸ್ಪಂದಿಸದಿದ್ದರೆ ನಾವೆಲ್ಲ ತಾಲ್ಲೂಕು ಆಫೀಸು ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

You may have missed