ಮಧುಗಿರಿ: ಈ ಭಾಗದ ಕೂಲಿ ಕಾರ್ಯಿಕರಿಗೆ ಮತ್ತು ರೈತರು ಪ್ರತಿ ನಿತ್ಯ ಕೃಷಿ ಚಟುವಟಿಕೆ ಹಾಗೂ ವಿಧ್ಯಾಭ್ಯಾಸಕ್ಕೆ ಗ್ರಾಮದಿಂದ ತೆರಳು ಹರಸಾಹಸ ಪಡುತಿದ್ದು ತುರ್ತಾಗಿ ಡಾಂಬರ್ ರಸ್ತೆ ನಿರ್ಮಿಸಿಕೊಡಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸೂರನಾಗೇನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸೋರನಾಗೇನಹಳ್ಳಿ-ಕಾಳೆೆÃನಹಳ್ಳಿಗೆ ಹೋಗುವ ರಸ್ತೆ ಗುಣಿಗಳು ಬಿದ್ದಿದ್ದು ಈ ರಸ್ತೆಯಲ್ಲಿ ಓಡಾಡುವ ವಾಹನಸವಾರರು, ವಿದ್ಯಾರ್ಥಿಗಳು, ರೈತ ಕೂಲಿ ಕಾರ್ಮಿಕರು ಹಾಗೂ ಹಾಲು ಉತ್ಪಾದಕರು ಡೈರಿಗೆ ಹೋಗಬೇಕಾದರೆ ಕಷ್ಟಗಳನ್ನು ಪಟಬೇಕಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಇಲ್ಲಿನ ಸಮಸ್ಯೆ ಬಗ್ಗೆ ಶಾಸಕರಾದ ಕೆ.ಎನ್ ರಾಜಣ್ಣನವರ ಗಮನಕ್ಕೆ ತಂದಿದ್ದು ಶಾಸಕರು ಸುಮಾರು 1 ಕೋಟಿ ವೆಚ್ಚದ ವಿಶೇಷ ಅನುದಾನದಡಿ 1.3 ಕಿಮಿ ರಸ್ತೆ ಡಿಪಿಆರ್ ಮಾಡಿಸಿದ್ದಾರೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಗೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ 6 ತಿಂಗಳಿಗೊಮ್ಮೆ ಕೈ ಕೊಡುತಿದ್ದು ಎರಡು ವರ್ಷಕ್ಕೊಮ್ಮೆ ದುರಸ್ಥಿ ಕಾರ್ಯಮಾಡಿಸಲಾಗುತ್ತಿದೆ ಇದರಿಂದ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಬೆದರುಬೊಂಬೆಯAತೆ ನಾಮಕವಾಸ್ತೆ ಇದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಸೂರನಾಗೇನಹಳ್ಳಿ ಗ್ರಾಮದಲ್ಲಿ 2017 ರಲ್ಲಿ ರಾಜಣ್ಣನವರು ಶಾಸಕರಾಗಿದ್ದಾಗ ಅವಧಿಯಲ್ಲಿ ಮಂಜೂರು ಮಾಡಿ ಶುದ್ಧ ನೀರಿನ ಘಟಕ ನಿರ್ಮಿಸಿಕೊಟ್ಟಿದ್ದರು. ನಂತರ 2018 ಶಾಸಕರಾಗಿದ್ದ ವೀರಭಧ್ರಯ್ಯ ಉದ್ಘಾಟನೆಗೊಳಿಸಿದ್ದು ಉದ್ಘಾಟನೆಯಾಗಿ ಎರಡು ವರ್ಷಕ್ಕೆ ಕೆಟ್ಟು ಮೊಲೆಗುಂಪಾಗಿತ್ತು. 2021 ರಲ್ಲಿ ಗ್ರಾಪಂ ಸದಸ್ಯರ ಒತ್ತಾಯ ಮೇರಗೆ ಸುಮಾರು 1 ಲಕ್ಷ ವೆಚ್ಚದಲ್ಲಿ ಗ್ರಾಪಂ ವತಿಯಿಂದ ಶುದ್ಧ ನೀರಿನ ಘಟಕದ ದುರಸ್ಥಿ ಕಾರ್ಯ ಮಾಡಲಾಗಿತ್ತು.
2021 ರಲ್ಲಿ ಕುಡಿಯುವ ನೀರು ನೈಮರ್ಲ್ಯ ಇಲಾಖೆ ಸುರ್ಪದಿಗೆ ಪಡೆದಿದ್ದು ಇದುವರೆಗೂ ಅದನ್ನು ದುರಸ್ಥಿ ಮಾಡಿಸುವ ಗೋಜಿಗೆ ಹೋಗಿಲ್ಲ ಎಂದು ಇಲ್ಲಿನ ಗಂಭೀರ ಆರೋಪ ಮಾಡಿದ್ದಾರೆ. ಇದು ನಾಮಕವಾಸ್ತೆ ಚಾಲನೆಯಲ್ಲಿದ್ದು ಇದರೊಳಗಡೆ ಕನಿಷ್ಟ ಸ್ವಚ್ಚತೆ ಇಲ್ಲ ಶುದ್ಧ ಕುಡಿಯುವ ನೀರಿನ ಘಟಕದ ತುಂಬಾ ಜೇಡರ ಬಲೆ ತುಂಬಿದೆ ಈ ಬಗ್ಗೆ ಇಲ್ಲಿನ ನಿರ್ವಾಹಕರನ್ನು ಸಂಪರ್ಕಿಸಿದರೆ ಕಳೆದರು ಎರಡು ದಿನಗಳಿಂದ ಕೆಟ್ಟಿದೆ ಗ್ರಾಪಂಗೆ ಹೇಳಿದ್ದೇವೆ ಎಂದು ಸಬೂಬು ಹೇಳುತಿದ್ದಾರೆ. ಇನ್ನಾದರೂ ಸಂಬAಧಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ಲಕ್ಷಿö್ಮನಾರಯಣ, ಆನಂದ, ಚೌಡಪ್ಪ, ನರಸಿಂಹಪ್ಪ, ರವಿ, ನಾಗರಾಜು, ನರಸಿಂಹಪ್ಪ ಎಸ್. ಸಂಜೀವಪ್ಪ, ಈಶ್ವರಪ್ಪ, ರಘು ಹಾಜರಿದ್ದರು.
More Stories
ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಕಿವಿಗೂಡಬೇಡಿ-: ಹಾಲಪ್ಪ
ಕ್ರಿಕೆಟ್ ಎಂಬುದು ಯುವ ಸಮೂಹಕ್ಕೆ ಸ್ಪೂರ್ತಿದಾಯಕ
ಕಳವು ಆರೋಪಿಗಳ ಬಂಧನ