
ಮಧುಗಿರಿ: ಸಹಕಾರ ಸಂಘದಲ್ಲಿ ಬ್ಲಾಕ್ ತೆರವು ಮಾಡಲು ಲಂಚ ಪಡೆಯುತಿದ್ದ ವೇಳೆ ಸಹಕಾರ ಸಂಘಗಳ ಉಪ ನಿಬಂದಕರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೋಲೀಸರು ವಶಕ್ಕೆ ಪಡೆದಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮಧುಗಿರಿ ಉಪ ವಿಭಾಘದ ಸಹಕಾರ ಸಂಘಗಳ ಉಪನಿಬಂದಕರ ಕಚೇರಿಯ ಉಪ ನಿಬಂಧಕ ಸಣ್ಣಪಯ್ಯ ಮತ್ತು ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಬಂದಿತ ಆರೋಪಿಗಳಾಗಿದ್ದಾರೆ.
ಶಿರಾ ತಾಲೂಕಿನ ಎಲೆಯೂರು ಗ್ರಾಮದ ಮೀನುಗಾರಿಕೆ ಸಹಕಾರ ಸಂಘದ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು, ಈ ಖಾತೆಯ ಬ್ಲಾಕ್ ಅನ್ನು ತೆರವುಗೊಳಿಸಲು ಅಧಿಕಾರಿಗಳು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ವಿಚಾರವಾಗಿ ಮೀನುಗಾರಿಕೆ ಸಂಘದ ಅಧ್ಯಕ್ಷ ರವೀಶ್ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಮೇಗರೆ ಸೋಮವಾರ ದಾಳಿ ನಡೆಸಿದ ಲೋಕಾಯುಕ್ತರು ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ.ಎ.ವಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ್ ನೇತೃತ್ವದಲ್ಲಿ ಇನ್ ಪೆಕ್ಟರ್ ಗಳಾದ ರಾಜು, ಸಲೀಂ, ಸುರೇಶ್, ಶಿವ ರುದ್ದಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು