web stats

Madhugirinews

#1NewsofMadhugiri

ವಿಜೃಂಭನೆಯಿAದ ನಡೆದ ಶ್ರೀ ಲಕ್ಷಿö್ಮನರಸಿಂಹಸ್ವಾಮಿಯ ದೀಪ ಪ್ರಜ್ವಲನಾ ಕಾರ್ಯಕ್ರಮ

ಮಧುಗಿರಿ: ಧಾರ್ಮಿಕ ಕಾರ್ಯವನ್ನು ಒಗ್ಗೂಡಿ ಮಾಡಿದಾಗ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಗುತ್ತದೆ ಎಂದು ಮಾಜಿ ಸಚಿವ ಹಾಲಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.   

ತಾಲೂಕಿನ ಐ.ಡಿ ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಗ್ರಾಮದ ಮುಜರಾಯಿ ಇಲಾಖೆಯ ಶ್ರೀ ಲಕ್ಷಿö್ಮನರಸಿಂಹಸ್ವಾಮಿ ದೇವಸ್ಥಾನಕ್ಕೆ ಕುಟುಂಬದ ಸಮೇತ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದಕ್ಷೆ, ಮಹಾ ಸಂಕಲ್ಪ, ದೀಪಾ ಪ್ರಜ್ವಲನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ನಾನು 2013-14ರಲ್ಲಿ ಶಾಸಕನಾಗಿದ್ದ ವೇಳೆ ಈ ದೇವಸ್ಥಾನ ಜೀರ್ಣೋದ್ದಾರ ಪುಣ್ಯದ ಕೆಲಸ ಆರಂಭ ಮಾಡಲಾಗಿತ್ತು ಇದೀಗಾ ದೇವಸ್ಥಾನದ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ನ3 ರ ವರೆಗೆ ಜೀರ್ಣೋದ್ದಾರ ಹಾಗೂ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಇದೊಂದು ಪುಣ್ಯದ ಕೆಲಸ, ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು, ದಾನಿಗಳು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಈ ದೇವಸ್ಥಾನಕ್ಕೆ ವಿಶೇಷರೂಪ ನೀಡಿದ ಶಿಲ್ಪಿಯನ್ನು ಅಭಿನಂಧಿಸುತ್ತೇನೆ. ಕಾರ್ಯಕ್ರಮದಲ್ಲಿ ಯಾವುದೆ ವಿಜ್ಞನಗಳು ಬಾರದಂತೆ ದೇವಸ್ಥಾನ ಅಭಿವೃದ್ಧಿ ಕೆಲಸ ನಡೆದಿದ್ದು ಮುಂದೆಯು ಯಾವುದೆ ವಿಜ್ಞನಗಳು ಎದುರಾಗದಂತೆ ಸ್ವಾಮಿಯ ಸೇವೆಯ ಮಾಡುವ ಅವಕಾಶ ಬಂದಿರುವುದು ನಮ್ಮೆಲ್ಲರ ಪುಣ್ಯ ಎಂದರು.

ಕಳೆದ ವರ್ಷ ಜಾತ್ರೆ ತುಂಬಾ ಯಶಸ್ವಿಯಾಗಿ ನಡೆದಿದ್ದು ಈ ಕಾರ್ಯಕ್ರಮಕ್ಕೆ ಅದರ ದುಪ್ಪಟ್ಟು ಭಕ್ತಾಧಿಗಾಳು ಭಾಗವಹಿಸಲಿದ್ದಾರೆ. ಜಾತ್ರೆಯ ವೇಳೆ ನಡೆದ ಸಿದ್ಧತೆಯಂತೆ ಅದಕ್ಕಿಂತ ಹೆಚ್ಚು ಕಾಳಾಜಿ ವಹಿಸಿ ಈ ಬಾರಿಯ ಧಾರ್ಮಿಕ ಕಾರ್ಯ ಸೂಸತ್ರವಾಗಿ ನಡೆಯಲು ನಮ್ಮ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಹಕಾರ ನೀಡಬೇಕು. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಯಾವುದೆ ಗೊಂದಲ ಮನಸ್ಥಾಪಗಳು ಬಾರದಂತೆ ಸರ್ವರು ಒಗ್ಗೂಡಿ ದೇವತಾ ಕಾರ್ಯವನ್ನು ಯಶಸ್ವಿಗೊಳಿಸುವ ವಿಶ್ವಾಸವಿದೆ ಎಂದರು.

ಜೀರ್ಣೋದ್ಧಾರ ಅಂಗಾವಾಗಿ ಯಾಗ ಶಾಲೆಯಲ್ಲಿ ಹೋಮ ಹವನಗಳು, ವೇದ ಪಾರಯಣ, ಪೂಜಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ಇಡೀ ಗ್ರಾಮವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬರುವ ಬಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಟಿ.ಎಸ್ ಕೃಷ್ಣಶಾಸ್ತಿç, ಉಪಾಧ್ಯಕ್ಷ ಟಿ.ಎಂ ಶಿವರಾಂ ತಾಡಿ, ಪ್ರಧಾನ ಅರ್ಚಕ ಮಧೂಸೂಧನ್ ಭಟ್, ಕಾರ್ಯದರ್ಶಿ ವಿ. ಕೃಷ್ಣಮೂರ್ತಿ, ಉಪ ವಿಭಾಗಧಿಕಾರಿ ಗೂಟೂರು ಶಿವಪ್ಪ, ತಹಶಿಲ್ದಾರ್ ಶ್ರೀನಿವಾಸ್, ಆರ್.ಡಿ.ಪಿ.ಆರ್ ಗ್ರಾಪಂ ಅಧ್ಯಕ್ಷ ಲಲಿತಮ್ಮ ಉಗ್ರೇಗೌಡ, ಉಪಾಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯ ನಂಜಪ್ಪ, ಶಂಕರ್ ಪ್ರಜ್ವಲ್, ರಂಗಾರೆಡ್ಡಿ, ನರಸಿಂಹಯ್ಯ,
ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

You may have missed