web stats

Madhugirinews

#1NewsofMadhugiri

ಚಿರತೆ ದಾಳಿಗೆ ಕಂಗಾಲದ ರೈತರು: ದಿಕ್ಕುಪಾಲಾಗಿ ಓಡಿದ ಜನತೆ

ತುಮಕೂರು: ತುರುವೇಕೆರೆ ತಾಲೂಕಿನ ಗೋಣಿ ತುಮಕೂರು, ದೇವೀಹಳ್ಳಿ ಮತ್ತು ನಡುವನಹಳ್ಳಿಯಲ್ಲಿ ಚಿರತೆಯ ದಾಳಿ ಮಾಡಿದ್ದು 5ಕ್ಕು ಹೆಚ್ಚು ಜನರನ್ನು ಗಾಯಗೊಳಸಿರುವ ಘಟನೆ ನಡೆದಿದೆ.

ತಾಲಕೂಕಿನ ನಡುವನಹಳ್ಳಿಯ ವನಜಾಕ್ಷಮ್ಮ (43) ಎಂಬುವವರು ತಮ್ಮ ತೋಟದಲ್ಲಿ ಕೃಷಿಯಲ್ಲಿ ತೊಡಗಿದ್ದ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಕೆ` ಮತ್ತು ತೋಳನ್ನು ಕಚ್ಚಿಗಾಯಗೊಳಿಸಿದ್ದು ತಕ್ಷಣ ವನಜಾಕ್ಷಮ್ಮ ಚೀರಾಡಿಕೊಂಡಾಗ ಕೂಡಲೇ ಚಿರತೆ ಅಲ್ಲಿಂದ ಕಾಲು ಕಿತ್ತಿದೆ. ಮತ್ತೊಂದು ಕಡೆ ಹುಚ್ಚಮ್ಮ (70) ಎಂಬುವವರು ಮೇಕೆ ಮೇಯಿಸುತ್ತಿದ್ದ ವೇಳೆ ದಾಳಿ ಮಾಡಿದ ಚಿರತೆ ಹುಚ್ಚಮ್ಮರ ಕಿವಿ, ಮುಖವನ್ನು ಪರಚಿ ತೀವ್ರವಾಗಿ ಗಾಯ ಮಾಡಿದೆ. ಬೋರೇಗೌಡ (67) ಎಂಬುವವರ ಮನೆ ಬಳಿ ಬಂದ ಚಿರತೆ ಬೋರೇಗೌಡರ ಮೇಲೂ ದಾಳಿ ಮಾಡಿದೆ. ಅಲ್ಲದೇ ಅವರ ತಗಡಿನ ಶೆಡ್ ಒಳಗೆ ನುಗ್ಗಿದೆ. ಕೂಡಲೇ ಬೋರೇಗೌಡರು ಬಾಗಿಲು ಹಾಕಿದ್ದಾರೆ. ಚಿರತೆ ಸತತವಾಗಿ ದಾಳಿ ಮಾಡುತ್ತಿರುವ ಬಗ್ಗೆ ಮತ್ತು ಬೋರೇಗೌಡರ ಮನೆ ಬಳಿ ಬಂಯಾಗಿರುವ ಸುದ್ದಿ ಹರಡುತ್ತಿದ್ದಂತೆ ಮನೆ ಬಳಿ ಜನರು ಜಮಾಯಿಸಿದ್ದಾರೆ. ಜನರ ಗಲಾಟೆ ಹೆಚ್ಚುತ್ತಿದ್ದಂತೆ ಗಾಬರಿಗೊಂಡ ಚಿರತೆ ತಗಡಿನ ಬಾಗಿಲನ್ನು ನೂಕಿ ಓಡಿ ಹೋಗಿದೆ. ಆ ವೇಳೆ ಸ್ಥಳದಲ್ಲಿದ್ದ ಸಣ್ಣ ನಿಂಗಯ್ಯ (50) ಎಂಬುವವರ ಮೇಲೆ ದಾಳಿ ಮಾಡಿದೆ.
ಸ್ಥಳಕ್ಕೆ ತಹಸೀಲ್ದಾರ್ ಕುಂಇ ಅಹಮದ್, ಜಿಲ್ಲಾ ಅರಣ್ಯಾಕಾರಿ ಶಶಿ`Àರ್ ಮತ್ತು `Àರತ್ ಹಾಗು ಅರಣ್ಯ ಇಲಾಖಾ ಸಿಬ್ಬಂದಿಗಳು ದೇವಿಹಳ್ಳಿಯ ಶೇಖರಯ್ಯನವರ ಮನೆ ಬಳಿ ಬೀಡುಬಿಟ್ಟಿದ್ದಾರೆ.

You may have missed