web stats

Madhugirinews

#1NewsofMadhugiri

ಲಂಚ ಸ್ವೀಕರಿಸುತಿದ್ದ ಮೂವರು ಲೋಕಾ ಬಲೆಗೆ

ತುಮಕೂರು: ಕಾಮಗಾರಿಗಳ ಬಿಲ್ ಮಂಜೂರು ಮಾಡಿಕೊಡಲು 47.500 ರೂ ಲಂಚ ಸ್ವೀಕರಿಸುತ್ತಿದ್ದ 3 ಜನ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗಾಂಧಿನಗರದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ರಿಪೇರಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಶಿವಮೊಗ್ಗ ಜಿಲ್ಲೆ ಗುತ್ತಿಗೆದಾರ ಸುನಿಲ್.ಎಸ್ ಅವರಿಗೆ ಬಿಲ್ ಮಾಡಿ ಕೊಡಲು 47.500 ರೂ ಗಳ ಲಂಚದ ಬೇಡಿಕೆ ಇಟ್ಟಿದ್ದಾರೆ. ಉರ್ದು ಶಾಲೆ ರಿಪೇರಿ ಕಾಮಗಾರಿಯ ಬಿಲ್ 3,41,000 ರೂ ಮತ್ತು ಕನ್ನಡ ಶಾಲೆ ರಿಪೇರಿ ಕಾಮಗಾರಿಯ ಬಿಲ್ 3,09,046 ರೂಗಳನ್ನು ಮಂಜೂರು ಮಾಡಿಕೊಡಲು ತಿಪಟೂರು ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ. ಬಿ.ಸಿ, ಸಹಾಯಕ ಇಂಜಿನಿಯರ್ ಸುಹಾಸ್ ಮತ್ತು ಕಂಪ್ಯೂಟರ್ ಅಪರೇಟರ್ ಹರೀಶ್ 47,500=00 ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಲಂಚ ಸ್ವೀಕರಿಸಿದ್ದ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಲೋಕಾಯಕ್ತದಲ್ಲಿ ಸುನಿಲ್ ಎಂಬುವವರು ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ ಮಂಗಳವಾರ ಬೆಳಿಗ್ಗೆ 7.47 ಗಂಟೆಯಲ್ಲಿ ಸಹಾಯಕ ಇಂಜಿನಿಯರ್ ಆದ ಆರೋಪಿ-2 ಸುಹಾಸ್ ರವರಿಗೆ ಸಂಬAಧಿಸಿದ 13,000=00 ರೂ ಲಂಚವನ್ನು ಆರೋಪಿ-3 ಹರೀಶ್, ಕಂಪ್ಯೂಟರ್ ಅಪರೇಟರ್ ರವರು ಗೂಗಲ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ಆರೋಪಿ-1 ಸ್ವಾಮಿ.ಬಿ.ಸಿ ರವರು ಬೆಳಿಗ್ಗೆ 09.50 ಗಂಟೆ ಸಮಯದಲ್ಲಿ ತುಮಕೂರು ನಗರದ ಪರಿವೀಕ್ಷಣಾ ಮಂದಿರದಲ್ಲಿ 34,500 ರೂ ನೇರವಾಗಿ ಸ್ವೀಕರಿಸುವಾಗ ಲೋಕಾ ಬಲೆಗೆ ಟ್ರ‍್ಯಾಪ್ ಆಗಿದ್ದಾರೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ.ಎ.ವಿ ಪೊಲೀಸ್ ಉಪಾಧೀಕ್ಷಕ ಡಾ.ಸಂತೋಷ್.ಕೆ.ಎA ನೇತೃತ್ವದಲ್ಲಿ
ಪೊಲೀಸ್ ನಿರೀಕ್ಷಕರಾದ ಕೆ.ಸುರೇಶ, ಬಿ.ಮೊಹಮ್ಮದ್ ಸಲೀಂ ಮತ್ತು ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

You may have missed