web stats

Madhugirinews

#1NewsofMadhugiri

ಕಲಬೆರಕೆ ಸಾರಾಯಿ ಕುಡಿದು ಅಸ್ವಸ್ಥ: ಗಡಿಭಾಗದಲ್ಲಿ ಆತಂಕ

ತುಮಕೂರು: ಕಲಬೆರಕೆ ಸೇಂದಿ ಕುಡಿದು 20 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಗೆ ಹೊಂದಿಕೊAಡಿರವ ಆಂದÀ್ರಪ್ರದೇಶದ ಮುದ್ದೇನಹಳ್ಳಿ ಗೇಟ್ ಸಮೀಪದಲ್ಲಿ ಚರ್ಲೋಪಲ್ಲಿಯಲ್ಲಿ ಕಲಬೆರಕೆ ಸಾರಾಯಿ ಕುಡಿದು ಕರ್ನಾಟಕ ಹಾಗೂ ಆಂದ್ರದ 20 ಮಂದಿ ಅಸ್ವಸ್ಥಗೊಂಡಿದ್ದಾರೆ.
ಮಧುಗಿರಿ ತಾಲೂಕಿನ ತೆರಿಯೂರು ಗ್ರಾಮದ 13, ಚಿಕ್ಕದಾಳವಟ್ಟ ಗ್ರಾಮದ ಇಬ್ಬರು ಹಿಂದೂಪುರ ಸೇರಿದಂತೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಹಾಗೂ ಆಂದÀ್ರಪ್ರದೇಶದ ಚೋಳೂರು ಗ್ರಾಮದ ಐವರು ಹಿಂದೂಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲಬೆರಕೆ ಸಾರಾಯಿ ಕುಡಿದು ಆಸ್ಪತ್ರೆಗೆ ದಾಖಲಾಗಿರುವವರು ತನ್ನಷ್ಟಕ್ಕೆ ತಾನು ಮಾತನಾಡುವುದು, ಯಾರೋ ಬಂದಿದ್ದಾರೆ ಎಂದು ಭಯ ಪಡುವುದು, ಬಟ್ಟೆ ಕಳಚಿ ಅಸಭÀ್ಯ ವರ್ತಿಸುವುದು, ಕುಟುಂಬಸ್ಥರ ಮೇಲೆ ಹಲ್ಲೆ ಮಾಡುವಂತಹ ವರ್ತನೆಯನ್ನು ತೋರುತ್ತಿದ್ದಾರೆಂದು ಸಂಬAಕರು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೂಪುರದಲ್ಲಿ ನಾಗರಾಜು ನಿಂಗಕ್ಕ ಚಿಕಿತ್ಸೆ ಪಡೆಯುತಿದ್ದು, ತೆರಿಯೂರು ಗ್ರಾಮದ ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ, ನಾಗರಾಜು, ಟಿ ನಾಗರಾಜು ಬೆಂಗಳೂರಿನ ನಿಮ್ಹಾನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ನಿಮ್ಹಾನ್ ನಲ್ಲಿ ಚಿಕಿತ್ಸೆ ಪಡೆದ ಹನುಮಕ್ಕ, ದಾಸಪ್ಪ ಎಂಬುವವರನ್ನು ಒಂದು ವಾರದ ನಂತರ ಮತ್ತೆ ಬರಲು ವೆ`ದ್ಯರು ಸೂಚಿಸಿದ್ದಾರೆಂದು ತಿಳಿದಿದೆ.
ಕರ್ನಾಟಕದ 15 ಜನ ಹಾಗೂ ಆಂದ್ರಪ್ರದೇಶದ ಚೌಲೂರು ಗ್ರಾಮದ 5 ಜನ ಕಲಬೆರೆಕೆ ಸಾರಾಯಿ ಕುಡಿದು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆರಿಯೂರು ಗ್ರಾಮದಲ್ಲಿ ಸುಮಾರು 10 ಕ್ಕು ಹೆಚ್ಚು ಕುಟುಂಬಗಳು ಮನೆ ತೊರೆದು ಆಸ್ಪತ್ರೆಯಲ್ಲಿ ಕಾಲಕಳೆಯುತಿದ್ದು ಈ ಸಂಬA`À ಯಾವುದೆ ಪ್ರಕರಣ ದಾಖಲಾಗಿಲ್ಲ.
ಗಡಿಭಾಗದಲ್ಲಿ ಹಣಗಳಿಸುವ ದುರಾಸೆಗೆ ಅಕ್ರಮವಾಗಿ ನಕಲಿ ಮದ್ಯ, ಸೇಂದಿ ಮಾರಾಟದಂತಹ ಚಟುವಟಿಕೆಗಳು ನಡೆಯುತ್ತಿವೆ. ಅವುಗಳ ವಿರುದ್ಧ ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಇಂತಹ ಅನಾಹುತಕ್ಕೆ ಕಾರಣವಾಗಿದೆ. ಇಲಾಖೆಯವರು ಕಠಿಣ ಕ್ರಮವನ್ನು ಕೆ`ಗೊಂಡಾಗ ಅಪರಾ`Àಗಳ ಸಂಖ್ಯೆಗಳು ಕಡಿಮೆ ಮಾಡಲು ಸಾಧ್ಯ ವಕೀಲ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may have missed