web stats

Madhugirinews

#1NewsofMadhugiri

ಗ್ಯಾರೆಂಟಿ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಸಭೆ

ಮಧುಗಿರಿ: ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನೀಡುವ ಆಹಾರ ವಿತರಣೆಯಲ್ಲಿ ಹಗಲು ದರೋಡೆಯಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೌಡಪ್ಪ ತಿಳಿಸಿದರು.

ತಾ.ಪಂ ಸಭಾಂಗಣಾದಲ್ಲಿ ಆಯೋಜಿಸಲಾಗಿದ್ದ ಗ್ಯಾರೆಂಟಿ ಯೋಜನೆಗಳ ಪ್ರಗತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಐಡಿಹಳ್ಳಿ ಹೋಬಳಿಯ ಕಾಮಗೊಂಡನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಖಳಿಲ್ಲ ಅದರೂ ಅವರ ಹೆಸರಿನಲ್ಲಿ ಸರಿಯಾಗಿ ಪೌಷ್ಟಿಕ ಆಹಾರ ವಿತರಣೆಯಾಗುತ್ತಿಲ್ಲ. ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸುವ ಪೌಷ್ಟಿಕಾಹಾರಗಳ ಬಗ್ಗೆ ಮಾಹಿತಿಯ ನಾಮಫಲಕವನ್ನು ಅಳವಡಿಸಿಬೇಕು ಎಂದು ಒತ್ತಾಯಿಸಿದರು.

ಸದಸ್ಯ ವಿ.ಆರ್ ಭಾಸ್ಕರ್ ಮಾತನಾಡಿ ಕೆಲ ಅಂಗನವಾಡಿಗಳಲ್ಲಿ ಎಸ್ಸಿಎಸ್ಟಿ ಸಮುದಾಯಗಳ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ ಹಾಗೂ ಇದೇ ಸಮುದಾಯಗಳ ಬಾಣಂತಿಯರಿಗೆ ಪೌಷ್ಟಿಕಾಹಾರವನ್ನು ಅಂಗನವಾಡಿ ಸಹಾಯಕಿಯರು ಮನೆಯ ಬಳಿಗೆ ತಂದು ಕೊಡುತ್ತೇವೆಂದು ಹೇಳಿ ಆಹಾರ ಪದಾರ್ಥಗಳನ್ನು ತಲುಪಿಸುತ್ತಿಲ್ಲಾ ಎಂದರು.

ಕೆಎಸ್‌ಆರ್‌ಟಿ ಘಟಕಾಧಿಕಾರಿ ಮಾತನಾಡಿ 1 ಕೋಟಿ 43 ಲಕ್ಷದ 2874 ಮಹಿಳೆಯರು ಬಸ್ ಪ್ರಯಾಣಿಸಿದ್ದು ಸರ್ಕಾರದ ವತಿಯಿಂದ 40 ಕೋಟಿ 74 ಲಕ್ಷ 1981 ರೂಗಳನ್ನು ಪಾವತಿಸಲಾಗಿದೆ ಎಂದರು. ಸದಸ್ಯ ಜೆಡಿ ವೆಂಕಟೇಶ್ ಮಾತನಾಡಿ ಅಂಗವಾಡಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅಧಿಕಾರಿಗಳು ಸಭೆಗೆ ಬರುವುದು ಬೇಡಾ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಬೆಸ್ಕಾAನ ಎಇಇ ಮಾತನಾಡಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 72 ಸಾವಿರದ 190 ಜನರು ನೊಂದಾಯಿಸಿ ಕೊಂಡಿದ್ದು ಇವರಲ್ಲಿ69ಸಾವಿರದ 738 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದ್ದು 38 ಕೋಟಿ 81 ಲಕ್ಷ ರೂಗಳು ಇಲಾಖೆಗೆ ಸಂದಾಯವಾಗಿದೆ ಎಂದರು. ಯುವನಿಧಿ ಯೋಜನೆಯಡಿಯಲ್ಲಿ 829 ವಿದ್ಯಾರ್ಥಿಗಳು ನೊಂದಾಯಿಸಿಕೊAಡಿದ್ದು 1ಕೋಟಿ 75 ಲಕ್ಷದ 80ರೂಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಅರುಣ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ನಾಗರೀಕ ಮತ್ತು ಆಹಾರ ಸರಬರಾಜು ಇಲಾಖೆಯ ನಸ್ರುದ್ದೀನ್, ತಾ.ಪಂ ಎಡಿಓ ಮಧುಸೂಧನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಜಯಲಕ್ಷ್ಮೀ, ಜಯಕುಮಾರ್, ರವಿತೇಜ, ಜಬೀವುಲ್ಲಾ, ತಿಮ್ಮಾರೆಡ್ಡಿ, ಹರ್ಷ, ಮಹಮದ್ ಜಿಲಾನ್ ಹಾಜರಿದ್ದರು.

You may have missed