web stats

Madhugirinews

#1NewsofMadhugiri

ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಕಿವಿಗೂಡಬೇಡಿ-: ಹಾಲಪ್ಪ

ಮಧುಗಿರಿ: ಸಾಮಾಜಿಕ ಕ್ಷೇತ್ರದಲ್ಲಿ ನಿರತಂತರವಾಗಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರಮಿಕ ಮಹಿಳಾ ಮತ್ತು ಮತ್ತು ಪುರುಷ ಸಂಘಗಳಿಗೆ ಆರ್ಥಿಕ ಸಹಕಾರ ನೀಡುತ್ತಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

ತಾಲೂಕಿನ ಪುರವರ ಹೋಬಳಿಯ ಕೋಡ್ಲಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಮಾಸಶನ ಹಾಗೂ ವಾತ್ಸಲ್ಯ ಯೋಜನೆಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಲ ಕಿಡಿಗೇಡಿಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಕಿವಿಗೂಡಬೇಡಿ. ಸಕಾರದಿಂದ ಸವಲತ್ತು ಪಡೆಯಲು ಸಾಹಸ ಪಡಬೇಕು ಆದರೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದರು.

ಈ ವಾತ್ಸಲ್ಯ ಮನೆ ಯೋಜನೆ ಕಾರ್ಯಕ್ರಮ ಡಾ ವೀರೇಂಧ್ರ ಹೆಗ್ಗಡೆಯವರ ಕನಸಿನ ಕೂಸು. ಅರ್ಹ ನಿರಾಶ್ರಿತ ಫಲಾನುಭವಿಯನ್ನು ಗುರುತಿಸಿ ಅವರಿಗೆ ಕಡಿಮೆ ವೆಚ್ಚದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ವಾಸಕ್ಕೆ ಯೋಗ್ಯವಾದ ವಾತ್ಸಲ್ಯ ಮನೆ ಕಟ್ಟಿಕೊಟ್ಟಿರುವುದು ಪುಣ್ಯದ ಕೆಲಸ ಇದರ ಸದುಪಯೋಗವನ್ನು ಪಡಿಸಿಕೊಂಡು, ಪೂಜ್ಯ ದ0ಪತಿ ಅವರಿಗೆ ಯೋಜನೆಯ ಅಧಿಕಾರಿ ವರ್ಗದವರಿಗೆ ಚಿರಋಣಿಯಾಗಿರಬೇಕು ಎಂದು ತಿಳಿಸಿದರು.

ತಾಲ್ಲೂಕು ಯೋಜನಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ ವಾತ್ಯಲ್ಯ ಯೋಜನೆ ಡಾ ವಿರೇಂದ್ರಹೆಗ್ಗಡೆ ಹಾಗೂ ಹೇಮಾವತಿ ಮಾತೆಯ ಕನಸಿನ ಯೋಜನೆಯಾಗಿದ್ದು ರಾಜ್ಯದಲ್ಲಿ 605 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದೆ. ತಾಲ್ಲೂಕಿನಲ್ಲಿ 5 ಮಂದಿ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಾಣ ಮಾಡಿ ಅವರಿಗೆ ಹಸ್ತಾಂತರ ಮಾಡಲಾಗಿದೆ. ಸಂಘದಿAದ ಮಹಿಳೆಯರಿಗೆ 8ಕೋಟಿ ರೂ ಗೂ ಹೆಚ್ಚು ಸಾಲ ಸೌಲಭ್ಯ ನೀಡಲಾಗಿದೆ. 114 ಶೌಚಾಲಯ, 54 ಸೋಲಾರ್ ಹಾಗೂ 91 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ನೋಂವರಿಗೆ ದಿವ್ಯ ಜ್ಯೋತಿಯಾಗಿ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಧಾರ್ಮಿಕ ಮುಖಂಡ ಎಂ.ಜಿ ಶ್ರೀನಿವಾಸ್ ಮೂರ್ತಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳದಿಂದ ಮಾಡದೆ ಕೆಲಸ ಕಾರ್ಯಗಳಿಲ್ಲ ಅವರ ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಿ ಅದರ ಸೌಲಭ್ಯ ಪಡೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಕ್ಷೇತ್ರ ಯೋಜನಾಧಿಕಾರಿ ದಿನೇಶ್ ಕುಮಾರ್, ಗ್ರಾಪಂ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಪುಟ್ಟ ಹನುಮಂತಯ್ಯ, ಸದಸ್ಯರಾದ ವೀರೇಂದ್ರ ಪ್ರಸಾದ್, ನರಸಿಂಹಮೂರ್ತಿ, ಮಾ.ಜಿ ತಾ.ಪಂ ಸದಸ್ಯ ಲೋಪಾಲಯ್ಯ. ಪುರಸಭೆ ಅಧ್ಯಕ್ಷ ಲಾಲಾ ಪೇಟೆ ಮಂಜುನಾಥ್ ಹಾಜರಿದ್ದರು.

You may have missed