
MADHUGIRI: ಜಿಲ್ಲೆಯ 8 ತಾಲ್ಲೂಕಿನ ಸಂಸದರ ವ್ಯಾಪ್ತಿಗೆ ಬರುವ ಎಲ್ಲಾ ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಇಂದು ಮಿಡಿಗೇಶಿಯಲ್ಲಿ ಚಾಲನೆ ನೀಡಲಾಗಿದೆ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಮಿಡಿಗೇಶಿ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ತಾಲೂಕಿನ ಮಿಡಿಗೇಶಿ ಹೋಬಳಿಯ ಸರಕಾರಿ ಪಬ್ಲಿಕ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬದ ಅಂಗವಾಗಿ ರಾಜ್ಯ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭವಿಷ್ಯದ ದೂರದೃಷ್ಟಿಯುಳ್ಳ ನಾಯಕರಾದ ಮೋದಿಯವರು ಹುಟ್ಟು ಹಬ್ಬವನ್ನು ಯಾವುದೆ ಆಡಂಬರವಾಗಿ ಆಚರಣೆ ಮಾಡುವುದಿಲ್ಲ ಆದ್ದರಿಂದ ಈ ಬಾರಿ ಅವರ ಹುಟ್ಟು ಹಬ್ಬಕ್ಕೆ ನಮ್ಮ ಸಂಸದರಾದ ಸೋಮಣ್ಣನರು ವಿಶೇಷವಾಗಿ ಹುಟ್ಟು ಹಬ್ಬಕ್ಕೆ ನೋಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.
ಸೋಮಣ್ಣನವರ ಸೂಚನೆ ಮೇರೆಗೆ ಜಿಲ್ಲಾ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಈ ನೋಟ್ ತಲುಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಮುಖಂಡ ಎಲ್.ಸಿ ನಾಗರಾಜ್, ಮಾಜಿ ಶಾಸಕರಾದ ವೀರಭದ್ರಯ್ಯನವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಲೂಕಿನ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಹೊಣೆಗಾರಿಕೆಯನ್ನು ನಿವೃತ್ತ ಪ್ರಿನ್ಸಿಪಾಲ್ ಗೋವಿಂದರಾಜು ಅವರಿಗೆ ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಸಿ.ನಾಗರಾಜು, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ನಿವೃತ್ತ ಪ್ರಿನ್ಸಿಪಾಲ್ ಟಿಜೆ ಗೋವಿಂದರಾಜು, ಪ್ರಿನ್ಸಿಪಾಲ್ ಕರಿಯಣ್ಣ, ರವಿವರ್ಮ, ಕುಮಾರ್, ರವಿ ಕುಮಾರ್, ಬಸವರಾಜ್ ನಿವೃತ್ತ ಶಿಕ್ಷಕ ಬಸವರಾಜು, ಪಿಡಿಒ ರಂಗನಾಥ್, ರವಿಯಾದವ್, ರವಿಕುಮಾರ್, ಟೈಲರ್ ಕಾವಲ್ಲಪ್ಪ, ಕೃಷ್ಣಪ್ಪ, ಮು.ಶಿ.ಹೇಮಾವತಿ, ಕೆಂಪಯ್ಯ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು