
ಮಧುಗಿರಿ: ಸಮಾಜದ ಹಿರಿಯರು ಸೇರಿದಂತೆ ಸರ್ವರು ಒಮ್ಮತದಿಂದ 4ನೇ ಬಾರಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದು ಎಂದು ಜಾಮೀಯ ಮಸ್ಜಿದ್ ಅಹ್ಲೆ ಸುನ್ನತ್ ಉಲ್ ಜಮಾತ್ ಅಧ್ಯಕ್ಷ ಶಾಮೀರ್ ಅಹಮದ್ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿಯ ಜಾಮೀಯ ಮಸ್ಜಿದ್ ಅಹ್ಲೆ ಸುನ್ನತ್ ಉಲ್ ಜಮಾತ್ ಆವರಣದಲ್ಲಿ ಶುಕ್ರವಾರ 3 ವರ್ಷದ ಅವಧಿಗೆ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು ಮಸೀದಿಯ ಅಭಿವೃದ್ಧಿ ಕಾರ್ಯ ನಡೆಯುತಿದ್ದು ಜತೆಗೆ ಶಾದಿ ಮಹಲ್ ಕಾಮಗಾರಿಯು ಅಪೂರ್ಣವಾಗಿದೆ. ಸಮಾಜದ ಒತ್ತಾಯದ ಮೇರೆಗೆ ಮರು ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ಅಭಾರಿಯಾಗಿದ್ದೇವೆ. ಸಮಾಜ ನಂಬಿಕೆಯAತೆ ಮಸೀದಿ ಹಾಗೂ ಶಾದಿಮಹಲ್ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಕಮಿಟಿಯ ಗುರಿಯಾಗಿದೆ ಎಂದರು.
ಯಾವುದೆ ಪಕ್ಷ, ಗುಂಪುಗಾರಿಕೆ ಇಲ್ಲದೆ ಕಮಿಟಿಯ ಸದಸ್ಯರ ವಿಶ್ವಾಸದೊಂದಿದೆ ಸಮುದಾಯಕ್ಕೆ ಅನುಕೂಲವಾಗುವಂತೆ ಮಸೀದಿ, ಮದರಸಾ ಹಾಗೂ ಶಾದಿ ಮಹಲ್ ಕಾಮಗಾರಿಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಾಮೀಯ ಮಸ್ಜಿದ್ ಅಹ್ಲೆ ಸುನ್ನತ್ ಉಲ್ ಜಮಾತ್ ಕಾರ್ಯದರ್ಶಿ ಜಬೀಉಲ್ಲಾ, ವಕ್ಫ್ ಬೋರ್ಡ್ ಅಧಿಕಾರಿಗಳಾದ ಫಾಜಿಲ್, ಇಮ್ರಾನ್, ಪದಾಧಿಕಾರಿಗಳಾದ ರಹಮಾನ್ ಖಾನ್, ದುರ್ವೇಶ್ ನೂರೂದ್ದೀನ್, ಸಿರಾಜ್ ಅಹಮದ್ ಕೆ.ಎ, ದಿಲ್ದಾರ್ ಅಹಮದ್, ಅತಾವುಲ್ಲಾ, ಸೈಯದ್ ನಯಾಜ್, ಅಮಾನುಲ್ಲಾ, ಕೆ.ಪಿ ಸಾಧಿಕ್, ಮಕ್ತಿಯಾರ್, ನಬೀಸಾಬ್, ಉಬೇದುಲ್ಲಾ, ಮುಜಾಹಿದ್, ಸೈಯದ್ ನಾಸೀರ್ ಉದ್ದೀನ್, ಬಾಬು ಸೇರಿದಂತೆ ಇನ್ನೀತರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸೈಯದ್ ಗೌಸ್, ಹಿರಿಯ ಮುಖಂಡರಾದ ಕೆ.ಪಿ ಶಫೀಉಲ್ಲಾ, ನಾಯಬ್ ಗಫೂರ್ ಸಾಬ್, ಕೆ.ಎಚ್ ಖಾಸೀಂ ಸಾಬ್, ಜಬ್ಬಾರ್ ಸಾಬ್, ಕೆ.ಎಸ್ ನಾಸೀರ್ ಅಹಮದ್, ಕೆ.ಪಿ ಸೈಫುಲ್ಲಾ ಅಲ್ಲಾಬಕಷ್, ಎಸ್.ಎನ್ ರಫೀಕ್ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು