web stats

Madhugirinews

#1NewsofMadhugiri

ಸಾವಿನ ಕುಣಿಕೆಯಾದ ದಬ್ಬೆಘಟ್ಟ-ತಿಪಟೂರು ಸರ್ಕಲ್

ತುಮಕೂರು: ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ಮತ್ತು ತಿಪಟೂರು ಸರ್ಕಲ್ ಬಳಿ ಮಂಗಳವಾರ ಮುಂಜಾನೆ ತಿಪಟೂರು- ಮೈಸೂರು ಮಾರ್ಗದ ಕೆಎಸ್ಸಾರ್ಟಿಸಿ ಬಸ್ ಹಾಲಿನ ವಾಹನಕ್ಕೆ ಡಿಕ್ಕಿ ಒಡೆದ ರಭಸಕ್ಕೆ ಹಾಲಿನ ವಾಹನ ಸಾರ್ವಜನಿಕ ಪಾರ್ಕಿಂಗ್ ಪೋಲ್‌ಗಳ ಮೇಲೆ ಹಾರಿ ಹೋಟೆಲ್ ಬಾಗಿಲಿಗೆ ನುಗ್ಗಿದ ಘಟನೆ ನಡೆದಿದೆ.

ಪಟೂರು-ಮೈಸೂರು ಮಾರ್ಗದ ಕೆಎಸ್ಸಾರ್ಟಿಸಿ ಬಸ್ ಮತ್ತು ಟಾಟಾ ಎಸಿ ಹಾಲಿನ ವಾಹನ ಎರಡು ವೇಗದಲ್ಲಿದ್ದು ದಬ್ಬೇಘಟ್ಟ-ತಿಪಟೂರು ಸರ್ಕಲ್ ತಿರುವಿನಲ್ಲಿ ವೇಗದ ಬಸ್‌ನ ಡಿಕ್ಕಿಗೆ ಹಾಲಿನ ವಾಹನ ಸಾರ್ವಜನಿಕ ದ್ವಿಚಕ್ರ ವಾಹನ ನಿಲುಗಡೆ ಪೋಲ್‌ಗಳ ಮೇಲೆ ಸಿನಿಮಿಯಾ ರೀತಿಯಲ್ಲಿ ಹಾರಿ ಗುರುರಾಘವೇಂದ್ರ ಹೋಟೆಲ್ ಬಳಿ ನುಗ್ಗಿದ್ದು ಅಲ್ಲಿಯೇ ಕುಳಿತಿದ್ದ ನಾಗರೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನೊಣವಿನಕೆರೆಯಿಂದ ಹಾಲನ್ನು ಡೆ`ರಿಗೆ ಹಾಕಿ ಹಿಂತಿರುಗುವಾಗ ಈ ಅವಘಡ ಸಂಭವಿಸಿದೆ.

ತಾಲೂಕಿನ ದುಂಡ ಗ್ರಾಮದ ಹಾಲಿನ ವಾಹನ ಚಾಲಕನ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸದ್ಯ ಅವರು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೆ ತುರುವೇಕೆರೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may have missed