web stats

Madhugirinews

#1NewsofMadhugiri

ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣ: ತುಮಕೂರಿನಲ್ಲಿ ವಿಚಾರಣೆ

ತುಮಕೂರು: ದೆಹಲಿಯ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ನಗರದ ಪುರಹೌಸ್ ಕಾಲೋನಿಯ ನಿವಾಸಿ ಮುಜಾಯುದ್ದೀನ್ ಎಂಬಾತನನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಸ್ಫೋಟ ನಡೆದ ಮರುದಿನವೇ ಸ್ಥಳೀಯ ಪೊಲೀಸರು ಎಎಸ್‌ಪಿ ಪುರುಷೋತ್ತಮ್ ಅವರ ಮಾರ್ಗದರ್ಶನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮುಜಾಯುದ್ದೀನ್‌ರನ್ನು ವಿಚಾರಣೆ ಮಾಡಿದ್ದಾರೆ.

ದೆಹಲಿ ಕಾರ್ ಬಾಂಬ್ ಸ್ಫೋಟದಲ್ಲಿ ಮುಜಾಯುದ್ದೀನ್ ಕೈವಾಡವಿಲ್ಲ ಎಂಬ ಖಾತರಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಂತರ ಬಿಡುಗಡೆ ಮಾಡಿದ್ದಾರೆ.

ಮೂಲಗಳ ಪ್ರಕಾರ, ಮುಜಾಯುದ್ದೀನ್ ಹಿಂದಿನ ದಿನಗಳಲ್ಲಿ ಕಲಿಫತ್ ಉಗ್ರ ಸಂಘಟನೆಯೊAದಿಗೆ ಸಂಪರ್ಕ ಹೊಂದಿದ್ದ ಹಾಗೂ ಈ ಸಂಘಟನೆಯ ಮುಖಂಡರಿಗೆ ತುಮಕೂರಿನಲ್ಲಿ ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಎಂಬ ಆರೋಪದ ಹಿನ್ನೆಲೆ ವಿಚಾರಣೆ ನಡೆದಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಮುಜಾಯುದ್ದೀನ್ ಅವರನ್ನು ಈ ಹಿಂದೆ ಎನ್‌ಐಎ ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಿತ್ತು. ಅವರು ಅಲ್ಲಿ ಆರು ವರ್ಷ ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ.

You may have missed