web stats

Madhugirinews

#1NewsofMadhugiri

ಕಳವು ಆರೋಪಿಗಳ ಬಂಧನ

ಮಧುಗಿರಿ: ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ತಿಪ್ಪಾಪುರ ಗ್ರಾಮದ ಬಳಿ ಸೆ.29 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತಿಪ್ಪಾಪುರ ಗ್ರಾಮದ ರುಕ್ಷ್ಮಿಣಮ್ಮ ಅವರಿಗೆ ಸೇರಿದ 72 ಸಾವಿರ ರೂ. ಬೆಲೆ ಬಾಳುವ 80 ಗ್ರಾಂ ತೂಕದ ಬಂಗಾದರ ಓಲೆ ಮತ್ತು ಚೈನ್, 1500 ರೂ. ನಗದು ಹಣವನ್ನು ಕಳವಾಗಿರುವ ಬಗ್ಗೆ ಮಿಡಿಗೇಶಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಿಡಿಗೇಶಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಅ.3 ರಂದು ಐ.ಡಿ.ಹಳ್ಳಿ ಬಸ್ ನಿಲ್ದಾಣದಲ್ಲಿ ತಿಪ್ಪಾಪುರ ಗ್ರಾಮದ ಮಲ್ಲಿಕಾರ್ಜುನ್ ಮತ್ತು ನರಸಿಂಹಯ್ಯ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

You may have missed