
ಮಧುಗಿರಿ: ಕ್ಷೇತ್ರದಲ್ಲಿ ದೌರ್ಜನ್ಯ ದಬ್ಬಾಳಿಕೆ ನಡೆಯುತಿದ್ದು ಅಭಿವೃಧ್ದಿ ಮರೀಚಿಕೆಯಾಗಿದೆ ಎಂದಲಪ್ಪ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ ಏನೆಲ್ಲ ಅಭಿವೃದ್ಧಿ ಅಗಿದೆ ಎಂದು ಕ್ಷೇತ್ರದ ಜನತೆ ಹೇಳುತ್ತಾರೆ, ನಿಮ್ಮೆ ಜೆಡಿಎಸ್ ಪಕ್ಷದವರಿಗೆ ಕೆಲಸ ಕೊಟ್ಟಿದ್ದೇನೆ. ಜಾತಿ ಪಕ್ಷ ಎನ್ನದೆ ಅಭಿವೃದ್ದಿಯಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಗೆ ವಿ.ಪ ಸದಸ್ಯ ಆರ್ ರಾಜೇಂದ್ರ ಟಾಂಗ್ ನೀಡಿದರು.
ಪಟ್ಟಣದ ಉಪ ವಿಭಾಗಧಿಕಾರಿಗಳ ಕಚೇರಿ ಮುಂಭಾಗ ಸುಮಾರು 25 ಕೋಟಿ ಎಸ್‌ಎಫ್‌ಸಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಜೆಡಿಎಸ್ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಮಧುಗಿರಿಯಲ್ಲಿ ದೌರ್ಜನ್ಯ ದಬ್ಬಾಳಿಕೆ ನಡೆಯುತಿದ್ದು ಹೆಚ್ಚು ದಿನ ನಡೆಯುತ್ತಿಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೆಸರು ಹೇಳದೆ ಪರೋಕ್ಷವಾಗಿ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿದ್ದರು. ನಿಖಿಲ್ ಟೂರಿಂಗ್ ಟಾಕೀಸ್ ಇದ್ದಂಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ ಸುಮ್ಮನೆ ಜಾಗ ಇದೆ ಎಂದು ಇರೂಬರೋ ಕ್ಷೇತ್ರಗಳಿಗೆ ಯಾಕೆ ತಿರುಗಾಡುತ್ತೀರಿ ನಿಮ್ಮ ತಂದೆ ಸಿಎಂ ಆಗಿದ್ದ ವೇಳೆ ನೀನು ಸೊತಿದ್ದೆ, ನೀನು ಸೋತಿರುವ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ಎದುರಿಸು ಅದೂ ಬಿಟ್ಟು ಮಧುಗಿರಿಗೆ ಬಂದು, ನಮ್ಮ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.
ಪಟ್ಟಣದಲ್ಲಿ ಸುಮಾರು 25 ಕೋಟಿ ಎಸ್‌ಎಫ್‌ಸಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿದ್ದು ತಾಲೂಕಿನಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳು ಪ್ರಾರಂಭವಾಗಿವೆ ಜೂ 28ರಂದು ಮಖ್ಯಮಂತ್ರಿಗಳು ಪಟ್ಟಣಕ್ಕೆ ಆಗಮಿಸಬೇಕಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.
ಬAದಿರುವ ಅನುದಾನದ ಸುಮಾರು 900 ಕೋಟಿ ಹಣ ವಾಪಸ್ಸು ಆಗಿದೆ ಎಂದು ಉಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ. ಯಾವುದೆ ಅನುದಾನ ಸರಕಾರ ವಾಪಸ್ ಪಡೆದುಕೊಂಡಿಲ್ಲ ಅದೇ ಅನುದಾನದಲ್ಲಿ ಇಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಧುಗಿರಿ ಕ್ಷೇತ್ರವನ್ನು ಕಂದಾಯ ಜಿಲ್ಲೆಯನ್ನಾಗಿಸುವುದು ಹಾಗೂ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಲಾಗುವುದು ಕೇಬಲ್ ಕಾರ್ ಟೆಂಡರ್ ಪ್ರಸ್ತಾಪನೆಗೆ ಬಂದಿದೆ. 4.9 ಕೋಟಿ ವೆಚ್ಚದಲ್ಲಿ ಕೊಡಿಗೇನಹಳ್ಳಿ ಮುದ್ದೆ ನಹಳ್ಳಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ ಮಧುಗಿರಿಯ ಅಭಿವದ್ಧಿ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿರುವ ಸಚಿವರು ಶೀಘ್ರದಲ್ಲೇ
ಕೇಬಲ್ ಕಾರ್ ಕಾಮಗಾರಿ ಚಾಲನೆ ನೀಡಲಿದ್ದು ಇನ್ನೂ ಒಂದು ವರ್ಷದಲ್ಲಿ ಮಧುಗಿರಿ ಚಿತ್ರಣ ಬದಲಾಗಲಿದೆ ಎಂದರು. ಶಾಲಾ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳ ಪರವಾಗಿ ನಾವೆಲ್ಲರೂ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ, ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶ್ಯಾಮಣ್ಣ, ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಮಾಜಿ ಅಧ್ಯಕ್ಷರಾದ ಗಂಗಣ್ಣ, ಕೆ.ಪ್ರಕಾಶ್, ಮಹಮದ್ ಅಯ್ಯೂಬ್, ಸದಸ್ಯರಾದ ನಾಗಲತಾ ಲೋಕೇಶ್, ನಟರಾಜು, ಮುಖಂಡರಾದ ಕಿಶೋರ್, ಷಾಜು, ಆನಂದಕೃಷ್ಣ, ಇಇ ನಾಗರಾಜುರಾವ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಕಾರ್ಮಿಕ ಅಧಿಕಾರಿ ಶ್ರೀಕಾಂತ್, ಯೋಜನಾಧಿಕಾರಿ ರವಿಕುಮಾರ್ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು