
ತುಮಕೂರು: ಹಣಕ್ಕಾಗಿ ಮಕ್ಕಳನ್ನು ಹತ್ಯೆಗೈದ ಡಾ.ಮುರಳಿಗೆ ಶಿಕ್ಷೆ ಯಾವಾಗ..? ಎಂದು ಪಟ್ಟಣದಲ್ಲಿ ಫೋಸ್ಟರ್ ತುರುವೇಕೆರೆ ಪಟ್ಟಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ತುರುವೇಕೆರೆ ಪಟ್ಟಣದ ಓಂಕಾರ ಖಾಸಗಿ ಆಸ್ಪ÷ತ್ರೆಯಲ್ಲಿ ನವಜಾತು ಶಿಶು ಸಾವನ್ನಪ್ಪಿದ್ದು ಇದಕ್ಕೆ ನೇರವಾಗಿ ಆಸ್ಪತ್ರೆಯ ಮಾಲೀಕ ಮತ್ತು ವೆ`ದ್ಯ ಡಾ.ಮುರಳಿ ನೇರ ಹೊಣೆ ಎಂದು ಆರೋಪಿಸಿ ಮೃತ ಕುಟುಂಬ ಆಸ್ಪತ್ರೆ ಎದುರು ಪ್ರತಿಟಿಸಿದರು.
ಪಟ್ಟಣದ ಓಂಕಾರ ಆಸ್ಪತ್ರೆಯಲ್ಲಿ ಕಳೆದ ಎಂಟು ತಿಂಗಳಿAದ ತಾಲೂಕಿನ ಮುನಿಯೂರು ಗ್ರಾಮದ ಪೃಥ್ವಿ(26) ರನ್ನು ಹೆರಿಗೆ ಸಲುವಾಗಿ ತಪಾಸಣೆ ಮಾಡಿಸುತ್ತಿದ್ದರು, ಕಳೆದ ಬುಧವಾರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆಯ ಪರಿಸ್ಥಿತಿ ಗಂಭೀರವಾಗುತ್ತಿದ್ದAತೆ ಕೂಡಲೇ ಉನ್ನತ ಆಸ್ಪತ್ರೆಗೆ ದಾಖಲಿಸಬೇಕೆಂದು ಸೂಚನೆ ನೀಡಿದ್ದರು. ಪೋಷಕರು ಆಂಬುಲೆನ್ಸ್ ಮೂಲಕ ತಿಪಟೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಹೆರಿಗೆ ಸುಸೂತ್ರವಾಗಿ ನಡೆದು ಗಂಡು ಮಗುವು ಜನ್ಮವಿತ್ತಿತ್ತು. ಆದರೆ ಮಗುವಿನ ಆರೋಗ್ಯ ಸರಿಯಿಲ್ಲದ ಕಾರಣ ಉನ್ನತ ದರ್ಜೆಯ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಘಟಕದಲ್ಲಿ ಮಗುವನ್ನು ಇರಿಸಿದ್ದರು. ಆದರೆ ಮಗುವಿನ ಆರೋಗ್ಯ ಸು`Áರಣೆ ಕಾಣದೆ ಕೊನೆಯುಸಿರೆಳೆದಿದೆ ಇದಕ್ಕೆಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮುರಳಿ ನೇರ ಹೊಣೆ, ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ತಮ್ಮ ಖಾಸಗಿ ಆಸ್ಪತ್ರೆಗೆ ದಾಖಲಿಸಿಕೊಂಡು ಬೇಕಾ ಬಿಟ್ಟಿ ಚಿಕಿತ್ಸೆ ಕೊಟ್ಟು ಹಣ ವಸೂಲಿ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು