web stats

Madhugirinews

#1NewsofMadhugiri

ಎರಡು ಕಾರುಗಳು ಮುಖಾಮುಖಿ ಡಿಕ್ಕಿ 5 ಜನರಿಗೆ ಗಾಯ

ಮಧುಗಿರಿ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒರ್ವನಿಗೆ ಸೊಂಟ ಮುರಿದ್ದು ಮತ್ತೊಬ್ಬನಿಗೆ ಕಾಲು ಮುರಿದ್ದು ಒಟ್ಟು 5 ಜನರಿಗೆ ಗಂಭೀರಗಾಯಗಳಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗೇಟ್ ಸಮೀಪದಲ್ಲಿ ಎರಡು ಕಾರುಗಳು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೆಂಗಳೂರು ಮೂಲದ ಮಂಜುನಾಥ್ ಎಂಬಾತನಿಗೆ ಕಾಲು ಗಂಭೀರ ಗಾಯವಾಗಿದ್ದು ಉಳಿದ ಗಣೇಶ್, ಮದುಸೂಧನ್, ಜನಾರ್ಧನ್, ಗೋವಿಂದಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಹಿಂದೂಪುರಕ್ಕೆ ರವಾನಿಸಿದ್ದು ವೈದ್ಯರ ಸಲಹೆ ಮೇರೆಗೆ ಗಾಯಾಳುಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ ಸ್ಥಳಕ್ಕೆ ಪಿಎಸೈ ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may have missed