web stats

Madhugirinews

#1NewsofMadhugiri

ಇಲ್ಲಿ ತಂಗುದಾಣವು ಇಲ್ಲ. ಬಸ್ ನಿಲ್ದಾಣವು ಇಲ್ಲಾ….?

ಮಧುಗಿರಿ: ಬಹುತೇಕ ಬಸ್ ನಿಲ್ದಾಣಗಳಲ್ಲಿ ಸುಸಜಿತ ಕಟ್ಟಡ, ತುಂಬಿ ತುಳಕುವ ಪ್ರಯಾಣಿಕರು, ಸದಾ ಸದ್ದು ಮಾಡುವ ಬಸ್‌ಗಳು, ಬಸ್‌ಗಳ ಮಾಹಿತಿ ಹೇಳುವ ಧ್ವನಿವಧರ್ಕಗಳು ಕಾಣುವುದು ಸಹಜ ಆದರೆ ತಾಲೂಕು ಕನಸು ಕಾಣುವ ಹೋಬಳಿ ಕೇಂಧ್ರದಲ್ಲಿ ಪ್ರಯಾಣಿಕರಿಗೆ ಉರಿಬಿಸಿಲೇ ಗತಿಯಾಗಿದೆ.

ತಾಲೂಕಿನ ಹೋಬಳಿ ಕೇಂಧ್ರಗಳಲ್ಲಿ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿರುವ ಕೊಡಿಗೇನಹಳ್ಳಿ ಬಸ್ ನಿಲ್ದಾಣದಲ್ಲಿ ಪ್ರತಿ ನಿತ್ಯ ಶಾಲಾ ಕಾಲೇಜು ಸೇರಿದಂತೆ ಇನ್ನೀತರ ಕೆಲಸಗಳಿಗೆ ಸುಮಾರು 49 ಹಳ್ಳಿಗಳಿಂದ ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಬರುವ ಪ್ರಯಾಣಿಕರಿಗೆ ಕನಿಷ್ಠ ನೀರು ಮತ್ತು ನೆರಳಿಲ್ಲದಂತಾಗಿದೆ.

ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಿದ್ದ ತಂಗುದಾಣ ಅನ್ಯರ ಪಾಲಾಗಿದ್ದು ಅಂಗಡಿ ಮಳಿಗೆಯಾಗಿ ಮಾರ್ಪಟಿದ್ದೆ. ಬಸ್ ನಿಲ್ದಾಣದಲ್ಲಿ ಕನಿಷ್ಠ ಒಂದು ಮರಗಿಡವಿಲ್ಲ ನೆರಳಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳು ಅಭಿವೃದ್ಧಿಗೊಳ್ಳಲುತಿದ್ದ ಕೊಡಿಗೇನಹಳ್ಳಿ ಬಸ್ ನಿಲ್ದಾಣಕ್ಕೆ ಮಾತ್ರ ಅಭಿವೃದ್ಧಿ ಭಾಗ್ಯ ಸಿಗದಿರುವುದು ವಿಪರ್ಯಾಸವೇ ಸರಿ.

ಇನ್ನೂ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆ ಬಳಿ ವಯೋ ವೃದ್ಧರು ನಿಂತರು ಬೀದಿ ಬದಿ ವ್ಯಾಪರಿಗಳು ಹಾಗೂ ಅಂಗಡಿ ಮಾಲೀಕರು ಗದರುತ್ತಾರೆ ಇದರಿಂದ ಬಹುತೇಕ ಪ್ರಯಾಣಿಕರು ಮುಜಗರುಕ್ಕೀಡಾಗುತಿದ್ದಾರೆ. ಇನ್ನಾದರೂ ಸಂಬAಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಗಮಹರಿಸಿ ಸೂಕ್ತ ಬಸ್ ನಿಲ್ದಾಣ ಹಾಗೂ ತಂಗುದಾಣ ನಿರ್ಮಿಸುವಂತೆ ಪ್ರಯಾಣೀಕರು ಒತ್ತಾಯಿಸಿದ್ದಾರೆ.

You may have missed